This is the title of the web page

ವಿದ್ಯಾರ್ಥಿಗಳು ತಲಾ ಎರಡು ಗಿಡ ನೆಟ್ಟು ಪೋಷನೆ ಮಾಡಬೇಕು : ಮಹಾಂತೇಶ ದೊಡ್ಡಗೌಡರ

ಅರಣ್ಯದಲ್ಲಿ ಸೆಲ್ಪಿ ತೆಗೆಯುವ ಬದಲು ನೀವೇ ಗಿಡ ಸಂರಕ್ಷಣೆ ಮಾಡಿ ಮಾದರಿಯಾಗಿರಿ.ಶಾಸಕ ದೊಡ್ಡಗೌಡರ

0 5

ನೇಸರಗಿ. ಸಮೀಪದ ಮಲ್ಲಾಪೂರ ಕೆ ಎನ್ ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಸಸಿಗೆ ನೀರುಣಿಸುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿ ಪರಿಸರ ಕುರಿತಾದ ಹಲವು ಆಚರಣೆಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗಿದ್ದು, ಆ ಬಳಿಕ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪರಿಸರ ದಿನಾಚರಣೆ ತನ್ನ ಮಹತ್ವವನ್ನು ಕಳೆದುಕೊಂಡು ಒಂದು ರೀತಿಯಲ್ಲಿ ಒಣ ಮಹೋತ್ಸವವಾಗುತ್ತಿದೆ ಎಂದರು.

ಸರಕಾರ, ಅರಣ್ಯ ಇಲಾಖೆ ಇಂತಹ ದಿನಾಚರಣೆಗಳ ಸಂದರ್ಭದಲ್ಲಿ ವನ್ಯಮೃಗಗಳ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ. ಕಾಡನ್ನೇ ನಂಬಿ ಕಾಡಿನಲ್ಲೇ ಬದುಕುವ ಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ಅಕೇಶಿಯಾ, ಹೊನ್ನೆ, ಬೀಟಿ, ತೇಗದಂತಹ ಮರಗಳನ್ನು ಬೆಳೆಸುವ ಬದಲು ಅವುಗಳಿಗೆ ಆಹಾರವಾಗಬಲ್ಲ ಸಸ್ಯವರ್ಗವನ್ನು ಬೆಳೆಸುವತ್ತ ಚಿಂತಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎಂದರು.

ಬುದ್ಧಿಜೀವಿಯಾದ ಮನುಷ್ಯ ತನ್ನಂತೆ ಇತರ ಜೀವಿಗಳೂ ಬದುಕುವ ಹಕ್ಕನ್ನು ಹೊಂದಿವೆ ಎಂಬುದನ್ನು ಅರಿತು ವನಮಹೋತ್ಸವದಂತಹ ದಿನಾಚರಣೆಗಳ ಸಂದರ್ಭದಿಂದ ಮೊದಲುಗೊಂಡು ವರ್ಷಪೂರ್ತಿ ಪೂರಕ ವಾತಾವರಣವನ್ನು ನಿರ್ಮಿಸುವ ಪಣ ತೊಡಬೇಕಿದೆ ಎಂದು ಕರೆ ನೀಡಿದರು.

ವನಮಹೋತ್ಸವದಂತಹ ಕಾರ‍್ಯಕ್ರಮದಲ್ಲಿ ಎಷ್ಟು ಗಿಡ ನೆಡುತ್ತೇವೆ ಎಂಬುದಕ್ಕಿಂತಲೂ ಇಂತಹ ಆಚರಣೆಗಳ ಮೂಲಕ ಎಷ್ಟು ಜನರಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುತ್ತೇವೆ ಎಂಬುವುದು ಮುಖ್ಯವಾಗುತ್ತದೆ ಎಂದರು.

