‘ಮೋದಿ ಕಿ ಗ್ಯಾರಂಟಿ’ ಪ್ರತಿಪಕ್ಷ ನಾಯಕರನ್ನು ಜೈಲಿಗೆ ಕಳುಹಿಸುವುದು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ

Ravi Talawar
WhatsApp Group Join Now
Telegram Group Join Now

ಕೋಲ್ಕತ್ತಾ,ಏಪ್ರಿಲ್​ 08:  ‘ಮೋದಿ ಕಿ ಗ್ಯಾರಂಟಿ’ ಎಂದರೆ ಲೋಕಸಭಾ ಚುನಾವಣೆ ಪೂರ್ಣಗೊಂಡ ಬಳಿಕ ಪ್ರತಿಪಕ್ಷ ನಾಯಕರನ್ನು ಜೈಲಿಗೆ ಕಳುಹಿಸುವುದಾಗಿದೆ ಎಂದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಹೇಳಿದ್ದಾರೆ.

ಬಂಕುರಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೂನ್ 4 ರ ನಂತರ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಇದರ ಅರ್ಥ ಲೋಕಸಭೆ ಚುನಾವಣೆ ನಂತರ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸುವುದಾಗಿದೆ ಎಂದು ಕಿಡಿಕಾರಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆಯು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆಯೇ ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರಕ್ಕೆ ಭೇಟಿ ನೀಡಿದೆ. ಪ್ರಧಾನಿ ಮೋದಿಯವರು ಅವರು ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳಕ್ಕೆ ಬರುತ್ತಿದ್ದಾರೆ. ಅವರ ಆಗಮನದಿಂದ ನನಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಪ್ರತಿಪಕ್ಷಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಹೇಳಿಕೆ ರೀತಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಸ್ಥಾನದಲ್ಲಿದ್ದವರು ಈ ರೀತಿ ಮಾತನಾಡಬಹುದೇ? ಚುನಾವಣೆಯ ನಂತರ ಬಿಜೆಪಿ ನಾಯಕರನ್ನು ಜೈಲಿಗೆ ಹಾಕುತ್ತೇನೆ ಎಂದು ನಾನು ಹೇಳಿದರೆ ಹೇಗಿರುತ್ತದೆ? ಆದರೆ, ಪ್ರಜಾಪ್ರಭುತ್ವದಲ್ಲಿ ಇದು ಸ್ವೀಕಾರಾರ್ಹವಲ್ಲ. ಈ ರೀತಿ ನಾನು ಹೇಳುವುದಿಲ್ಲ. ಜೂನ್ 4 ರ ನಂತರ ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸುವುದೇ ನಿಜವಾದ ಮೋದಿ ಕಿ ಗ್ಯಾರಂಟಿ ಎಂದು ಆರೋಪಿಸಿದರು.

ಜಲ್ಪೈಗುರಿಯಲ್ಲಿ ಭಾನುವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ನಾವು ಭ್ರಷ್ಟಾಚಾರ ತೊಡೆದುಹಾಕಿ ಎಂದು ಹೇಳಿದರೆ, ಪ್ರತಿಪಕ್ಷಗಳು ಭ್ರಷ್ಟರನ್ನು ಉಳಿಸಿ ಎಂದು ಹೇಳುತ್ತವೆ, ಜೂನ್ 4 ರ ನಂತರ ಭ್ರಷ್ಟರ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳ ಕೈಗೊಳ್ಳಲಾಗುವುದು. ಇದು ಮೋದಿ ಕಿ ಗ್ಯಾರಂಟಿ ೆಂದು ಹೇಳಿದ್ದರು.

WhatsApp Group Join Now
Telegram Group Join Now
Share This Article