This is the title of the web page
Left Banner (Left Skyscraper)
Right Banner (Right Skyscraper)

ವಿದ್ಯಾಮಂದಿರ ಶಾಲೆಯ ವಿದ್ಯಾಭ್ಯಾಸ ಉತ್ತಮ ಗುಣಮಟ್ಟದ್ದು : ಶಾಸಕ ದೊಡ್ಡಗೌಡರ

0 150

ನೇಸರಗಿ ಜೂ., 17- ಬಹಳಷ್ಟು ವರ್ಷಗಳ ಕಾಲ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡಿ ಬೈಲಹೊಂಗಲ ಭಾಗದ ವಿದ್ಯಾ ಕಾಶಿಯಾಗಿ ಗುರುತ್ತಿಸಿಕೊಂಡಿರುವ ನೇಸರಗಿ ವಿದ್ಯಾ ಮಂದಿರ ಪ್ರೌಢಶಾಲೆಯಲ್ಲಿ ನಾನು ಕಲಿತ ಆ ದಿನಗಳು ಸದಾ ಸ್ಮರಣೀಯ ಎಂದು ಚ.ಕಿತ್ತೂರ ಶಾಸಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಶುಕ್ರವಾರದಂದು ತಾವು ಪ್ರೌಢಶಾಲಾ ಶಿಕ್ಷಣ ವ್ಯಾಸಂಗ ಮಾಡಿದ್ದ ವಿದ್ಯಾಮಂದಿರ ಶಾಲೆಯ ಎಲ್ಲ ಕೋಣೆಗಳಲ್ಲಿ ಇಂಟರ ಕಾಮ್ ಉದ್ಘಾಟಿಸಿ ಮಾತನಾಡಿ ಇಲ್ಲಿ‌ ಕಲಿತ ನಾನು ಇಂದು ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದು ಮತ್ತು ಅನೇಕ ವಿದ್ಯಾರ್ಥಿಗಳು ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳಾಗಿ,ವೈದ್ಯರಾಗಿ,ವಕೀಲರಾಗಿ, ದೊಡ್ಡ ಮಟ್ಟದ ವ್ಯಾಪಾರಸ್ಥರಾಗಿ,ರಾಜಕೀಯ ಮುಖಂಡರಾಗಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರ .ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವೃಂದ ,ಸಿಬ್ಬಂದಿ ಸೇರಿಕೊಂಡು ನೆಚ್ಚಿನ ಶಾಸಕ ಮಹಾಂತೇಶ ದೊಡ್ಡಗೌಡರರಿಗೆ ಸತ್ಕರಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಪಾದರ್ ಹ್ಯಾರಿ, ಪ್ರ ಗುರುಗಳಾದ ಆರ್ ಸಿ ಯರಗಟ್ಟಿ, ಅಡಿವಪ್ಪ ಮಾಳಣ್ಣವರ, ಎಸ್ ಎಂ ಪಾಟೀಲ,ಪಿ ಎಸ್ ಐ ವಾಯ್ ಎಲ್ ಶೀಗಿಹಳ್ಳಿ, ತೇಜಪ್ಪಗೌಡ ಪಾಟೀಲ,ಮಲ್ಲಿಕಾರ್ಜುನ ಸೋಮಣ್ಣವರ, ವೀರಭದ್ರ ಚೋಭಾರಿ, ಶಿವಪ್ಪ ಚೋಭಾರಿ, ಸೋಮಶೇಖರ ಮಾಳಣ್ಣವರ,ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

You might also like
Leave a comment