This is the title of the web page
Left Banner (Left Skyscraper)
Right Banner (Right Skyscraper)

ಸಕಲ ಸರಕಾರಿ ಗೌರವಗಳೊಂದಿಗೆ ಯೋಧ ಪ್ರಕಾಶ ಸಂಗೊಳ್ಳಿ ಅಂತ್ಯಕ್ರೀಯೆ

0 111
ಬೈಲಹೊಂಗಲ 03- ಯೋಧನ ಪತ್ನಿ ಜ್ಯೋತಿ ಅವರಿಗೆ ಯೋಧನ ಸಮವಸ್ತç, ರಾಷ್ಟದ್ವಜ ಸಮರ್ಪಿಸುತ್ತಿರುವ ಸೇನಾ ತಂಡ.
ಬೈಲಹೊಂಗಲ. ಸೀಮಂತ ಕಾರ್ಯಕ್ಕೆ ರಜೆಯ ಮೇಲೆ ಬಂದಿದ್ದ ಯೋಧ ಪ್ರಕಾಶ ಮಡಿವಾಳಪ್ಪ ಸಂಗೊಳ್ಳಿ (೨೮) ಅಪರಿಚಿತ ವಾಹನ ಹಾಯ್ದು ಅಪಘಾತಕ್ಕಿಡಾಗಿ ಸಾವನ್ನಪ್ಪಿದ ಘಟಣೆ ಗುರುವಾರ ನಡೆದಿದ್ದು,  ಯೋಧನ ಅಂತ್ಯಕ್ರೀಯೆ ಶುಕ್ರವಾರ ಸ್ವಗ್ರಾಮ ಸಮೀಪ ಹೊಸೂರ ಗ್ರಾಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಜರುಗಿತು.
 ಕಳೆದ ೯ ವರ್ಷಗಳಿಂದ ಮರಾಠಾ ಲೈಟ್ ಇನಪೇಂಟರಿ ೯ ನೇ ರೆಜಿಮೆಂಟ್‌ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ ಸದ್ಯಕ್ಕೆ ಬೆಳಗಾವಿಯಲ್ಲಿ ಸೇವೆಯಲ್ಲಿದ್ದ. ಕಳೆದ ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಮಗುವಿನ ನಿರೀಕ್ಷೆಯಲ್ಲಿರುವಾಗ ಪತ್ನಿಯ ಸೀಮಂತ ಕಾರ್ಯವನ್ನು ಜೂ.೧೨ ರಂದು ಅದ್ದೂರಿಯಾಗಿ ಜರುಗಿಸಲು ರಜೆ ಪಡೆದು ಸ್ವಗ್ರಾಮಕ್ಕೆ ಬಂದಿದ್ದರು.
ಹೊಸೂರ ಗ್ರಾಮದಲ್ಲಿ ಪತ್ನಿ ಜ್ಯೋತಿ, ತಾಯಿ ಕಸ್ತೂರೆವ್ವ, ಸಹೋದರ ಸೋಮಲಿಂಗ ಸೇರಿದ ಕುಟುಂಬ ವಾಸಿಸುತ್ತಿದ್ದು, ತಂದೆ ಮಡಿವಾಳಪ್ಪನ ಇಚ್ಛೆಯಂತೆ ಪ್ರಕಾಶ ಸೈನ್ಯಕ್ಕೆ ಸೇರಿ ಸೇವೆಯಲ್ಲಿದ್ದರು.
