ರಾಜ್ಯ ಉಪಾಧ್ಯಕ್ಷರಾಗಿ ಹನುಮಂತಪ್ಪ ಗಿಡ್ಡಿ ಆಯ್ಕೆ

Ravi Talawar
WhatsApp Group Join Now
Telegram Group Join Now
ಗಂಗಾವತಿ ಏ25 :ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇದರ ರಾಜ್ಯ ಉಪಾಧ್ಯಕ್ಷರಾಗಿ ಗಂಗಾವತಿ ನಗರದ ಹಿರಿಯ ಶಿಕ್ಷಕರಾದ ಹನುಮಂತಪ್ಪ ಗಿಡ್ಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗದ್ವಾಲ್ ಕ್ಯಾಂಪ್ ಸಹ ಶಿಕ್ಷಕರಾಗಿದ್ದು, ಇವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಕೆ.ನಾಗೇಂದ್ರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಯಾದ ಚಂದ್ರಶೇಖರ್ ನುಗ್ಗಲಿ ಅವರು ಸರ್ವಾನುಮತದಿಂದ ಆಯ್ಕೆ ಮಾಡಿ ಆದೇಶವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮತ್ತು ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶರಣೆ ಗೌಡ ಮಾಲಿಪಾಟೀಲ್, ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಹನುಮಂತಪ್ಪ, ರಾಜ್ಯ ಉಪಾಧ್ಯಕ್ಷರಾದ ಚೆನ್ನಪ್ಪ ಕಾರಟಗಿ, ಗಂಗಾವತಿ ಸರ್ಕಾರಿ ನೌಕರರ ಸಂಘದ ತಾಲೂಕ ಕಾರ್ಯದರ್ಶಿಯಾದ ಉಮೇಶ್, ತಾಲೂಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ.ಬಸವರಾಜ, ಕಾರಟಗಿ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿಟ್ಟಲ್ ಜರಗಾಳಿ, ಶಿವಾನಂದ ಸಿಳ್ಳಿನ, ಗವಿಸಿದ್ದಪ್ಪ ಹೂಗಾರ, ಚಾಂದ್ ಪಾಷಾ ಸೇರಿದಂತೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article