ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಯಾವದು ಅಸಾಧ್ಯ ಇಲ್ಲ : ಸುಧಾ ಮೂರ್ತಿ

Hasiru Kranti
WhatsApp Group Join Now
Telegram Group Join Now

ಸಂಕೇಶ್ವರ : ಪ್ರತಿಯೊಬ್ಬ ವಿದ್ಯಾರ್ಥಿಗೆ ಪರಿಶ್ರಮ ಅತಿವಶ್ಯಕ. ಜೀವನದಲ್ಲಿ ಕಷ್ಟಪಟ್ಟರೆ ಯಾವದು ಅಸಾಧ್ಯ ಇಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಣ ಕಲಿಯುವ ಕಾಲದಲ್ಲಿ ಕಲಿಯದೆ ಹೋದರೆ ಕಷ್ಟ ಕಟ್ಟಿಟ್ಟ ಬುತ್ತಿ. ಹಾರ್ಡ್ ಕೆಲಸ ಮಾಡಿದರೆನೆ ಮುಂದೆ ಯಶಸ್ಸಿನ ಏಣಿ ಹತ್ತಲು ಸಾಧ್ಯ ಎಂದು ಸಂಸದೆ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷ, ಪದ್ಮಭೂಷಣ ಸುಧಾ ಮೂರ್ತಿ ಅವರು ಹೇಳಿದರು.

ಕೆಎಲ್.ಇ ಸಂಸ್ಥೆಯ ಸಿಬಿಎಸ್.ಇ ಶಾಲೆಯ ನೂತನ ಕಟ್ಟಡ ಹಾಗೂ ಶಾಲೆಗೆ ಮಾಲುತಾಯಿ ಶಿವಪುತ್ರ ಶಿರಕೋಳಿ ನಾಮಕರಣ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿದ್ಯ ನೀಡಿದ ಸಂಸ್ಥೆ ಯಾರು ಮರಿಬಾರದು ಅದು ನನ್ನ ಸಂಸ್ಥೆ ಅನ್ನುವದು ಮರೆಯಬಾರದು, ನಾನು ಕಲೆತ ಶಾಲೆಯನ್ನು ಎಂದಿಗೂ ಮರೆಯಲ್ಲ. ಅದು ನನ್ನ ತವರುಮನೆ ಇದ್ದ ಹಾಗೆ. ಕಲಿತ ಸಂಸ್ಥೆ ಮರೆಯದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಾವು ಕಲಿತು‌ ಮುಂದೆ ಒಂದು ಮಟ್ಟದಲ್ಲಿ ಇದ್ದಾಗ ದುಡಿಮೆಯ ಒಂದು ಪ್ರತಿಶತದಷ್ಟು ದಾನ ಶಾಲೆಗೆ ನೀಡುವದಾಗಬೇಕು.

ಕೆಎಲ್ ಇ ಸಂಸ್ಥೆಯ ಭೂಮರೆಡ್ಡಿ ಕಾಲೇಜು ಇರುತಿರಲಿಲ್ಲ ಅಂದರೆ ನಾನು ಈ ಮಟ್ಟದಲ್ಲು ನಿಲ್ಲುತಿರಲಿಲ್ಲ. ಆ ಕಾಲೇಜು ಇರಲಿಲ್ಲ ಅಂದರೆ ನಾನು ಇಂಜಿನಿಯರ್ ಆಗುತ್ತಿರಲಿಲ್ಲ. ನಾನು ಕೆಎಲ್ ಇ ಸ್ಥಾಪಿಸಿದ ಋಷಿಗಳಿಗೆ ತಲೆಬಾಗುವೆ ಎಂದರು.