 ಸೀಮಂತ ಕಾರ್ಯಕ್ಕೆ ಬಂಧುಬಳಗಕ್ಕೆ ಆಹ್ವಾನ ನೀಡಿ, ಕಳೆದ ಎರಡು ತಿಂಗಳ ಹಿಂದೆ ತಂದೆ (ಮಾಜಿ ಸೈನಿಕ) ಮಡಿವಾಳಪ್ಪ ಅವರು ಮರಣ ಹೊಂದಿದ ಹಿನ್ನಲೆಯಲ್ಲಿ ಪಿಂಚಣಿಯಲ್ಲಿ ತಾಯಿ ಹೆಸರು ದಾಖಲೆಗಳನ್ನು ನೀಡಿ ಬೆಳಗಾವಿಯಿಂದ ಬೈಕ್ ಮೇಲೆ ಮರಳುವಾಗ ಹಲಗಾ ಬಳಿ ರೈಸ್ ಮಿಲ್ಲ ಹತ್ತಿರ ಕಾಯ್ದು ಕುಳಿತ್ತಿದ್ದ ಜವರಾಯ ಅಪರಿಚಿತ ವಾಹನದ ರೂಪದಲ್ಲಿ ಬಂದು ಯೋಧನ ಪ್ರಾಣ ಪಕ್ಷಿಯನ್ನು ಸ್ಥಳದಲ್ಲಿಯೇ ತೆಗೆದುಕೊಂಡು ಹೋಗಿ, ಕಾರ್ಯಕ್ರಮದ ಸಂತೋಷದಲ್ಲಿದ್ದ ಬಾಳಿನಲ್ಲಿ ಕಹಿ ತುಂಬಿದ್ದು, ಅತ್ಯಂತ ದುರದೃಷ್ಟಕರವಾಗಿದೆ. ಪ್ರಕರಣ ಹಿರೆಬಾಗೆವಾಡಿ ಪೊಲೀಸ ಠಾಣೆಯಲ್ಲಿ ದಾಖಲಾಗಿದ್ದು, ಶುಕ್ರವಾರ ಬೆಳಿಗ್ಗೆ ಶವ ಪರೀಕ್ಷೆ ನಡೆದು, ಶವವನ್ನು ಶ್ರಂಗಾರಗೊAಡ ಮಿಲ್ಟಿçà ವಾಹದಲ್ಲಿ ತರಲಾಯಿತು.
ಅಂತ್ಯಕ್ರೀಯೆ-ಯೋಧನ ಪಾರ್ಥಿವ ಶರೀರ ಬೈಲಹೊಂಗಲ ಪಟ್ಟಣದಿಂದ ಗ್ರಾಮಕ್ಕೆ ತೆರಳುವಾಗ ಯೋಧನ ಗೆಳೆಯರು, ಗ್ರಾಮದ ಯುವಕರು ನೂರಾರು ಸಂಖ್ಯೆಯಲ್ಲಿ ಸೇರಿ ಬೈಕ್ ರ‍್ಯಾಲಿ ಮೂಲಕ ಗ್ರಾಮಕ್ಕೆ ಕೊಂಡೊಯ್ದರು. ಪ್ರಾರ್ಥಿವ ಶರೀರ ಗ್ರಾಮಕ್ಕೆ  ಆಗಮಿಸುತ್ತಿದ್ದಂತೆ ಕುಟುಂಬಸ್ಥರ, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಗರ್ಭವತಿ ಪತ್ನಿಯ ಆಕ್ರಂದನ ಕಂಡು ಸೇರಿದ ಜನತೆಯ ಕಣ್ಣಲ್ಲಿ ನೀರು ಹರಿಯಿತು. ಇನ್ನೂ ಲೋಕ ಕಾಣದ ಮಗು ತಂದೆ ಇಲ್ಲದೆ ಅನಾಥವಾಯಿತಲ್ಲ ಎಂದು ಜನರು ಮಮ್ಮಲ ಮರುಗಿದರು.
ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಯೋಧನ ಮನೆ ಮುಂಬಾಗದಲ್ಲಿ ಇರಿಸಲಾಗಿತ್ತು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಸವದತ್ತಿ ತಹಶೀಲ್ದಾರ ಪ್ರಶಾಂತ ಪಾಟೀಲ, ಯುವ ಮುಖಂಡ ಬಸವರಾಜ ಕೌಜಲಗಿ, ಎಪಿಎಂಸಿ ಸದಸ್ಯ ಎಫ್.ಎಸ್. ಸಿದ್ದನಗೌಡರ, ದೇಮಪ್ಪ ಯರಡಾಲ, ಮಹಾಂತೇಶ ಮಬನೂರ, ಗ್ರಾಪಂ ಅಧ್ಯಕ್ಷೆ ಸರೋಜಿನಿ ಬಾಳೆಕುಂದರಗಿ, ಉಪಾಧ್ಯಕ್ಷ ರುದ್ರವ್ವ ಮರಶೆಟ್ಟಿ, ಸದಸ್ಯರಾದ ಮೋಹನ ವಕ್ಕುಂದ, ಎಸ್.