This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಕಿತ್ತೂರು ಇತಿಹಾಸಕ್ಕೆ ತಲ್ಲೂರ ರಾಯನಗೌಡರ ಕೊಡುಗೆ ಮರೆಯಲಾಗದ್ದು : ವೈ.ಬಿ.ಕಡಕೋಳ


ಧಾರವಾಡ : ಸವದತ್ತಿ ತಾಲೂಕಿನ ‘ತಲ್ಲೂರ’ ಊರಿನ ಹೆಸರಿಗೆ ಒಂದು ಐತಿಹಾಸಿಕ ಹಿನ್ನೆಲೆಇದೆ. ಬಿಜ್ಜಳನ ಸೈನ್ಯ ದಂಡೆತ್ತಿಚಂದರಗಿ, ಕಡಕೋಳ ಮಾರ್ಗವಾಗಿ ಸಾಗುವಾಗ ತಲ್ಲೂರಿಗೆ ಸಮೀಪಿಸುವಾಗ ಬಿಜ್ಜಳ ಮತ್ತು ಶರಣರ ಮಧ್ಯೆ ಯುದ್ಧವಾಗಿ ಹಲವಾರು ತಲೆಗಳು ಉದುರಿದವು. ಈ ಹಿನ್ನೆಲೆಯ ಅವರ ಸ್ಮರಣಿಕೆಯಲ್ಲಿ ‘ತಲ್ಲೂರ’ ಎಂದು ನಾಮಕರಣವಾಗಿದ್ದು ಅನೇಕ ಐತಿಹ್ಯಗಳಿಂದ ತಿಳಿದು ಬರುತ್ತದೆ ಎಂದು ಶಿಕ್ಷಕ ವಾಯ್. ಬಿ. ಕಡಕೋಳ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ತಲ್ಲೂರುರಾಯನಗೌಡ ಪಾಟೀಲ ಸ್ಮಾರಕ ಸಂಸ್ಥೆಯ ದತ್ತಿ ಕಾರ್ಯಕ್ರಮದಲ್ಲಿ ‘ತಲ್ಲೂರು ರಾಯನಗೌಡ ಜೀವನ ಮತ್ತು ವ್ಯಕ್ತಿತ್ವ’ ಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು,ರಾಯನಗೌಡರಿಗೆ ಸ್ವಾತಂತ್ರ್ಯದ ಹೋರಾಟದ ಪ್ರಭಾವ ಗಾಂಧೀಜಿಯವರ ಭಾಷಣಗಳ ಮೂಲಕ ಆಯಿತು.ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.೧೯೪೨ ರ ವರೆಗಿನ ಅವರ ಹೋರಾಟದ ಪುಟಗಳು ಅಮೋಘ.ನಂತರ ಶರಣಾಗತರಾಗಿ ಜೈಲುವಾಸ.ಸ್ವಾತಂತ್ರ್ಯ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪಾಲ್ಗೊಂಡು ಕರ್ನಾಟಕದ ಗಡಿ ರೇಖೆಗಳ ಪುಸ್ತಕ ರಚಿಸಿ ನಂತರ ಸಂಶೋಧನೆ ಸಮಾಜಸೇವೆ ಇತರ ಚಟುವಟಿಕೆಗಳನ್ನು ಬೈಲಹೊಂಗಲದಲ್ಲಿ ಆರಂಭಿಸಿದರು.ರಾಣಿ ಚನ್ನಮ್ಮ ಇತಿಹಾಸ ಮಂಡಳದ ಕಾರ್ಯದರ್ಶಿಯಾಗಿ ಜನತಾ ಸೇವಕ ಸಮಾಜ ಸಂಸ್ಥೆಯ ಚಟುವಟಿಕೆಯ ಮೂಲಕ ಕಿತ್ತೂರ ಮ್ಯೂಜಿಯಂ ಸ್ಥಾಪನೆ ಹಾಗೂ ಮಲ್ಲಸರ್ಜ ಕಾವ್ಯ ಸಂಪಾದನೆ ವಿವಿಧ ಬರಹಗಳು ಶಿಶುನಾಳ ಷರೀಪರ ಹಾಡುಗಳ ಸಂಗ್ರಹವನ್ನು ಡಾ.ಡಿ.ಎಸ್.ಕರ್ಕಿಯವರ ಜೊತೆಗೂಡಿ ಮಾಡಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ ಅವರು ಕಿತ್ತೂರು ಸಂಸ್ಥಾನಕ್ಕೆ ನೀಡಿದ ಕೊಡುಗೆ ಮರೆಯಲಾಗದ್ದು ಎಂದು ತಲ್ಲೂರ ರಾಯನಗೌಡರ ಕುರಿತು ಅವರ ಧೀಮಂತ ವ್ಯಕ್ತಿತ್ವ ಕುರಿತು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮಚಂದ್ರ ಧೋಂಗಡೆ ಬ್ರಿಟಿಷರ ಬಗ್ಗೆ ತಲ್ಲೂರು ರಾಯನಗೌಡರು ಬರೆದ ಅನೇಕ ಬರಹಗಳನ್ನು ನಾನು ಬಲ್ಲವನಾಗಿದ್ದೇನೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಬಳ್ಳಾರಿ ಕರ್ನಾಟಕಕ್ಕೆ ಸೇರಬೇಕೆಂದು, ೧೫-೨೦ ಸಾವಿರ ಜನರನ್ನು ಬಳ್ಳಾರಿಗೆ ಕರೆದುಕೊಂಡು ಹೋಗಿ ಹೋರಾಟ, ಉಪವಾಸ, ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕುರಿತು ತಮ್ಮ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ವೇದಿಕೆಯಲ್ಲಿ ಸಹಕಾರ್ಯದರ್ಶಿ ಶಂಕರ ಕುಂಬಿ ಮತ್ತು ದತ್ತಿದಾನಿಗಳ ಪರವಾಗಿ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.ಕಾರ‍್ಯಕಾರಿ ಸಮಿತಿ ಸದಸ್ಯರಾದಗುರು ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು.ವೀರಣ್ಣ ಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಕಾಂತ ಬೆಲ್ಲದ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಡಾ. ಜಿನದತ್ತ ಹಡಗಲಿ ಮತ್ತು ಶಂಕರಲಿಂಗ ಶಿವಳ್ಳಿ, ಶಿವಣ್ಣ ಬೆಲ್ಲದ, ಸದಾನಂದ ಶಿವಳ್ಳಿ, ಪ್ರೊ. ಎಸ್. ಕೆ. ಕುಂದರಗಿ, ರಾಜೇಂದ್ರ ಸಾವಳಗಿ, ಬಿ.ಕೆ.ಹೊಂಗಲ.ಲಕ್ಷ್ಮಣ ಬಕ್ಕಾಯಿ, ಶ್ರೀಶೈಲಗೌಡ ಕಮತರ, ಸದಾಶಿವ ಜನಗೌಡರ ಹಾಗೂ ತಲ್ಲೂರಗ್ರಾಮದ ಹಿರಿಯರಾದಈರಪ್ಪ ಹುದ್ದಾರ, ಮಹಾಂತಯ್ಯ ನಂದಿಮಠ, ಅನುರಾಧಾ ಪಾಟೀಲ, ನಾಗವೇಣಿ ಪಾಟೀಲ, ರಾಯನಗೌಡರ ಪರಿವಾರದವರು, ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.


Leave a Reply