This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಸರ್ವಶೆಟ್ಟಿ ಮಾರುತಿ ಪ್ರಸಾದರವರು ಬಳ್ಳಾರಿಯನ್ನು ಪ್ರಗತಿಯತ್ತ ಕರೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆ ನಮಗೆ ಇದೆ : ಸಿ.ಶ್ರೀನಿವಾಸ್ ರಾವ್ ನಗರದ ವ್ಯಾಪಾರಸ್ಥರು, ವರ್ತಕರ ಸಮಸ್ಯೆಗಳ ಸಂವಾದ ಸೌಹಾರ್ದ ಸಭೆ


ಬಳ್ಳಾರಿ, ಸೆ.೨೯: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ನಗರದ ವ್ಯಾಪಾರಸ್ಥರು ಮತ್ತು ವರ್ತಕರ ಸಮಸ್ಯೆಗಳ ಸಂವಾದ ಸೌಹಾರ್ದ ಸಭೆ ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ ನೂತನ ಅಧ್ಯಕ್ಷರಾದ ಸರ್ವಶೆಟ್ಟಿ ಮಾರುತಿ ಪ್ರಸಾದ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾದ ಬಸವಲಿಂಗಪ್ಪ ಇವರು ನಗರದ ವ್ಯಾಪಾರಸ್ಥರು ಮತ್ತು ವರ್ತಕರ ಸಮಸ್ಯೆಗಳ ಸಂವಾದ ಸೌಹಾರ್ದ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿ.ಶ್ರೀನಿವಾಸ್ ರಾವ್ ಮಾತನಾಡುತ್ತಾ, ಸಂಸ್ಥೆ ನಡೆದ ಬಂದ ದಾರಿಯ ಬಗ್ಗೆ ಮತ್ತು ಸಾಧನೆ ಬಗ್ಗೆ ಗಣ್ಯರಿಗೆ ವಿವರಿಸಿದರು. ನೂತನವಾಗಿ ಬುಡಾ ಅಧ್ಯಕ್ಷರಾಗಿ ಆಯ್ಕೆಯಾದ ಸರ್ವಶೆಟ್ಟಿ ಮಾರುತಿ ಪ್ರಸಾದರವರು ನಮ್ಮ ಚೇಂಬರಿನ ಗೌರವ ಸದಸ್ಯರು ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ಇವರಿಗೆ ರಿಯಲ್ ಎಸ್ಟೇನಲ್ಲಿ ಹೆಚ್ಚಿನ ಅನುಭವ ಇರುವುದರಿಂದ ನಗರಾಭಿವೃದ್ದಿ ಪ್ರಾಧಿಕಾರ ಬಳ್ಳಾರಿ (ಬುಡಾ) ದಲ್ಲಿ ಇರುವ ತೊಂದರೆಗಳನ್ನು ತಿಳಿಸುವ ಅಗತ್ಯವಿಲ್ಲ ಬಳ್ಳಾರಿಯನ್ನು ಪ್ರಗತಿಯತ್ತ ಕರೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆ ನಮಗೆ ಇದೆ ಎಂದು ತಿಳಿಸಿದರು. ಹಾಗೂ ನಮ್ಮ ಚೇಂಬರ್ ನಿಂದ ತಮಗೆ ಬೇಕಾದ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಬಸವಲಿಂಗಪ್ಪನವರ ಬಗ್ಗೆ ಮಾತನಾಡುತ್ತಾ ಇವರು ರೈತ ಕುಟುಂಬದಿAದ ಬಂದಿರುವುದರಿAದ ಇವರಿಗೆ ರೈತನ ಕಷ್ಟಗೊತ್ತಿರುತ್ತದೆ ಎಪಿಎಂಸಿ ಬರುವ ಟ್ರಾಫಿಕ ಸಮಸ್ಯೆ, ವಿದ್ಯುತ್ ಅಭಾವ, ರಸ್ತೆಗಳು ಸರಿಯಿಲ್ಲದೆ ಇರುವದು ಹಾಗೂ ರೈತರು ಹುಟ್ಟುವಳಿಯನ್ನು ತಂದರೆ ಸರಿಯಾದ ಫ್ಲಾಟ್ ಫಾರಂ ಇಲ್ಲದೇ ಇರುವುದು ಈ ಸಮಸ್ಯೆಗಳು ತಮ್ಮ ಗಮನಕ್ಕೆ ತಂದಿದ್ದೇವೆ ಇದನ್ನು ಅದಷ್ಟು ಬೇಗನೆ ಬಗೆ ಹರಿಸಬೇಕೆಂದು ತಿಳಿಸಿದರು.ಗೌರವ ಕಾರ್ಯದರ್ಶಿಗಳಾದ ಯಶ್‍ವಂತ್ ರಾಜ್ ಮಾತನಾಡುತ್ತಾ, ನಮ್ಮ ಸಂಸ್ಥೆ ಉಚಿತ ಆಸ್ಪತ್ರೆ ಪಕ್ಕದಲ್ಲಿನ ಖಾಲಿ ನಿವೇಶವನ್ನು ನಮ್ಮ ಸಂಸ್ಥೆಯ ಹೆಸರಿನಲ್ಲಿ ಮಂಜೂರು ಮಾಡುವ ಬಗ್ಗೆ ಈಗಾಗಲೇ ಹಲವು ಬಾರಿ ತಮ್ಮ ಇಲಾಖೆಗೆ ಮನವಿ ಸಲ್ಲಿಸಿದರೂ ಇದರ ಬಗ್ಗೆ ಯಾವ ಅಧಿಕಾರಿಯು ಗಮನ ನೀಡಿಲ್ಲ ತಾವಾದರೂ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ತಿಳಿಸಿದರು.
ಬಂದAತ ಮುಖ್ಯ ಅತಿಥಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ತಾವುಗಳು ತಿಳಿಸಿದ ಎಲ್ಲಾ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಬಗೆ ಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಮಹಾರುದ್ರಗೌಡ, ಕೆ.ರಮೇಶ್ ಬೊಜ್ಜಿ, ಕೆ.ಸಿ.ಸುರೇಶ ಬಾಬು, ಜಂಟಿಕಾರ್ಯದರ್ಶಿಗಳಾದ ಎಸ್.ದೊಡ್ಡನಗೌಡ, ಸೊಂತ್ ಗಿರಿಧರ್, ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮತ್ತಿತರರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply