ವಿವಾಹಿತ ಮಹಿಳೆ ಮತಾಂತರಕ್ಕೆ ಯತ್ನ: ದಂಪತಿ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್

Ravi Talawar
WhatsApp Group Join Now
Telegram Group Join Now

ಬೆಳಗಾವಿ,ಏಪ್ರಿಲ್​ 22: 28ರ ಹರೆಯದ ವಿವಾಹಿತ ಮಹಿಳೆಯ ಅಶ್ಲೀಲ ಫೋಟೋ ಹಾಗೂ ವೀಡಿಯೊಗಳನ್ನು ವೈರಲ್‌ ಮಾಡುವುದಾಗಿ ಬೆದರಿಸಿ ಬ್ಲಾಕ್ ಮೇಲ್ ಮೂಲಕ ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸಿದ ಆರೋಪದಲ್ಲಿ ದಂಪತಿ ಸೇರಿದಂತೆ ಏಳು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದ ಮಹಿಳೆಯನ್ನು ಮತಾಂತರ ಮಾಡಲು ಯತ್ನಿಸಿದ್ದ ಆರೋಪದ ಮೇರೆಗೆ ರಫೀಕ್ ಬೇಪಾರಿ ಹಾಗೂ ಆತನ ಪತ್ನಿ ಕೌಸರ್ ಬೇಪಾರಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಿಳೆಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡು, ನಂತರ ಅಶ್ಲೀಲ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಮತಾಂತರಕ್ಕೆ ಒತ್ತಾಯಿಸಲಾಗಿದೆ. ಮಹಿಳೆಯ ಖಾಸಗಿ ಕ್ಷಣದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಮತಾಂತರಕ್ಕೆ ಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತ ಮಹಿಳೆ ಒಟ್ಟು 7 ಜನರ ವಿರುದ್ಧ ಮತಾಂತರ ಯತ್ನದ ಆರೋಪ‌ ಮಾಡಿದ್ದು, ಸವದತ್ತಿ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾಳೆ. ಮಹಿಳೆ ದೂರಿನನ್ವಯ ಸವದತ್ತಿ ಪೊಲೀಸರು ದಂಪತಿಯನ್ನು ಬಂಧನ ಮಾಡಿದ್ದಾರೆ. ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾ ಶಂಕರ ಗುಳೇದ ಮಾಹಿತಿ ನೀಡಿದ್ದಾರೆ.

ಹಣೆಗೆ ಕುಂಕುಮ ಹಚ್ಚುವುದನ್ನು ನಿಲ್ಲಿಸಬೇಕು. ಹಿಂದೂ ಸಂಪ್ರದಾಯ ಬಿಡಬೇಕು. ನಿತ್ಯ ಬುರ್ಖಾ ಧರಿಸಬೇಕು. ದಿನಕ್ಕೆ 5 ಸಲ ನಮಾಜ್ ಮಾಡಬೇಕು ಎಂದು ರಫೀಕ್‌ ಬೇಪಾರಿ ಷರತ್ತು ಹಾಕಿ ಕಿರುಕುಳ ನೀಡುತ್ತಿದ್ದರು ಎಂದು ಏ.18 ರಂದು ಸವದತ್ತಿ ಠಾಣೆಗೆ ದೂರು ನೀಡಲಾಗಿದೆ.

ಆರೋಪಿಗಳಾದ ಮುನವಳ್ಳಿ ಪಟ್ಟಣದ ಆರೀಫ್ ‌ಬೇಪಾರಿ, ಆದೀಲ್, ಶೋಯಲ್, ಮುಕ್ತಮ್, ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ವಿರುದ್ಧ ದೂರು ದಾಖಲಾಗಿದೆ. ಈಗ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಮಹಿಳೆ ಗಂಡ ಕಿರಾಣಿ ಅಂಗಡಿ ಹೊಂದಿದ್ದರು. ಪತಿ ಇಲ್ಲದಾಗ ಆಗಾಗ ಕಿರಾಣಿ ಅಂಗಡಿಯಲ್ಲಿ ಈ ಮಹಿಳೆ ಕೂರುತ್ತಿದ್ದಳು. ಆಗ ಆರೀಫ್ ಬೇಪಾರಿ ಅಲ್ಲಿಗೆ ಬರುತ್ತಿದ್ದ ಮಹಿಳೆಯ ಸ್ನೇಹ ಬೆಳೆಸಿ ಮೊಬೈಲ್ ನಂಬರ್‌ ಪಡೆದುಕೊಂಡಿದ್ದ. ನಂತರ, ಹಲವು ಆಮಿಷಗಳನ್ನೊಡ್ಡಿದ್ದ, ನಂತರ ಮಹಿಳೆಗೆ ಬೆಳಗಾವಿಯಲ್ಲಿ ಕೈತುಂಬಾ ಸಂಬಳದ ಆಫೀಸ್‌ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ ‌ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ಅಶ್ಲೀಲ ದೃಶ್ಯ ವೀಡಿಯೊ ಮಾಡಿಟ್ಟುಕೊಂಡು ಬೆದರಿಸುತ್ತಿದ್ದಾನೆ. ನಂತರ ಆತ ಹಾಗೂ ಇತರ ಐವರು  ನೀನು ಮತಾಂತರಗೊಳ್ಳಬೇಕು. ಇಲ್ಲವಾದಲ್ಲಿ ನಿನ್ನ ಫೋಟೋ ಹಾಗೂ ವೀಡಿಯೊವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಡುತ್ತೇನೆ ಎಂದು ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.

WhatsApp Group Join Now
Telegram Group Join Now
Share This Article