ಜನರಿಗೆ ನೀಡಿದ್ದ ಭರವಸೆಗಳನ್ನು ಪಕ್ಷ ಕಾಂಗ್ರೆಸ್ ಈಡೇರಿಸಿದೆ: ಡಾ.ಅಂಜಲಿ ನಿಂಬಾಳಕರ

Ravi Talawar
WhatsApp Group Join Now
Telegram Group Join Now

ನೇಸರಗಿ,ಮಾ29: ಚುನಾವಣೆಯಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ ಪಕ್ಷವಾಗಿ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದ್ದು ಆದರೆ ಬಿಜೆಪಿ ಪಕ್ಷ ಜನರಿಗೆ ಕೋಮವಾದದ ಭಾವನೆ ಹೆಚ್ಚಿಸಿ ಧರ್ಮ ಒಡೆಯವ ಕೆಲಸ ಮಾಡುತ್ತಿದ್ದು ಆರು ಬಾರಿಗೆ ಸಂಸದರಾಗಿ ಹಿಂದಿನ ಸಂಸದರು ಮಾಡಿದ ಕೆಲಸ ಕಾರ್ಯಗಳು ಏನು? ಐದು ವರ್ಷಕ್ಕೊಮ್ಮೆ ಬಂದು ಮತ ಕೇಳಿ ಮಾಯವಾಗಿರುವ ಸಂಸದರು ಗೆಲುವಿಗೆ ಕಿಂಚಿತ್ತೂ ಕಾರ್ಯ ಮಾಡದೆ ಜನರ ನಂಬಿಕೆಗೆ ಮೋಸ ಮಾಡಿದ್ದಾರೆ ಎಂದು ಕೆನರಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಲೋಕಸಭಾ ಅಬ್ಯರ್ಥಿ ಡಾ. ಅಂಜಲಿ ನಿಂಬಾಳಕರ ಹೇಳಿದರು.

ಶುಕ್ರವಾರದಂದು ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಉದ್ದೇಶಿಸಿ ಮಾತನಾಡುತ್ತಾ ಈಗಾಗಲೇ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ 90% ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬಲಿದ,ಬಡವರ ಜನರಿಗೆ ಆಧಾರವಾಗಿದೆ.

ಅಳ್ನಾವರ,ಶಿರಸಿ,ಕುಮಟಾ,ಕಾರವಾರದ ಜನ ಜನ ಕಾಂಗ್ರೆಸ್ ಗೆಲ್ಲಿಸಲು ನಾವಿದ್ದೇವೆ ಚನ್ನಮ್ಮನ ಕಿತ್ತೂರ, ಖಾನಾಪೂರ. ಕ್ಷೇತ್ರಗಳಲ್ಲಿ ಮುನ್ನಡೆ ಪಡೆದರೆ ತಮ್ಮ ಜಯ ಖಚಿತ ಎನ್ನುತ್ತಿದ್ದಾರೆ ಅದಕ್ಕಾಗಿ ತಮ್ಮ ಪಕ್ಕದ ಕ್ಷೇತ್ರದ ನನಗೆ ಬೆಂಬಲಿಸಿ ನಿಮ್ಮ ಸಲುವಾಗಿ ಲೋಕಸಭೆಯಲ್ಲಿ ದ್ವನಿ ಎತ್ತಲೂ ಅವಕಾಶ ಮಾಡಿಕೊಡಬೇಕು .ಮಾದರಿ ಕೆನರಾ ಕ್ಷೇತ್ರ ಮಾಡಲು ಬೆಂಬಲಿಸಿರಿ ಎಂದು ಡಾ. ಅಂಜಲಿ ನಿಂಬಾಳಕರ ಹೇಳಿದರು.

ಚ.ಕಿತ್ತೂರ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಮಾತನಾಡಿ ಕ್ಷೇತ್ರದ ಶಾಸಕನಾಗಲು ಅವಕಾಶ ಕೊಟ್ಟಿದ್ದು ನೀವು ಈಗ ನಿಮ್ಮ ಸೇವಕನಾಗಿ ಕೆಲಸ ಮಾಡಲು ನಾನಿದ್ದೇನೆ. ಅಭ್ಯರ್ಥಿ ಸುಶಿಕ್ಷಿತರು,ಅವರ ಫೌಂಡೇಷನ್ ಮುಖಾಂತರ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಕಾರ್ಯಕರ್ತರು ಮನೆ ಮನೆಗೆ ಹೋಗಿ ಸರ್ಕಾರದ ಕಾರ್ಯಗಳನ್ನು ಜನರ ಮನ ಮುಟ್ಟುಸುವ ಕಾರ್ಯ ಆಗಬೇಕು .ನಾವು ,ನಿವೆಲ್ಲರೂ ಗ್ರಾಮ, ಭೂತ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಪಕ್ಷದ ಅಬ್ಯರ್ಥಿ ಗೆಲುವಿಗೆ ಪಣ ತೊಡೋಣ ಎಂದರು.

