ಇಂಡಿ: ತಾಲೂಕಿನಲ್ಲಿ ಸಮರ್ಪಕವಾಗಿ ಮುಂಗಾರು ಮಳೆ ಆಗದೆ ಇರುವುದರಿಂದ ರೈತ ವರ್ಗ ತಿವೃ ಸಂಕಷ್ಟ ಎದುರಿಸುತ್ತಿದ್ದು ಬರಗಾಲದ ಛಾಯೆ ಆವರಿಸಿದ್ದರಿಂದ ಬೆಳೆ ವಿಕ್ಷಣೆ ಹಾಗೂ ಕೆರೆಗಳಲ್ಲಿ ನೀರಿನ ಲಭ್ಯತೆ ಅರಿಯಲು ಖುದ್ದಾಗಿ ವಿಜಯಪುರ ಜಿಲ್ಲಾಧಿಕಾರಿ ಕೆ. ಬುಬಾಲನ ಸೋಮವಾರರಂದು ತಾಲೂಕಿನ ಹೊರ್ತಿ, ಬಬಲಾದ, ಹಂಜಗಿ, ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಸಮಿಕ್ಷೆ ಮಾಡಿದರು.
ಆಯಾ ಗ್ರಾಮಗಳಿಗೆ ಜಿಲ್ಲಾಧಿಕಾರಿ ಬೇಟಿ ನೀಡಿ ಬೆಳೆ ಹಾಗೂ ಕೆರೆಯ ನೀರಿನ ಲಭ್ಯತೆ ಪರಿಶಿಲನೆ ಮಾಡುವ ಸಂದರ್ಭದಲ್ಲಿ ರೈತರು ತಮ್ಮ ನೋವು ತೊಡಿಕೊಂಡು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಇದ್ದ ಬೆಳೆಗಳು ಮಳೆ ಬಾರದೆ ಹೊದಲ್ಲಿ ಕೈಗೆ ಬರುವುದಿಲ್ಲ ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದೆವೆ. ಇದೇ ರಿತಿ ಹವಾಮಾನ ಮುಂದು ವರೆದಲ್ಲಿ ತೊಗರಿ, ಹೆಸರು, ಸಜ್ಜೆ, ಸೇರಿದಂತೆ ಅನೇಕ ಬೆಳೆಗಳು ಒಣಗಿ ಹೊಗುತ್ತವೆ. ಆದ್ದರಿಂದ ಸರ್ಕಾರ ರೈತರ ಹಿತ ಕಾಪಾಡುವ ಕಾರ್ಯ ಮಾಡಬೇಕು. ಇದ್ದ ಕೊಳವೆಬಾವಿ, ತೆರೆದ ಬಾವಿಗಳು ಬತ್ತಿದ್ದು ಮುಂದಿನ ದಿನಮಾನಗಳಲ್ಲಿ ಕುಡಿಯುವ ನೀರಿಗೂ ಪರದಾಡು ಸ್ಥಿತಿ ಇದೆ ಎಂದು ಗ್ರಾಮಸ್ಥರು ಹಾಗೂ ರೈತರು ತಮ್ಮ ಅಳಲನ್ನು ತೊಡಿಕೊಂಡರು.
ಈ ಕುರಿತು ಸಭೆಯಲ್ಲಿ ಚರ್ಚಿಸಿ ಸರ್ಕಾರದ ವರದಿ ನೀಡುತ್ತೆವೆ. ಸರ್ಕಾರದ ಆದೇಶದ ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರೈತರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ ಸಿಂಧೆ, ಉಪ ವಿಭಾಗಾಧಿಕಾರಿ ಅಬಿದ ಗದ್ಯಾಳ, ತಹಶೀಲ್ದಾರ ವಿಜಯ ಕಡಕಭಾವಿ, ಉಪ ತಹಶೀಲ್ದಾರ ಎ ಎಸ್ ಗೋಟ್ಯಾಳ, ಕೃಷಿ ಅಧಿಕಾರಿ ಮಹಾದೇವ ಎವೂರ, ಎಚ್ ಎಸ್ ಪಾಟೀಲ ಸೇರಿದಂತೆ ರೈತರು, ಗ್ರಾಮಸ್ಥರು ಇದ್ದರು.