ಪ.ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ: ಆಂಧ್ರದಲ್ಲಿ ಪೋಲಿಂಗ್​ ಏಜೆಂಟರ ಅಪಹರಣ ಆರೋಪ, ಇವಿಎಂ ಧ್ವಂಸ

Ravi Talawar
WhatsApp Group Join Now
Telegram Group Join Now

ಪಶ್ಚಿಮ ಬಂಗಾಳ/ಆಂಧ್ರಪ್ರದೇಶ: ಆಂಧ್ರಪ್ರದೇಶದ ವಿಶಾಖಪಟ್ಟಣ ಪೂರ್ವ ಕ್ಷೇತ್ರದ 95ನೇ ಮತಗಟ್ಟೆ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆವರೆಗೂ ಮತದಾನ ಆರಂಭವಾಗಿಲ್ಲ. ಇದರಿಂದಾಗಿ ಮತದಾರರು ಕೇಂದ್ರದ ಮುಂದೆ ಮೂರು ಗಂಟೆಯಿಂದ ಕಾದು ಕುಳಿತಿದ್ದಾರೆ. ಇತ್ತ, ಅನ್ನಮಯ ಜಿಲ್ಲೆಯಲ್ಲಿ ಜನಸೇನಾ ಪೋಲಿಂಗ್​ ಏಜೆಂಟರನ್ನು ಅಪಹರಣ ಮಾಡಲಾಗಿದೆ.

ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಬಲವಂತವಾಗಿ ಏಜೆಂಟರನ್ನು ಕಿಡ್ನಾಪ್​ ಮಾಡಿದ್ದಾರೆ ಎಂದು ಜನಸೇನಾ ಕಾರ್ಯಕರ್ತರು ಆರೋಪಿಸಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಭುಗಿಲೆದ್ದು ದಳವಾಯಿ ಮತಗಟ್ಟೆ ಕೇಂದ್ರದಲ್ಲಿ ಇವಿಎಂ ಧ್ವಂಸಗೊಳಿಸಿ ಮತದಾನ ಸ್ಥಗಿತಗೊಳಿಸಲಾಗಿದೆ.

ಭಾನುವಾರ ಸಂಜೆ ಪುರ್ಬಾ ಬರ್ಧಮಾನ್ ಜಿಲ್ಲೆಯ ಕೇತುಗ್ರಾಮ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಮಿಂಟು ಶೇಖ್ (45) ಮೃತ ದುರ್ದೈವಿ.

ಕೇತುಗ್ರಾಮ ವಿಧಾನಸಭಾ ಕ್ಷೇತ್ರದ ಚೆಂಚೂರಿ ಗ್ರಾಮದ ಬಳಿ ಕೆಲವು ಕಿಡಿಗೇಡಿಗಳು ಮನೆಗೆ ಹಿಂತಿರುಗುತ್ತಿದ್ದ ಮಿಂಟು ಶೇಖ್​​ನನ್ನು ತಡೆದು, ಹಲ್ಲೆ ಮಾಡಿದ್ದಾರೆ. ನೆಲಕ್ಕೆ ಬೀಳಿಸಿ, ಆಯುಧಗಳಿಂದ ದಾಳಿ ಮಾಡಿದ್ದಾರೆ. ಬಳಿಕ ಆತನ ಮೇಲೆ ಬಾಂಬ್ ಎಸೆದು ಸ್ಫೋಟಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಮಿಂಟುನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಫಲಿಸದೇ ಶೇಖ್ ಮೃತಪಟ್ಟಿದ್ದಾರೆ.

WhatsApp Group Join Now
Telegram Group Join Now
Share This Article