ಕೆಪಿಸಿಸಿ ಸದಸ್ಯ ಶ್ರೀಮತಿ ರೋಹಿನಿ ಪಾಟೀಲ ಮಾತನಾಡಿ ಎಲ್ಲಾ ಜನಾಂಗದ ಕೆಲಸ ಕಾರ್ಯ ಮಾಡಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಅನ್ನಬಾಗ್ಯ,ಶಕ್ತಿ ಯೋಜನೆ, ಯುವ ನಿಧಿ,ಉಚಿತ ವಿದ್ಯುತ್ ನೀಡಿ ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ. ಮತ್ತು ಮನಮೋಹನಸಿಂಗ ಪ್ರಧಾನಿಯಾಗಿದ್ದಾಗ 70 ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ,ಸಿ ಎಂ ಸಿದ್ರಾಮಯ್ಯ ಅವದಿಯಲ್ಲಿ ತಲಾ 50 ಸಾವಿರ ರೂಪಾಯಿ, ಸಮಿಸ್ರ ಸರ್ಕಾರದ ಅವದಿಯಲ್ಲಿ1 ಲಕ್ಷ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರ ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಅಂಜಲಿ ನಿಂಬಾಳಕರ ಗೆಲುವಿಗೆ ನಾವು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಗೆಲುವಿಗಿಂತ ಹೆಚ್ಚಿನ ಮಟ್ಟದಲ್ಲಿ ಬೆಂಬಲಿಸಿ ಹೆಣ್ಣು ಮಗಳನ್ನು ಸಂಸದರನ್ನಾಗಿ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ನೇಸರಗಿ ಬ್ಲಾಕ್ ಅದ್ಯಕ್ಷ ನಿಂಗಪ್ಪ ಅರಿಕೇರಿ,ಯುವ ಮುಖಂಡ ಸಚಿನ ಪಾಟೀಲ, ಕಿತ್ತೂರ ಬ್ಲಾಕ್ ಅದ್ಯಕ್ಷ ಸಂಗನಗೌಡ ಪಾಟೀಲ, ಮಾಜಿ ಎಪಿಎಂಸಿ ಅದ್ಯಕ್ಷ ಬರಮಣ್ಣ ಸತ್ತೆಣ್ಣವರ, ಮಂಜುನಾಥ ಸಿಡ್ಲವ್ವಗೋಳ,ಜಗದೀಶ್ ಪಾಟೀಲ,ರವಿ ಸಿದ್ದಮ್ಮನವರ ಸೇರಿದಂತೆ ಅನೇಕರು ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ನೇಗಿನಹಾಳ ಪಿಕೆಪಿಎಸ್ ಅದ್ಯಕ್ಷರಾದ ನಾನಾಸಾಹೇಬ ಪಾಟೀಲ, ದೀಪಕಗೌಡ ಪಾಟೀಲ,ಬಾಳಪ್ಪ ಮಾಳಗಿ, ನಿಂಗಪ್ಪ ತಳವಾರ,ಬಸವರಾಜ ಚಿಕ್ಕನಗೌಡ್ರ, ಮಲ್ಲಿಕಾರ್ಜುನ ಕಲ್ಲೊಳಿ, ಸುರೇಶ ಅಗಸಿಮನಿ,ಮಹಾಂತೇಶ ಸತ್ತಿಗೇರಿ,ನಿರ್ಮಲಾ ನಾಯ್ಕರ,ಶಿವನಗೌಡ ಪಾಟೀಲ, ಮಂಜುನಾಥ ಹುಲಮನಿ,ಶೇಖರ ಖೋಮ್ಮನವರ,ಡಿ ಎಸ್ ಎಸ್ ಅದ್ಯಕ್ಷ ಸುರೇಶ ರಾಯಪ್ಪಗೋಳ,ಸುರೇಶ ಕಂಡ್ರಿ,ಯಮನಪ್ಪ ಪೂಜೇರಿ,ಉಮೇಶ ಪಾಟೀಲ,ಮನೋಜ ಕೆಳಗೇರಿ, ಸೇರಿದಂತೆ ನೇಸರಗಿ, ನಾಗನೂರ,ಸಂಪಗಾಂವ ಜಿ ಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು, ಪುರುಷ,ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article