This is the title of the web page
Left Banner (Left Skyscraper)
Right Banner (Right Skyscraper)

ಪ್ರಕಾಶ ಹುಕ್ಕೇರಿ ಪರ ಕಾಂಗ್ರೆಸ್ ಮುಖಂಡರ ಮತ ಯಾಚನೆ.

ಮೂಡಲಗಿಯಲ್ಲಿ ಅಬ್ಬರದ ಪ್ರಚಾರ

0 64

ಮೂಡಲಗಿ ಜೂ.11 : ಶಿಕ್ಷಕರು ಸಮಾಜದ ಕಣ್ಣುಗಳು,ದೇಶದ ಭವಿಷ್ಯ ರೂಪಿಸುವುದರ ಜೊತೆಗೆ ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದೆ, ಇಂಥ ಶಿಕ್ಷಕರಿಗೂ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ಮೆಟ್ಟಿ ನಿಂತು ಬೊಧಿಸುವುದು ಸವಾಲಿನ ಕೆಲಸವಾಗಿದೆ.ಆದ್ದರಿಂದ ಈ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಕರೊಂದಿಗೆ ನಿಲ್ಲಬಲ್ಲ ಸಮರ್ಥ ವ್ಯಕ್ತಿ ಪ್ರಕಾಶ ಹುಕ್ಕೇರಿ ಇವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕೆಂದು ಕಾಂಗ್ರೇಸ್ ಮುಖಂಡರಾದ ಎಸ್.ಆರ್.ಸೋನವಾಲ್ಕರ್ ಹಾಗೂ ಕೆ.ಟಿ.ಗಾಣಿಗೇರ್ ಹೇಳಿದರು.

    ಅವರು ವಿಧಾನ ಪರಿಷತ್ ಚುನಾವಣೆಯ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಪರವಾಗಿ ಮೂಡಲಗಿ ಪಟ್ಟಣದ ವಿವಿಧ ಶಾಲಾ ಕಾಲೇಜು,ಸಂಘ ಸಂಸ್ಥೆಗಳಿಗೆ ಭೇಟಿ ಕೊಡುತ್ತ ಮತ ಯಾಚನೆ ಮಾಡಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಮ್.ಎಸ್.ನಂದಗಾಂವಮಠ, ಹೊಳೆಪ್ಪ ಶಿವಾಪೂರ, ಮಲ್ಲನಗೌಡ ಪಾಟೀಲ. ವರನಗೌಡ ಪಾಟೀಲ್, ಅಪ್ಪಾಸಾಬ ಪಾಟೀಲ್ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

You might also like
Leave a comment