ಕೇಂದ್ರ ನೀಡಿದ ಬರ ಪರಿಹಾರದ ಹಣ ಬಿಡುಗಡೆಗೆ ಶ್ರೀರಾಮುಲು ಆಗ್ರಹ

Ravi Talawar
WhatsApp Group Join Now
Telegram Group Join Now
ಬಳ್ಳಾರಿ, ಮೇ.14 : ರಾಜ್ಯದಲ್ಲಿನ ಬರಗಾಲಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದ   ರಾಜ್ಯದಲ್ಲಿನ‌ ಕಾಂಗ್ರೆಸ್  ಪಕ್ಷದ ಸರ್ಕಾರಕ್ಕೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ  3500 ಕೋಟಿ ರೂ ಬಿಡುಗಡೆ ಮಾಡಿದೆ. ಆದರೆ  ಕೊಟ್ಟಿರೋ ಹಣನಾ  ಈ ವರೆಗೆ ಹಂಚಿಕೆ ಮಾಡಿಲ್ಲ, ಕೂಡಲೇ ಸಂಕಷ್ಟದಲ್ಲಿನ ರೈತರ ಖಾತೆಗಳಿಗೆ ಬಿಡುಗಡೆ ಮಾಡಲು  ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.
ಅವರು ಇಂದು ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ.  ಸರ್ಕಾರ ನಿಸ್ತೇಜವಾಗಿದೆ. ಬಡವರ ಪಾಲಿಗಂತೂ ಸರ್ಕಾರ ನೂರಕ್ಕೆ ನೂರಷ್ಟು  ಇಲ್ಲದಂತಾಗಿದೆಂದು ಆರೋಪಿಸಿದರು.
ಎಲ್ಲಾ ಕಡೆ ಈಗ ಮಳೆಯಾಗಿ ಆಸ್ತಿ ಪಾಸ್ತಿ ಹಾನಿಯಾಗ್ತಿದೆ.  ಮನೆಗಳು, ರೈತರ ಬೆಳೆ ಸಾಕಷ್ಟು ನಷ್ಟವಾಗಿವೆ. ಆದ್ರೇ ಸರ್ಕಾರದಲ್ಲಿ ಇರೋ ಮಂತ್ರಿಗಳು ಒಬ್ಬರೂ ಕೂಡ ಇ ಬಗ್ಗೆ ಪರಿಶೀಲನೆಗೆ  ಕಾಣ್ತಾ ಇಲ್ಲ. ಆ ಮಂತ್ರಿಗಳು ಎಲ್ಲಿ ಬಿದ್ದಾರೋ ಗೊತ್ತಿಲ್ಲ. ಒಬ್ಬ ಮಂತ್ರಿನೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.ಈ ಸರ್ಕಾರ ಇದೆಯಾ ಸತ್ತಿದೆಯಾ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿ. ಮುಖ್ಯಂತ್ರಿ ಸಿದ್ದರಾಮಯ್ಯ  ಕೂಡಲೇ ಒಂದು ವಿಶೇಷ ತಂಡ ಮಾಡಿ, ಜನರ ಬಳಿ ಹೋಗಿ ಮಳೆಯಿಂದಾದ ನಷ್ಟದ ಬಗ್ಗೆ  ಅಧ್ಯಯನ ಮಾಡಿಸಲಿ ಎಂದು ಆಗ್ರಹಿಸಿದರು.
ಚುನಾವಣೆ ವೇಳೆ ನಿಮ್ಮ ಸ್ವಾರ್ಥಕ್ಕೆ ಗ್ಯಾರಂಟಿ ಹಣನ ಎರಡು, ಎರಡು… ನಾಲ್ಕು, ನಾಲ್ಕು ತಿಂಗಳದು ಹಾಕಿದ್ರಿ ಈಗ ಬರಪರಿಹಾರದ ಹಣ ಏಕೆ ಬಿಡುಗಡೆ ಮಾಡುತ್ತಿಲ್ಲವೆಂದರು.
20 ರಲ್ಲಿ ಗೆಲುವು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ  20 ಕಡೆ ಗೆಲ್ಲಲಿದೆ, ಎರಡು ಕಡೆ ಜೆಡಿಎಸ್ ಗೆಲ್ಲಲಿದೆಂದ ಶ್ರೀರಾಮುಲು,ಚುನಾವಣೆ ಫಲಿತಾಂಶದ  ಬಳಿಕ ಆಪರೇಷನ್ ಕಮಲದ  ಬಗ್ಗೆ ಮಹಾರಾಷ್ಟ್ರದ  ಸಿಎಂ ಏಕನಾಥ್ ಸಿಂಧೆ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ.ಈ ಬಗ್ಗೆ ಉತ್ತರ ಕೊಡುವಷ್ಟು ನಾನು ದೊಡ್ಡವನಲ್ಲ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಈ ನೆಲದ ಕಾನೂನು ಬಗ್ಗೆ ಗೌರವ ಇದೆ. ತನಿಖೆ ನಡೆಯುತ್ತಿದೆ, ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷೆ ಆಗಬೇಕು ಎಂದ ರಾಮುಲು ಹೇಳಿದರು. ಈ ವೇಳೆ  ಜನತಾ ಬಜಾರ್ ಅಧ್ಯಕ್ಷ ಜಿ.ನೀಲಕಂಠಪ್ಪ, ಮಾಧ್ಯಮ ವಕ್ತಾರ ಡಾ.ಬಿ.ಕೆ.ಸುಂದರ್ ಇದ್ದರು.
WhatsApp Group Join Now
Telegram Group Join Now
Share This Article