This is the title of the web page
Left Banner (Left Skyscraper)
Right Banner (Right Skyscraper)

ಮಹಾಲಿಂಗಪುರ ತಾಲೂಕು ಘೋಷಣೆ ಸರ್ಕಾರಕ್ಕೆ ಒಳ್ಳೆಯದು : ಈಶ್ವರ ಖಂಡ್ರೆ

ಮಹಾಲಿಂಗಪುರ ತಾಲೂಕು ಹೋರಾಟ ೫೭ ನೇ ದಿನಕ್ಕೆ

0 86

ಮಹಾಲಿಂಗಪುರ, ಜೂ., ೦೯- ಮಹಾಲಿಂಗಪುರ ಇತಿಹಾಸ ಪ್ರಸಿದ್ಧ ನಗರವಾಗಿದ್ದು ವ್ಯಾಪಾರ, ವಾಣಿಜ್ಯ, ಧಾರ್ಮಿಕ ಕೇಂದ್ರವಾಗಿದ್ದು ಸರ್ವ ರೀತಿಯಿಂದಲೂ ತಾಲೂಕು ಕೇಂದ್ರವಾಗಲು ಅರ್ಹವಾಗಿರುವುದನ್ನು ಮತ್ತು ಈ ಜನರ ಬೇಡಿಕೆಯನ್ನು ಕಡೆಗಣಿಸಿದರೆ ಕೇವಲ ೧೦ ತಿಂಗಳಲ್ಲಿ ಬರುವ ವಿಧಾನ ಸಭಾ ಚುನಾವಣೆಯ ವ್ಯತಿರಿಕ್ತ ಫಲಿತಾಂಶಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಜೀವ ಬಿಟ್ಟೇವು ತಾಲೂಕು ಬಿಡೆವು ಎಂಬ ನಿಲುವಿನೊಂದಿಗೆ ನಡೆಯುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟದ ೫೬ ನೇ ದಿನದ ಮುಷ್ಕರವು ಸಮೀಪದ ಧವಳೇಶ್ವರ ಗ್ರಾಮಸ್ಥರ ನೇತೃತ್ವದಲ್ಲಿ ನಡೆಯುತ್ತಿದ್ದು, ಮುಷ್ಕರನಿರತ ವೇದಿಕೆಗೆ ಆಗಮಿಸಿ ಮಾತನಾಡಿದ ಅವರು, ಯಾವುದೇ ಸಮಿತಿಯ ಶಿಫಾರಸ್ಸು ಇರಲಿ ಇಲ್ಲದಿರಲಿ ಕೆಲವೆಡೆ ರಾಜಕೀಯ ಒತ್ತಡ ಮತ್ತು ರಾಜಕೀಯ ಇಚ್ಚಾಶಕ್ತಿಯ ಪ್ರಭಾವದಿಂದಾಗಿ ತಾಲೂಕುಗಳು ಮತ್ತು ಜಿಲ್ಲೆಗಳ ಘೋಷಣೆಯಾಗಿವೆ. ನಾನೂ ಸಹ ಬೀದರ್ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದಾಗ ಅವಶ್ಯಕತೆಗನುಗುಣವಾಗಿ ತಾಲೂಕು ಘೋಷಣೆ ಮಾಡಿದ್ದೇನೆ. ಕಬ್ಬು ಬೆಳಗೆ ಹೆಸರುವಾಸಿಯಾಗಿ ಬೆಲ್ಲ ತಯಾರಿಕೆಯಲ್ಲಿ ದೇಶದಲ್ಲಿಯೇ ಹೆಸರು ಮಾಡಿ ನೂರಾರು ಕೋಟಿ ಆದಾಯವಿದ್ದು, ಬೇರೆ ಬೇರೆ ಕಡೆಯಿಂದ ವ್ಯಾಪಾರಸ್ಥರು ನಗರಕ್ಕೆ ಆಗಮಿಸುತ್ತಿದ್ದು ಸರ್ವರೀತಿಯಲ್ಲಿ ಅರ್ಹವಿರುವ ಮಹಾಲಿಂಗಪುರದ ಸವಾಂಗೀಣ ಅಭಿವೃದ್ಧಿಯಾಗಬೇಕಾದರೆ ಕೂಡಲೇ ತಾಲೂಕು ಘೋಷಣೆ
