This is the title of the web page
Left Banner (Left Skyscraper)
Right Banner (Right Skyscraper)

ಶರೀರ, ಶಾರೀರಿಕ ರಕ್ಷರೆಗೆ ಯೋಗ ಪ್ರಯೋಜನಕಾರಿ : ಶಾಸಕ ಮಹಾಂತೇಶ ದೊಡ್ಡಗೌಡರ.

0 61

 

ನೇಸರಗಿ ಜೂ., 21- ಶರೀರ ಹಾಗೂ ಶಾರೀರ ದೇಹದ ರಕ್ಷಣೆ ,ಮಾನಸಿಕ ಸ್ಥಿರತೆ ,ರಕ್ತದೊತ್ತಡ,ಸಕ್ಕರೆ ಖಾಯಿಲೆ , ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಜನೆಗೆ ಇನ್ನೂ ಅನೇಕ ಉಪಯೋಗಕಾರಿ ದೇಹದ ಪ್ರಯೋಜನಕಾರಿ ಉದ್ದೇಶಕ್ಕಾಗಿ ಯುವಕರು ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗ ಅಭ್ಯಾಸ ಮಾಡಿ ಎಂದು ಚ. ಕಿತ್ತೂರ ಶಾಸಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.

ಅವರು ಅಂತರರಾಷ್ಟ್ರೀಯ ಯೋಗ ದಿನವಾದ ಮಂಗಳವಾರದಂದು ಇಲ್ಲಿನ ವಿದ್ಯಾಮಂದಿರ ಪ್ರೌಢಶಾಲಾ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳು, ಯುವಕರು, ಮಹನೀಯರಿಗೆ ಯೋಗದ ದಿನದ ಮಹತ್ವದ ಕುರಿತು ಮಾತನಾಡಿ ಹಗಲಿರುಳು ದೇಶದ ಜನರಿಗಾಗಿ‌ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ರಾಜ್ಯದ ಮೈಸೂರಿನಲ್ಲಿ ವಿಶ್ವ ಯೋಗ ದಿನ ಆಚರಿಸಿ ಎರಡು ದಿನಗಳ ಕಾಲ ರಾಜ್ಯದ ಅನೇಕ ಯೋಜನೆಗಳಿಗೆ ಚಾಲನೆ ನೀಡುತ್ತಿರುವದು ಹೆಮ್ಮೆಯ ವಿಷಯ ಎಂದು ಶಾಸಕ ದೊಡ್ಡಗೌಡರ ಹೇಳಿದರು.

ಈ ಕಾರ್ಯಕ್ರಮದಲ್ಲ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಅಡಿವಪ್ಪ ಮಾಳಣ್ಣವರ, ಎಸ್ ಪಾಟೀಲ, ಡಾ. ಮಹಾಂತೇಶ ಕೂಲಿನವರ,ಸೋಮಶೇಖರ ಮಾಳಣ್ಣವರ, ಮಲ್ಲಿಕಾರ್ಜುನ ಸೋಮಣ್ಣವರ, ತೇಜಪ್ಪಗೌಡ ಪಾಟೀಲ, ಸಲೀಮ ನದಾಪ್,ವೀರಭದ್ರ ಚೋಭಾರಿ, ಅಡಿವಪ್ಪ ಚಿಗರಿ,ಬಸವಂತ ಸೋಮಣ್ಣವರ, ಅಶೋಕ ವಕ್ಕುಂದ,ಬಸವರಾಜ ತುಬಾಕಿ,ಸೋಮಶೇಖರ ಮಾಳಣ್ಣವರ ಸೇರಿದಂತೆ ರಾಜಕೀಯ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

You might also like
Leave a comment