This is the title of the web page
Left Banner (Left Skyscraper)
Right Banner (Right Skyscraper)

ಆದಷ್ಟು ಬೇಗ ಚರಂಡಿ ನೀರಿನ ಸಮಸ್ಯೆ ಬಗೆ ಹರಿಸಲು ಸಾರ್ವಜನಿಕರ ಆಗ್ರಹ

0 38

ಸಂಕೇಶ್ವರ, ಜೂ., ೦೯- ಪಟ್ಟಣದ ವಾರ್ಡ್ ನಂ ೪ ರಲ್ಲಿ ಚರಂಡಿಗಳು ತುಂಬಿಕೊಂಡು ,ಚರಂಡಿ ನೀರು ರಸ್ತೆ ಹರಿಯುತ್ತಿದ್ದು ,ಇಲ್ಲಿನ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಸಾರ್ವಜನಿಕರ ಆಗ್ರಹಿಸಿದಾರೆ.

ಪಟ್ಟಣದ ವಾರ್ಡ ನಂ೪ ರಲ್ಲಿನ ಚರಂಡಿಗಳನ್ನು ಪುರಸಭೆಯವರು ಸ್ವಚ್ಚಗೊಳಿಸದ ಹಿನ್ನೆಲೆಯಲ್ಲಿ ಚರಂಡಿಗಳು ತುಂಬಿಕೊಂಡು ಗಬ್ಬೆದು ನಾರುತ್ತಿವೆ.ಇಲ್ಲಿನ ಜನರು ನಿತ್ಯ ಇದೆ ಗಬ್ಬು ವಾಸನೆಯಲ್ಲಿ ಓಡಾಡಬೇಕಾಗಿದೆ.ಹಾಗೂ ಚರಂಡಿಗೊಳು ತುಂಬಿಕೊಂಡಿದ್ದರ ಪರಿಣಾಮ ಇಲ್ಲಿನ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ .

ಇನ್ನು ಇದೆ ರಸ್ತೆಯಲ್ಲಿ ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ನಿತ್ಯ ಓಡಾಡಬೇಕಾದ ಅನಿರ್ವಾಯತೆ ಎದುರಾಗಿದೆ .ಕೊಳಚೆ ನೀರು ರಸ್ತೆ ಹರಿಯುತ್ತಿದ್ದರು ,ಇಲ್ಲಿನ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು ಜಾಣ ಮೌನವಹಿಸಿದ್ದು ಇಲ್ಲಿನ ಜನರು ಅಧಿಕಾರಿಗಳ ಹಾಗೂ ಪುರಸಭೆ ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ .

You might also like
Leave a comment