ಕೆ. ಮೆಳ್ಳಿಕೇರಿ, ಮುನೀರ ಶೇಖ, ವೀರಣ್ಣ ಸಂಪಗಾಂವ, ದಿಲಾವರ ದೂಪದಾಳ, ಮಾಜಿ ತಾಪಂ ಸದಸ್ಯ ಜಗದೀಶ ಬೂದಿಹಾಳ, ಪಿಕೆಪಿಎಸ್ ಅಧ್ಯಕ್ಷ ಸೋಮಲಿಂಗ ಚಳಕೊಪ್ಪ, ಉಮೇಶ ಬೊಳತ್ತಿನ, ಮಹಾದೇವ ಇಂಗಳಗಿ, ಕಿರಣ ಮೂಗಬಸವ, ಗೌಡಪ್ಪ ಹೊಸಮನಿ, ರಮೇಶ ವಕ್ಕುಂದ, ಮಲ್ಲಿಕಾರ್ಜುನ ವಕ್ಕುಂದ, ಶಿವರಾಜ ಬೂದಿಹಾಳ, ಮಲ್ಲಿಕಾರ್ಜುನ ಕುದರಿ, ಪಿಡಿಒ ಡಿ.ಎಸ್. ಕನಕನವರ ಹಾಗೂ ಸದಸ್ಯರು, ಉಪ ತಹಶೀಲ್ದಾರ ಡಿ.ಬಿ. ಅಲ್ಲಯ್ಯನವರ, ಕಂದಾಯ ನಿರೀಕ್ಷಕ ಆರ್.ಎಸ್. ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಸತೀಶ ಪವಾರ, ಎನ್‌ಸಿಸಿ ಕೆಡೆಟ್ಸ್, ಪೊಲೀಸ ಸಿಬ್ಬಂದಿ, ಮಾಜಿ ಸೈನಿಕರು ಸೇರಿ ಸಾವಿರಾರು ಗ್ರಾಮಸ್ಥರು ಅಂತಿಮ ದರ್ಶನ ಪಡೆದು. ಗೌರವ ಸಲ್ಲಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಯೋಧನ ಪ್ರಾರ್ಥಿವ ಶರೀರದ ಮೆರವಣಿಗೆ ಜರುಗಿತು. ಗ್ರಾಮದ ವೀರಭದ್ರೇಶ್ವರ ಹಾಗೂ ವಿವಿದ ಭಜನಾ ಮಂಡಳಿಗಳು ಭಜನೆ ಮೂಲಕ ಗೌರವ ಸಲ್ಲಿಸಿದರು.
ಗೌರವ ಅರ್ಪಣೆ- ಮರಾಠಾ ರೆಜಿಮೆಂಟನ ಸುಬೇದಾರರಾದ ದಯಾನಂದ ಬೂಹಾ, ಲಕ್ಷö್ಮಪ್ಪ ಪೂಜೇರ, ಬಿಎಚ್‌ಎಂ. ಸಿದ್ದಲಿಂಗಪ್ಪ ಹುಬ್ಬಳ್ಳಿ, ಯೋಧ ಶಿವಾನಂದ ಬೊಳತ್ತಿನ ನೇತೃತ್ವದ ತಂಡ ಯೋಧನ ಪಾರ್ಥಿವ ಶರೀರದ ಅಂತ್ಯಕ್ರೀಯೆ ನಡೆಯುವಾಗ ಗೌರವ ಸಲ್ಲಿಸಿ, ರಾಷ್ಟçದ್ವಜ, ಯೋಧನ ಸಮವಸ್ತçವನ್ನು ಪತ್ನಿಗೆ ಸಮರ್ಪಿಸಿದರು.
ಯೋಧನ ಗುಣಗಾಣ-ಯೋಧ ಪ್ರಕಾಶ ಅಪ್ಪಟ್ಟ ದೇಶಭಕ್ತನಾಗಿ, ಚಿಕ್ಕಂದಿನಿಂದಲೇ ಆರ್ಮಿ ಆಗುವ ಕನಸು ಹೊತ್ತಿದ್ದ. ಗ್ರಾಮದಲ್ಲಿ ಅನೇಕ ಗೆಳೆಯರ ಬಳಗದ ಮುದ್ದಿನ ಸ್ನೇಹಿತನಾಗಿದ್ದ, ರಜೆ ಮೇಲೆ ಬಂದಾಗ ಸಾಮಾಜಿಕ ಸೇವೆಯಲ್ಲಿ ತೊಡಗಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದನು. ಗ್ರಾಮದ ಎಫ್.ಎಸ್. ಸಿದ್ದನಗೌಡರ, ಮಂಜು ಕಿತ್ತೂರ, ಉಳವಪ್ಪ ಸಂಗೊಳ್ಳಿ, ಮೋಹನ ವಕ್ಕುಂದ ಹಾಗೂ ಗೆಳೆಯರು ಅಂತ್ಯಕ್ರೀಯೆ ಮುಗಿಯುವವರೆಗೂ ಕದಲದೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
You might also like
Leave a comment