This is the title of the web page
Left Banner (Left Skyscraper)
Right Banner (Right Skyscraper)

ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಅವಿಸ್ಮರಣೀಯ : ಪ್ರೊ. ಈಶ್ವರ ಭಟ್ಟ

0 9

ಧಾರವಾಡ : ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಅವಿಸ್ಮರಣೀಯವಾಗಿದೆ. ಗಾಂಧೀಜಿ, ಟಿಳಕ, ನೆಹರು ಮೊದಲಾದವರು ಸ್ವಾತಂತ್ರ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾರಣ ಆ ಚಳುವಳಿಗೆ ಒಂದು ತಾತ್ವಿಕ ಸ್ವರೂಪ ಪ್ರಾಪ್ತವಾಯಿತು. ರಾಷ್ಟ್ರದ ಎಲ್ಲ ವಕೀಲರಿಗೆ ಅದು ಸ್ಪೂರ್ತಿ ನೀಡಿತು ಹೀಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರು ನೇರವಾಗಿ ಭಾಗವಹಿಸಿದರು ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈಶ್ವರ ಭಟ್ಟ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ನ್ಯಾಯ ನಿಷ್ಠುರಿ ಎಂ. ಸಿ. ಬಂಡಿ ವಕೀಲರದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ `ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ’ ವಿಷಯಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ನಾಗರಿಕ ಸಮಾಜದಲ್ಲಿಎಲ್ಲರಿಗೂ ನ್ಯಾಯ ಸಿಗಬೇಕು. ಜನವಿರೋಧಿ ಕಾನೂನುಗಳನ್ನು ವಿರೋಧಿಸುವುದು, ಜನಹಿತ ಕಾನೂನುಗಳನ್ನು ಗೌರವಿಸುವ ಮೂಲಕ ಜನಜಾಗೃತಿ ಮೂಡಿಸಿದರು. ಡಾ. ಬಿ. ಆರ್.ಅಂಬೇಡ್ಕರ ಸ್ವಾತಂತ್ರ ಹೋರಾಟದ ಬಗೆಗೆ ಅಭಿಮಾನ ಹೊಂದಿದ್ದರು. ಸಂವಿಧಾನರಚನೆಅವರ ಬಹಳ ದೊಡ್ಡ ಕೊಡುಗೆಯಾಗಿದೆ ಎಂದು ಆ ಕಾಲದ ವಕೀಲರನ್ನು ಸ್ಮರಿಸಿದರು.
ವಿಶ್ರಾಂತ ಪ್ರಾದ್ಯಾಪಕ ಡಾ.ಎಂ.ವಾಯ್.ಸಾವಂತ, ಹಿರಿಯ ನ್ಯಾಯವಾದಿ ಎಂ.ಸಿ.ಬಂಡಿ, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಪ್ರೊ.ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ಕಾಮರೆಡ್ಡಿ ವಕೀಲರು, ನಿಂಗಣ್ಣಕುಂಟಿ ಪ್ರೊ. ಬಿ. ಎಸ್. ಶಿರೋಳ, ಚನಬಸಪ್ಪ ಅವರಾದಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

You might also like
Leave a comment