ವಿದ್ಯಾರ್ಥಿಗಳು ಪದವಿ ಮುಗಿದ ಮೇಲೆ ಕೊಟ್ಟ ಕೆಲಸ ಸರಿಯಾಗಿ ನಿರ್ವಹಿಸಿದರೆ ಮಾತ್ರ ಜೀವನ ಸಾರ್ಥಕವಾಗುವದು. ಹಸಿದರೆ ಯಾರೊ ಅನ್ನ ಕೊಡತಾರೆ. ನೀರು ಕೊಡತಾರೆ ಆದರೆ ಯಾವದು ನಮಗೆ ಹಿತ ಅಲ್ಲ. ನಮ್ಮ ಹೆಜ್ಜೆ ಮೇಲೆ ನಾವಿದ್ದರೆ ಸಾಕು. ಒಳ್ಳೆಯ ಮೆಟ್ಟಿಲು ಹತ್ತುವಾಗ ಪೇಲ್ವರ್ ಇದ್ದೆ ಇರುತ್ತವೆ. ಶಿಕ್ಷಕರು, ಹಿರಿಯರು ಹೇಳಿದ ಮಾತು ಯಾವತ್ತು ನಿರ್ಲಕ್ಷ್ಯ ಮಾಡದೆ ಅರ್ಥ‌ಮಾಡಿಕೊಂಡು ಹೋಗಬೇಕು. ಗುರು ಹಿರಿಯರು ಹೇಳಿದ ಮಾರ್ಗದಲ್ಲಿ ಸಾಗಿದರೆ ನಿಮಗೆ ಉತ್ತಮ ಭವಿಷ್ಯ ಬರುತ್ತದೆ. ವಿದ್ಯೆ ದಾನಕ್ಕಾಗಿ ಜಮೀನು ನೀಡಿರುವ ಶಿರಕೋಳಿ ಕುಟುಂಬದ ಕಾರ್ಯ ಶ್ಲಾಘಿಸಿದರು.

ನಿಡಸೋಸಿಯ ಶಿವಲಿಂಗೇಶ್ವರ ಶ್ರೀಗಳು ಆರ್ಶಿವಚನ ನೀಡಿ, ಈ ಹಿಂದೆ ಶಿಕ್ಷಣ ಪಡೆಯಲು ಪೂರ್ವಜ್ಜರು ಪುಣೆ ಮುಂಬಯಿನಂತಹ ನಗರಗಳಿಗೆ ತೆರಳುತ್ತಿದ್ದರು. ಆದರೆ ಕತ್ತಲೆ ಇದ್ದ ನಾಡಿನಲ್ಲಿ ಹಳ್ಳಿಯಿಂದ ದಿಲ್ಲಿ ವರೆಗೆ ದಿಲ್ಲಿಯಿಂದ ಹೊರದೇಶದ ವರೆಗೆ ಕೆಎಲ್ ಇ ಸಂಸ್ಥೆ ಕಾರ್ಯ ಮಾಡಿದೆ. ಇಂತಹ ಸಂಸ್ಥೆ ಬೆಳೆಯಲು ಮಠಮಾನ್ಯಗಳು, ಸಪ್ತ ಋಷಿಗಳು ಶ್ರಮ ಪಟ್ಟಿದ್ದಾರೆ ಎಂದರು. ಶಿರಕೋಳಿ‌ ಕುಟುಂಬದ ದಾನರೂಪದ ಕಾರ್ಯಗಳ‌ ಕುರಿತು ಬೆಳಕು ಚೆಲ್ಲಿದರು.

ಪ್ರಾಸ್ತಾವಿಕವಾಗಿ ಕೆಎಲ್ ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ಕೆಎಲ್ ಇ ಸಂಸ್ಥೆ ಸ್ಥಾಪಿಸಲು ಸಪ್ತ ಋಷಿಗಳು ಪಟ್ಟ ಶ್ರಮ ಸಂಕಷ್ಟ ಹಾಗೂ ಕೆಎಲ್ ಇ ಸಂಸ್ಥೆ ನಡೆದು ಬಂದ ದಾರಿಯ ಕುರಿತು ವಿವರಿಸಿದರು. ಇಲ್ಲಿ ಪ್ರಾರಂಬವಾದ 310ನೇ ಸಂಸ್ಥೆ ಇದಾಗಿದೆ. ಇಲ್ಲಿ ಉನ್ನತ್ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ. ಲಿಂಗರಾಜ್ ಮಹಾರಾಜರು, ಭೂಮರೆಡ್ಡಿ, ಹೀಗೆ ಹಲವು ಮಹಾನರು ಈ ಸಂಸ್ಥೆಗೆ ತಮ್ಮ ದಾರೆಯನ್ನು ಎರೆದಿದ್ದಾರೆ.

