ಪ್ರತಿಶತ ಮತದಾನ ವಾಗ್ದಾನಕ್ಕೆ ಕೈಜೋಡಿಸಲಿ: ನಾಮದೇವ ಲಮಾಣಿ

Ravi Talawar
WhatsApp Group Join Now
Telegram Group Join Now

ರನ್ನ ಬೆಳಗಲಿ: ಏ.25., ಪಟ್ಟಣದ ಪಂಚಾಯತ್ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಧೋಳ ಹಾಗೂ ಪಟ್ಟಣ ಪಂಚಾಯತ ಕಾರ್ಯಾಲಯ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಜರಗಿತು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ನಾಮದೇವ ಲಮಾಣಿ ರವರು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು &quoಣ;ಪ್ರತಿಶತ ಮತದಾನ ರನ್ನ ಬೆಳಗಲಿ ಪಟ್ಟಣದ ವಾಗ್ದಾನ&quoಣ;ಕ್ಕೆ ಕೈಜೋಡಿಸಲಿ ಎಂದು ಹೇಳುವುದರೊಂದಿಗೆ ತಮ್ಮ ನೆರೆಹೊರೆಯ ಕುಟುಂಬದ ಎಲ್ಲಾ ೧೮ ವರ್ಷ ಮೇಲ್ಪಟ್ಟ ನಿವಾಸಿಗಳಿಗೆ ಮತದಾನ ಜಾಗೃತಿ ಕರಪತ್ರ ನೀಡಿ, ಪ್ರಜಾಪ್ರಭುತ್ವದ ಶಕ್ತಿಯೇ ಮತದಾನ ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಅವರಲ್ಲಿ ಅರಿವನ್ನು ಮೂಡಿಸಬೇಕು. ಏಕೆಂದರೆ ಪ್ರತಿಯೊಂದು ಮತವು ಭಾರತೀಯ ನಾಗರಿಕನ ಅಮೂಲ್ಯ ಆಸ್ತಿ ಆ ಅಮೂಲ್ಯವಾದ ಆಸ್ತಿಯನ್ನು ಮಾರಿಕೊಳ್ಳದೆ, ಸ್ವಾಭಿಮಾನದಿಂದ ಮತವನ್ನು ಹಾಕಿ ದೇಶದ ಭದ್ರತೆಗೆ ಕೈಜೋಡಿಸಬೇಕು. ಆದರಿಂದ ರನ್ನ ಬೆಳಗಲಿಯಲ್ಲಿ ನೂರಕ್ಕೆ ನೂರರಷ್ಟು
ಮತದಾನ ಆಗುವಂತೆ ನಾವೆಲ್ಲರೂ ಮತದಾರ ಬಾಂಧವರಲ್ಲಿ ಜಾಗೃತಿ ಮೂಡಿ ಸುತ್ತ ಚುನಾವಣೆಯ ಹಬ್ಬವನ್ನು ಆಚರಿಸೋಣ ಎಂದು ತಿಳಿಸಿದರು.

ಪಟ್ಟಣ ಪಂಚಾಯತ ಸಿಬ್ಬಂದಿಯವರಾದ ಪಿ.ಡಿ. ನಾಗನೂರು, ಎಸ್. ಬಿ.ಚೌದ್ರಿ, ಎಸ್.ಜಿ.ಅಳ್ಳಿಮಟ್ಟಿ, ಸಚಿನ ಕಾಸರ, ರಾಜು ಮುಗಳಖೋಡ, ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು, ಪಂಚಾಯತ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article