ಭಾರತದ ಧ್ವಜಕ್ಕೆ ಅಗೌರವ: ಮಾಲ್ಡೀವ್ಸ್‌ನ ಅಮಾನತುಗೊಂಡ ಸಚಿವೆ ಮರಿಯಮ್ ಶಿಯುನಾ ಕ್ಷಮೆ

Ravi Talawar
WhatsApp Group Join Now
Telegram Group Join Now

ನವದೆಹಲಿ,ಏಪ್ರಿಲ್​ 08: ಮಾಲ್ಡೀವ್ಸ್‌ನ ಅಮಾನತುಗೊಂಡ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುವ ಚಿತ್ರವನ್ನು ಹಂಚಿಕೊಂಡು ನಂತರ ಕ್ಷಮೆಯಾಚಿಸಿದ್ದಾರೆ. ಮರಿಯಮ್ ಶಿಯುನಾ ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಡಳಿತ ಪಕ್ಷಕ್ಕೆ ಸೇರಿದವರು.

ಮಾಲ್ಡೀವಿಯನ್ ಸಚಿವರ ಪೋಸ್ಟ್ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಪಡೆಯಿತು. ಶಿಯುನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಮುಯಿಝುಗೆ ಒತ್ತಾಯಿಸಿದರು. ಗಲಾಟೆಯ ನಂತರ, ಶಿಯುನಾ ಕ್ಷಮೆಯಾಚಿಸುವ ಮೊದಲು ಪೋಸ್ಟ್ ಅನ್ನು ಅಳಿಸಿದ್ದಾರೆ.

ನನ್ನ ಪೋಸ್ಟ್​ನಿಂದಾದ ಗೊಂದಲಕ್ಕಾಗಿ ನಾನು ಕ್ಷಮೆಯಚಿಸುತ್ತೇನೆ ಎಂದು ಎಕ್ಸ್​ನಲ್ಲಿ ಬರೆದಿದ್ದಾರೆ. 2024ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಭೇಟಿ ನಂತರ ಮಾಲ್ಡೀವ್ಸ್​ ಸಚಿವರು ನರೇಂದ್ರ ಮೋದಿಯವರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಬಳಿಕ ಕಲಹದ ನಡುವೆ ಈ ಘಟನೆ ನಡೆದಿದೆ.

ಈ ಘಟನೆ ಬಳಿಕವೂ ಮಾಲ್ಡೀವ್ಸ್​ಗೆ ಭಾರತವು ಪ್ರಮುಖ ಆರ್ಥಿಕ ಪಾಲುದಾರನಾಗಿಯೇ ಉಳಿದಿದೆ. ಆಮದುಗಳ ಪ್ರಮುಖ ಮೂಲವಾಗಿದೆ ಮತ್ತು ದ್ವೀಪ ರಾಷ್ಟ್ರಕ್ಕೆ ಅಕ್ಕಿ ಮತ್ತು ಔಷಧದಂತಹ ಅಗತ್ಯ ಸರಕುಗಳ ಪ್ರಮುಖ ಪೂರೈಕೆದಾರನೂ ಆಗಿದೆ. ಇತ್ತೀಚಿನ ಘಟನೆಗಳು ಮಾಲ್ಡೀವ್ಸ್‌ನಲ್ಲಿ ಭಾರತ ವಿರೋಧಿ ಭಾವನೆ ಹೆಚ್ಚುತ್ತಿದೆ ಎಂದು ಸೂಚಿಸುತ್ತವೆ. ಮಾಲ್ಡೀವ್ಸ್ ಇತ್ತೀಚೆಗೆ ಅಲ್ಲಿ ನಿಯೋಜಿಸಲಾದ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂದಿರುಗಿಸಲು ವಿನಂತಿಸಿತ್ತು

WhatsApp Group Join Now
Telegram Group Join Now
Share This Article