ಇಂಡಿ : ಬಿಳಿ ನೊಣ ಎಲೆಗಳಿಂದ ರಸ ಹೀರುವುದದರಿಂದ ಕಬ್ಬಿನ ಎಲೆ ಕೆಂಪಾಗುತ್ತಿದೆ ಹಾಗೂ ಕೀಟದ ತೀರ್ವತೆ ಕಂಡುಬoದಲ್ಲಿ ಕಬ್ಬು ಒಣಗಿ ಇಳುವರಿ ಕುಂಠಿತವಾಗಬಹ್ಮದು ಎಂದು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥü ಡಾ. ಶಿವಶಂಕರ ಮೂರ್ತಿ ಹೇಳಿದರು.
ತಾಲೂಕಿನ ಕಬ್ಬಿಗೆ ಬಿಳಿ ನೊಣ ಭಾದೆಯ ಲಚ್ಯಾಣ, ಅಹಿರಸಂಗ, ಬುಯ್ಯಾರ್, ಪಡನೂರು, ಶಿರಗನೂರ, ಗುಬ್ಬೆವಾಡ ಮತ್ತು ಇನ್ನಿತರ ರೈತರ ತೋಟಗಳಿಗೆ ಭೇಟಿ ಮತ್ತು ಗುಬ್ಬೆವಾಡದ ಸಭೆಯಲ್ಲಿ ಮಾತನಾಡುತ್ತಿದ್ದರು.
ವಿಜ್ಞಾನಿ ಪ್ರಕಾಶ ಜಿ. ಮಾತನಾಡಿ ಬಿಳಿ ನೊಣದ ಪ್ರೌಢಾವ್ಯಸ್ಥೆಯ ನೊಣ, ಮರಿ ಮತ್ತು ಕೋಶ ಎಲೆಗಳ ಕೆಳಭಾಗದಲ್ಲಿ ಎಲ್ಲಾ ಕಡೆ ಹರಡಿಕೊಂಡಿರುತ್ತದೆ. ಎಲೆ ಕೆಳಭಾಗದಿಂದ ನಿರಂತರವಾಗಿ ರಸವನ್ನು ಹೀರುವುದರಿಂದ ಎಲೆಗಳ ಅಂಚಿನಲ್ಲಿ ನೇರಳೆ ಬಣ್ಣಕ್ಕೆ ತಿರುಗುತ್ತದೆ ನಂತರ ಎಲೆಗಳು ಒಣಗಿ ಗಿಡಗಳು ಸಂಪೂರ್ಣವಾಗಿ ಒಣಗುತ್ತದೆ. ಬಿಳಿನೊಣವನ್ನು ನಿಯಂತ್ರಿಸಲು ಮೊದಲು ಅಸಿಫೇಟ್ ೧.೫ ಗ್ರಾಂ. ಕೀಟನಾಶಕವನ್ನು ಪ್ರತಿ ಲೀಟರ್ ನೀರಿನೊಂದಿಗೆ ಹಾಕಿ ಸಿಂಪರಣೆ ಮಾಡುವುದು ಅಥವಾ ಫಿಪ್ರೋನಿಲ್ ೪೦% ಮತ್ತು ಇಮಿಡಾಕ್ಲೊಪ್ರಿಡ್ ೪೦% ಡಬ್ಲೂ.ಜಿ. ೦.೩ ಗ್ರಾಂ ಪ್ರತಿ ಲೀಟರ್ ಅಥವಾ ಇಮಿಡಾಕ್ಲೊಪ್ರಿಡ್ ೫% ಮತ್ತು ಅಸಿಫೇಟ್ ೫೦% ಎಸ್.ಪಿ. ೨ ಗ್ರಾಂ. ಪ್ರತಿ ಲೀಟರ್ ಅಥವಾ ಥೈಯೊಮಿಥಾಕ್ಸಾಮ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ೦.೩ ಮಿ.ಲೀ. ಹಾಕಿ ಸಿಂಪರಣೆ ಮಾಡಬೇಕು ಎಂದರು.
ತದನಂತರ ೧೯:೧೯:೧೯ ಅಥವಾ ೧೩:೦:೪೫ ನೀರಿನಲ್ಲಿ ಕರಗುವ ಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ ೧೦ ಗ್ರಾಂ. ಹಾಕಿ ಸಿಂಪರಣೆ ಮಾಡುವುದು. ಲಘುಪೋಷಕಾಂಶಗಳನ್ನು ಪ್ರತಿ ಲೀಟರ್ ನೀರಿಗೆ ೫ ಗ್ರಾಂ. ಹಾಕಿ ಸಿಂಪಡಿಸಿದರೆ ಬೆಳವಣಿಗೆ ಕಂಡು ಬರುತ್ತದೆ ಎಂದರು.
ಭೀಮಾಶಂಕರ, ಸಕ್ಕರೆ ಕಾರ್ಖಾನೆಯ ಅಧಿಕಾರಿ ಸಂಜೀವ ತಳವಾರ ಮತ್ತು ಗುಬ್ಬೆವಾಡ ಗ್ರಾಮದ ಹಿರಿಯ ರೈತ ಮುಖಂಡ ದಿಲೀಪ, ಚಂದು ಸಾಹುಕಾರ ಹಾಗೂ ೬೦ಕ್ಕೂ ಹೆಚ್ಚಿನ ರೈತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.