ಆಗಲೇಬೇಕು ಅದಕ್ಕಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ನಾನು ನಮ್ಮ ನಾಯಕರೊಡಗೂಡಿ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇವೆ ಮತ್ತು ಸರ್ಕಾರದ ಮೇಲೆ ಒತ್ತಡವನ್ನು ತರುತ್ತೇವೆ. ಇದು ಸೂಕ್ತ ಕಾಲ ಕೇವಲ ಹತ್ತು ತಿಂಗಳ ಒಳಗಾಗಿ ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಆರಂಭವಾಗುತ್ತಿದ್ದು, ಸರ್ಕಾರ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಜನತೆಯ ಬೇಡಿಕೆಯನ್ನು ಪರಿಗಣಿಸಿ ಕೂಡಲೇ ತಾಲೂಕು ಘೋಷಿಸಿದರೆ ಸರ್ಕಾರಕ್ಕೆ ಒಳ್ಳೆಯದು, ತಪ್ಪಿದಲ್ಲಿ ಮುಂದಿನ ಚುನಾವಣೆಯ ವ್ಯತಿರಿಕ್ತ ಫಲಿತಾಂಶಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದರು. ಪತ್ರಕರ್ತ ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಧಾನ ಪರಿಷತ್ ಮಾಜಿ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಂದುಗೌಡ ಪಾಟೀಲ, ಸತೀಶ ಬಂಡಿವಡ್ಡರ, ಮಲ್ಲಪ್ಪ ಸಿಂಗಾಡಿ, ಡಾ.ಎ.ಆರ್.ಬೆಳಗಲಿ, ಸಿದ್ದು ಕೊಣ್ಣೂರ, ರಂಗನಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ, ಎಸ್. ಎಂ. ಉಳ್ಳಾಗಡ್ಡಿ, ರಾಜು ಗೌಡಪ್ಪಗೌಡ, ರಾಜು ಬಾಗವಾನ, ದುಂಡಪ್ಪ ಜಾಧವ, ಆನಂದ ಪಾಟೀಲ, ವಿಠ್ಠಲ ಸಂಶಿ, ಭೀಮಪ್ಪ ಸಸಾಲಟ್ಟಿ, ವಿಠ್ಠಲ ಢವಳೇಶ್ವರ, ನಾನಾ ಜೋಶಿ, ಮಹ್ಮದ್ ಹುಲಿಕಟ್ಟಿ, ಸಿದ್ದಪ್ಪ ಶಿರೋಳ, ಹನುಮಂತ ಜಮಾದಾರ ಹಾಗೂ ಢವಳೇಶ್ವರ ಗ್ರಾಮದ ಎಸ್. ಎಂ. ಪಾಟೀಲ, ರವಿ ಬ್ಯಾಳಿ, ಬನಪ್ಪಗೌಡ ಪಾಟೀಲ, ದುಂಡಪ್ಪ ಪಟ್ಟಣಶೆಟ್ಟಿ,ಮಹಾಲಿಂಗ ಪಟ್ಟಣಶೆಟ್ಟಿ, ಮಾರುತಿ ಹವಾಲ್ದಾರ, ದೇವರೇಶ ಉಳ್ಳಾಗಡ್ಡಿ, ಕಲ್ಲಪ್ಪ ಸಂಗನ್ನವರ, ಅಶೋಕ ಹವಾಲ್ದಾರ, ಸಂಗಮೇಶ ಪಟ್ಟಣದ, ಮಹಾದೇವ ತೇಲಿ ಇತರರು ಇದ್ದರು. ಢವಳೇಶ್ವರದ ಗಡದೇಶ್ವರ ಭಜನಾ ತಂಡದಿಂದ ಇಡೀ ದಿನ ಭಜನೆ ಮಾಡುವ ಮೂಲಕ ವಿಶೇಷವಾಗಿ ಪ್ರತಿಭಟಿಸಲಾಯಿತು.

You might also like
Leave a comment