This is the title of the web page
Left Banner (Left Skyscraper)
Right Banner (Right Skyscraper)

ಯೋಗ ಭಾರತೀಯ ಪ್ರಾಚೀನ ಪರಂಪರೆಯ ಉತ್ತಮ ಕೊಡುಗೆ : ಸಿದ್ದಣ್ಣ ದುರದುಂಡಿ

ಯೋಗ ಮಾಡುವುದರ ಮೂಲಕ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ..

0 244

ಮೂಡಲಗಿ ಜೂ.21 : ಯೋಗ ಭಾರತೀಯ ಪ್ರಾಚೀನ ಪರಂಪರೆಯ ಉತ್ತಮ ಕೊಡುಗೆಯಾಗಿದ್ದಷ್ಟೇ ಅಲ್ಲದೆ, ಮನುಷ್ಯ ಮಾನಸಿಕವಾಗಿ, ದೈಹಿಕವಾಗಿ, ಸದೃಢವಾಗಿ ಇರಬೇಕಾದರೆ ಯೋಗ ಅತಿ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು.

 

ಮಂಗಳವಾರದಂದು ತಾಲ್ಲೂಕಿನ ವಡೇರಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಸಂಘ ಹಳ್ಳೂರ, ಪೂರ್ವಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಸರ್ಕಾರಿ ಪಿಯು ಕಾಲೇಜ್ ಎನ್ಎಸ್ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಯೋಗ ಮನಸ್ಸು ಹಾಗೂ ಶರೀರ ಸಾರ್ಥಕತೆ ಮಾನವ ಹಾಗೂ ನಿಸರ್ಗದ ನಡುವೆ ಸಾಮರಸ್ಯದಿಂದ ಇರಲು ಸರಕಾರಿ ಆಗುತ್ತದೆ ಎಂದರು.
ಮೂಡಲಗಿ ಬಿ ಪಿ ಎಡ್ ಮಹಾವಿದ್ಯಾಲಯದ ಉಪನ್ಯಾಸಕ ಯಲ್ಲಪ್ಪ ಭರಮಣ್ಣವರ, ಸನ್ಮಾನ ಸ್ವೀಕರಿಸಿ, ಯೋಗ ಮಾಡಿ ಜಲ ನೀತಿ ಹಾಗೂ ಸೂತ್ರ ನೀತಿ ಕ್ರಿಯೆ ಪ್ರದರ್ಶನ ಮಾಡಿದರು. ಕಾಲೇಜಿನ ಪ್ರಾಚಾರ್ಯರಾದ ಎಸ್ ಐ ಬಾಗೋಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗವನ್ನು ಪ್ರತಿಯೊಬ್ಬರು ಮಾಡಬೇಕು ಹಾಗೂ ಯುವ ಸಂಘಟಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ಉಪನ್ಯಾಸಕ ಎಂ ಜಿ ದೇವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪೂರ್ವಿ ಕ್ರೀಡಾ-ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಾಘವೇಂದ್ರ ದೊಡ್ಡವಾಡ, ಉಪನ್ಯಾಸಕರಾದ ಎಲ್ ಎಸ್ ವಾರೆಪ್ಪಗೋಳ, ವಾಯ್ ಎಲ್ ಶೇಖರಗೊಳ, ಎ ವಿ ಮೇಳವಂಕಿ, ಕೆ ಎಂ ಉಪ್ಪಾರ, ವಿ ಬಿ ಜೋಡಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಕೆ ಬಿ ಬೆಳಗಲಿ ಸ್ವಾಗತಿಸಿ ವಂದಿಸಿದರು.

You might also like
Leave a comment