This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ರಾಮದುರ್ಗ ತಾಲೂಕಿನ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನ ಉತ್ತಮ ಕೆಲಸ ಮಾಡುತ್ತಿರುವ ಶಾಸಕ ಮಹಾದೇವಪ್ಪ ಯಾದವಾಡ,ಕಾರ್ಯ ಶ್ಲಾಘನೀಯ : ಕಟೀಲ


ರಾಮದುರ್ಗ: ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್ ಪಕ್ಷವನ್ನು ಕೆಟ್ಟದ್ದಾಗಿ ಬೈದಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಕಾಲಿಗೆ ಬಿದ್ದು ಅಧಿಕಾರ ಪಡೆದುಕೊಂಡು ಪೇಮೆಂಟ್ ಸೀಟ್ ಮೇಲೆ ಮುಖ್ಯಮಂತ್ರಿಯಾಗಿ ಭ್ರಷ್ಠಾಚಾರ ಮಾಡುವದರ ಜೊತೆಗೆ ಜಾತಿಗಳ ಮಧ್ಯೆ ಸಂಘರ್ಷ ಹುಟ್ಟು ಹಾಕಿದ ನರಹಂತಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆರೋಪಿಸಿದರು.
ತಾಲೂಕಿನ ಖಾನಪೇಠ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಬಿಜೆಪಿ ರಾಮದುರ್ಗ ಮಂಡಲ ನೇತೃತ್ವದಲ್ಲಿ ಗುರುವಾರ ನಡೆದ ಜನಸ್ಪಂದನ ಹಾಗೂ ಕಾರ್ಯಕರ್ತ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
೫ ವರ್ಷಗಳ ಅಧಿಕಾರ ನಡೆಸಿದ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಉದ್ದಾರಕ ಎಂದು ಪೋಜು ಕೊಟ್ಟು, ಭ್ರಷ್ಠಾಚಾರದ ಹೊಳೆಯನ್ನೆ ಹರಿಸಿದರು. ಕೈಯಲ್ಲಿ ಕಟ್ಟಿಕೊಂಡ ಕೋಟಿ ರೂಪಾಯಿ ವಾಚನ್ನು ಯಾರು ದೇಣಿಗೆ ನೀಡಿದ್ದು, ಎಂಬುವದನ್ನು ಮರೆತು ಉತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಗ್ಗೆ ಮಾತಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂರಿಗೂ ಬೇಡವಾಗಿದ್ದ ಟಿಪ್ಪು ಜಯಂತಿಯನ್ನು ಮಾಡುವ ಮೂಲಕ ಹಿಂದೂ-ಮುಸ್ಲಿಂರಲ್ಲಿ ಘರ್ಷಣೆ ತಂದಿದ್ದಟ್ಟರೆ, ಒಂದಾಗಿದ್ದ ವೀರಶೈವ ಲಿಂಗಾಯತರಲ್ಲಿ ಪಂಗಡಗಳ ಬೀಜ ಬಿತ್ತಿ ಒಡೆದಾಳುವ ಕೆಲಸಕ್ಕೆ ಮುಂದಾದ ಸಿದ್ದರಾಮಯ್ಯ, ಬಾಯಿ ಬಿಟ್ಟರೆ ಆದರ್ಶ ಮಾತನಾಡುತ್ತಾರೆ. ಇಂತಹ ವ್ಯಕ್ತಿಗಳಿಗೆ ಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿ ಶಾಶ್ವತ ರಾಜಕೀಯ ಸನ್ಯಾಸತ್ವ ನೀಡಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಪೋಲಿಸರು ಚೂರಿ ಚಿಕ್ಕಣ್ಣ, ನಾನಾ ಹೆಸರಿನ ವ್ಯಕ್ತಿಗಳನ್ನು ಕರೆಯುತ್ತಿದ್ದರು. ಆದರೇ ಇಂದು ಇಡೀ ದೇಶವನ್ನೇ ಲೂಟಿ ಮಾಡಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರೀಯಾಂಕಾ ವಾದ್ರಾ, ಡಿ.