ನಮ್ಮ ಸಸ್ಯ ಸಂಪತ್ತು ಸಮೃದ್ಧವಾಗಿದ್ದು, ಇವುಗಳನ್ನು ಉಳಿಸುವ ಜತೆಯಲ್ಲಿ ಇನ್ನಿತರ ಪರಿಸರದ ಆದ್ಯತೆಯ ವಿಷಯಗಳಾದ ವೈಜ್ಞಾನಿಕ ಕಸ ವಿಲೇವಾರಿಯ ಮೂಲಕ ಪ್ಲಾಸ್ಟಿಕ್‌ ಮುಕ್ತ ಪರಿಸರದ ನಿರ್ಮಾಣ, ನೀರಿನ ಮರುಪೂರಣ , ಭೂ ಸವಕಳಿಯ ತಡೆ, ತಾಪಮಾನ ಏರಿಕೆಯ ಕಾರಣ- ತಡೆ ಮೊದಲಾದ ವಿಷಯಗಳ ಕುರಿತಂತೆ ಮಾಹಿತಿ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಎರಡು ಗಿಡಗಳನ್ನು ಶಾಲೆ ಹಾಗೂ ಕಾಲೇಜು ಆವರಣದಲ್ಲಿ ನೆಟ್ಟು ಅದನ್ನು ಬೆಳೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ತಿಳಿಸಿದರು ಯಾವುದು ಹೂದೋಟ ಕಾಡಿನ ಮಧ್ಯೆ ಸೆಲ್ಫಿ ಗಳನ್ನು ತೆಗೆಸಿತತ್ವಕೊಳ್ಳುವ ಬದಲು ತಾವುಗಳು ಒಂದೊಂದು ಗಿಡಗಳನ್ನು ಬೆಳೆಸಿ ಅದರ ಮುಂದೆ ನಿಂತು ಸೆಲ್ಫಿ ಅನ್ನು ಕ್ಲಿಕ್ಕಿಸಿ ಕೊಳ್ಳಲು ತಿಳಿಸಿದರು ಹಾಗೆ ತಮ್ಮ ಮನೆಯ ಹಾಗೂ ಹೊಲಗಳ ಸುತ್ತಮುತ್ತ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ತಿಳಿಸಿದರು. ಪ್ರತಿಯೊಬ್ಬರು ಗಿಡಗಳನ್ನು ದತ್ತು ತೆಗೆದುಕೊಂಡು ಬೆಳೆಸಬೇಕೆಂದು ತಿಳಿಸಿದರು.ಪ್ರಥಮ ವರ್ಷದ ವಿದ್ಯಾರ್ಥಿ ಗಳಾದ ನೀವುಗಳು ಪದವಿ ಮುಗಿಯುವುದರೊಳಗೆ ನೀವು ನೆಟ್ಟ ಮರಗಳು ನೆರಳನ್ನು ನೀಡುವಂತಾಗಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಭಾನು ಪಿ ಜಿ, ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಮಲ್ಲಿನಾಥ ಕುಸನಾಳ, ಸಾಮಾಜಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಪವಿಭಾಗ ಎಮ್ ಕೆ ಪಾತ್ರೋಟ, ಬಿ ಎಪ್ ಕೊಳದೂರ, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ವಿಜಯಕುಮಾರ ಪಾಟೀಲ, ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ, ಸುರೇಶ ದೊಡ್ಡಬಸನ್ನವರ, ಮಲ್ಲಾಪೂರ ಗ್ರಾ ಪಂ ಅಧ್ಯಕ್ಷ ಅಶೋಕ ವಕ್ಕುಂದ, ಉಪಾಧ್ಯಕ್ಷೆ ಲಕ್ಷ್ಮಿ ಚಿಕ್ಕಬಸನ್ನವರ, ರಾಜು ಬುಗಡಿಕಟ್ಟಿ, ಪಿಡಿಓ ಬಸನಗೌಡ ಪಾಟೀಲ, ನಾಗರಾಜ ತಲ್ಲೂರ, ಮಾರುತಿ ತಳವಾರ, ನಾಗರಾಜ ನಂಜರಗಿ, ಸದೇಪ್ಪ ಮುದೇನ್ನವರ, ಲಕ್ಕಪ್ಪ ಕೊಳದೂರ, ಇದ್ದರು.

ರಾಜು ಗೀಡಗಿರಿ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

You might also like
Leave a comment