ಸದ್ಯ 4500 ಹಾಸಿಗೆಯ ಆಸ್ಪತ್ರೆ ನಡೆಸುತ್ತಾ ಇದ್ದೇವೆ. ಮುಂಬರುವ ಮೂರು ತಿಂಗಳಲ್ಲಿ 350 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ಕೆಎಲ್ ಇ ಸಂಸ್ಥೆ ಪ್ರಾರಂಭಿಸಲಿದ್ದೇವೆ. ಲಿಂಗರಾಜ್ ರ ಹಾಗೂ ಭೂಮರೆಡ್ಡಿ ದಾನಿಗಳ ಪಟ್ಟಿಯಲ್ಲಿ ದಾನಿ ಅಪ್ಪಾಸಾಹೇಬ ಶಿರಕೋಳಿ ಸೇರಿದ್ದಾರೆ. ಅವರು ಈ ಶಾಲೆ ಪ್ರಾರಂಭಿಸಲು 5 ಎಕರೆ ಜಮೀನು ದಾನರೂಪದಲ್ಲಿ ನೀಡಿದ್ದಾರೆ ಎಂದರು. ಮುಂಬಯಿಯಲ್ಲಿ 3 ಎಕರೆಯಲ್ಲಿ 22 ಕೋಟಿ ಖರ್ಚಿನಲ್ಲಿ ಶಾಲೆ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸಲಾಗುವದು ಎಂದರು.

ಕೆಎಲ್ ಇ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, 1966ರಲ್ಲ ಪ್ರಾರಂಬವಾದ ಕೆಎಲ್ ಇ ಸಂಸ್ಥೆ ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಮಾಡಿದೆ. ಈ ಭಾಗದಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಜಮೀನು ದಾನ ನೀಡಿರುವ ಶರಕೋಳಿ ಕುಟುಂಬದ ಸೇವೆ ಶ್ಲಾಘಿಸಿದರು.

ಶಾಸಕ ನಿಖಿಲ್ ಕತ್ತಿ ಮಾತನಾಡಿ, ಅಪ್ಪಾಸಾಹೇಬ ಶಿರಕೋಳಿ ಅವರು ಶಿಕ್ಷಣಕ್ಕೆ ನೀಡಿದ ದಾನವನ್ನು ಕೊಂಡಾಡಿದರು. ಈ ಭಾಗದಲ್ಲಿ ಒಳ್ಳೆಯ ಶಿಕ್ಷಕರನ್ನು ನೀಡಿ ಮಕ್ಕಳ ಭವಿಷ್ಯಕ್ಕಾಗಿ ಸಹಕರಿಸಿ ಎಂದು ಕೆಎಲ್ ಇ ಆಡಳಿತ ಮಂಡಳಿಗೆ ಸಲಹೆ ನೀಡಿದರು.

ಇದೇ ವೇಳೆ ಇತ್ತೀಚೆಗೆ ಸಂಸದೆಯಾಗಿ ಆಯ್ಕೆಯಾಗಿರುವ ಸುಧಾ ಮೂರ್ತಿ ಹಾಗೂ ದಾನಿಗಳಾದ ಶಿರಕೋಳಿ ಕುಟುಂಬವನ್ನು ಸತ್ಕರಿಸಲಾಯಿತು.

ಸಮಾರಂಭದಲ್ಲಿ ನಿಡಸೋಸಿ ಮಠದ ಶಿವಲಿಂಗೇಶ್ವರ ಶ್ರೀಗಳು, ಕೆಎಲ್ ಇ ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ನಿಖಿಲ್ ಕತ್ತಿ, ರಾಹುಲ್ ಜಾರಕಿಹೊಳಿ, ಅಪ್ಪಾಸಾಹೇಬ ಶಿರಕೋಳಿ ಕುಟುಂಬಸ್ಥರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article