ಕೆ. ಶಿವಕುಮಾರ ಇವರನ್ನೆಲ್ಲಾ ಪೊಲೀಸರು ಬನ್ನಿ ಎಂದು ಕರೆಯುವಂತಾಗಿದೆ. ಇವರೆಲ್ಲಾ ಭ್ರಷ್ಠಾಚಾರವೇ ಮಾಡಿಲ್ಲವೆಂದರೆ ಭಯವೇಕೆ ?. ಏನು ತಪ್ಪು ಮಾಡದ ನರೇಂದ್ರ ಮೋದಿಯವರನ್ನು ಹಾಗೂ ಅಮಿತಾ ಷಾ ಅವರನ್ನು ವಿಚಾರಣೆ ನಡೆಸಿದಾಗ ನಾವೇನು ಪ್ರತಿಭಟನೆ, ಮೆರವಣೆಗೆ ಮಾಡಿಲ್ಲ. ಜಾಮೀನು ಮೇಲೆ ಹೊರಗಿರುವ ಇವರು ಭ್ರಷ್ಠಾಚಾರದ ಬಗ್ಗೆ ಮಾತನಾಡಲು ಏನು ನೈತಕತೆ ಇದೆ ಎಂದು ಪ್ರಶ್ನಿಸಿದರು.
೪.೫ ವರ್ಷದ ಅವಧಿಯಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಅವರು, ಸಾವಿರಾರು ಕೋಟಿ ಅನುದಾನ ತಂದು ತಾಲೂಕಿನ ಅಭಿವೃದ್ದಿಗೆ ಮುಂದಾಗಿದ್ದಾರೆ. ಉತ್ತಮ ಕೆಲಸ ಮಾಡುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಬಿಜೆಪಿ ಪಕ್ಷ ಮಾಡಿದ ಸಾಧನೆಯನ್ನಿಟ್ಟುಕೊಂಡು ಬರುವ ೨೦೨೩ ರ ಚುನಾವಣೆಗೆ ಮತ ಕೇಳಲು ಹೋದರೆ, ಕಾಂಗ್ರೆಸ್ ಸಂಘರ್ಷದ ವಿಷಯಗಳನ್ನೆ ಮುಂದಿಟ್ಟುಕೊಂಡು ಹೋಗುತ್ತಿದ್ದೆ. ಕಾಂಗ್ರೆಸ್ ಕಮಿಷನ್ ಯೋಜನೆಗಳನ್ನು ಮಾಡಿದರೆ, ಪ್ರಧಾನಿ ನರೇಂದ್ರ ಮೋದಿಯವರು ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಜನ ಇದನ್ನು ಅರಿತುಕೊಂಡು ಮತ ನೀಡುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಶಾಸಕ ಮಹಾದೇವಪ್ಪ ಯಾದವಾಡ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಜಿ ಸಚಿವ ಶಶಿಕಾಂತ ನಾಯಕ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ| ಕೆ.ವಿ. ಪಾಟೀಲ, ಮುಖಂಡ ಪಿ.ಎಫ್. ಪಾಟೀಲ, ಜಿಲ್ಲಾ ಪ್ರಭಾರಿ ಚಂದ್ರಶೇಖರ ಕವಟಗಿ, ಜಿಲ್ಲಾ ಉಪಾಧ್ಯಕ್ಷ ಮಾರುತಿ ಕೊಪ್ಪದ, ಮಾಜಿ ಜಿ.ಪಂ ಸದಸ್ಯರಾದ ರಮೇಶ ದೇಶಪಾಂಡೆ, ರೇಣಪ್ಪ ಸೋಮಗೊಂಡ, ಮಾರುತಿ ತುಪ್ಪದ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಖಾ ಚಿನ್ನಾಕಟ್ಟಿ, ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ, ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷ ರಾಜೇಶ ಬೀಳಗಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ನಿರೂಪಿಸಿ, ವಂದಿಸಿದರು.


Leave a Reply