ರಾಮನವಮಿ ಪ್ರಯುಕ್ತ ಶ್ರೀರಾಮ ಮಂದಿರ ಟ್ರಸ್ಟ್​ ವಿಶೇಷ ಮಾರ್ಗಸೂಚಿ: ವಿಐಪಿ ದರ್ಶನ ನಿಷೇಧ

Ravi Talawar
WhatsApp Group Join Now
Telegram Group Join Now

ಅಯೋಧ್ಯೆ,ಏಪ್ರಿಲ್.15: ರಾಮನವಮಿ ಪ್ರಯುಕ್ತ ಶ್ರೀರಾಮ ಮಂದಿರ ಟ್ರಸ್ಟ್​ ವಿಶೇಷ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ನವರಾತ್ರಿಯ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಅಯೋಧ್ಯೆಯ ರಾಮಮಂದಿರದಲ್ಲಿ ವಿಐಪಿ ದರ್ಶನವನ್ನು ನಿಷೇಧಿಸಲಾಗಿದೆ. ಅಧಿಸೂಚನೆಯ ಪ್ರಕಾರ,  ಏಪ್ರಿಲ್ 15 ರಿಂದ 18 ರವರೆಗೆ ನವರಾತ್ರಿಯ ನಾಲ್ಕು ದಿನಗಳ ಕಾಲ ವಿಐಪಿ ದರ್ಶನವನ್ನು  ನಿಷೇಧಿಸಲಾಗಿದೆ.

ಅಯೋಧ್ಯೆಯ ರಾಮಮಂದಿರದಲ್ಲಿ ರಾಮನವಮಿಯ ಸಂದರ್ಭದಲ್ಲಿ ದರ್ಶನಕ್ಕೆ ವಿಐಪಿ ಪಾಸ್‌ಗಳಿಗೆ ನಿಷೇಧ ಹೇರಲಾಗಿದೆ. ಟ್ರಸ್ಟ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಏಪ್ರಿಲ್ 15 ರಿಂದ ಏಪ್ರಿಲ್ 18 ರವರೆಗೆ ಆರತಿಗಾಗಿ ಭಕ್ತರಿಗೆ ಅನುಕೂಲಕರ ದರ್ಶನ ಅಥವಾ ವಿಐಪಿ ಪಾಸ್‌ಗಳು ಲಭ್ಯವಿರುವುದಿಲ್ಲ.

ಇದರರ್ಥ ರಾಮ ನವಮಿಯಂದು ಸಾಮಾನ್ಯ ಮತ್ತು ವಿಶೇಷ ಭಕ್ತರ ದರ್ಶನದ ವ್ಯವಸ್ಥೆಯನ್ನು ಒಂದೇ ರೀತಿ ಇರಿಸಲಾಗಿದೆ. ಶ್ರೀರಾಮನು ಈ ನಾಲ್ಕು ದಿನಗಳಲ್ಲಿ ಎಲ್ಲಾ ಭಕ್ತರಿಗೆ ಒಂದೇ ರೀತಿಯ ದರ್ಶನವನ್ನು ನೀಡುತ್ತಾನೆ, ಯಾರಿಗೂ ವಿಶೇಷ ಉಪಚಾರವಿಲ್ಲ.

ರಾಮನವಮಿಯಂದು ಭಕ್ತರು ಮೊಬೈಲ್​ಗಳನ್ನು ತರಬೇಡಿ ಎಂದು ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಜನರಿಗೆ ಮನವಿ ಮಾಡಿದ್ದಾರೆ. ರಾಮನ ದರ್ಶನಕ್ಕಾಗಿ ನೀಡಲಾಗಿದ್ದ ಹಿಂದಿನ ಪಾಸ್‌ಗಳನ್ನು ರಾಮಮಂದಿರ ಟ್ರಸ್ಟ್ ರದ್ದುಗೊಳಿಸಿದೆ ಎಂದು ರಾಮ ಜನ್ಮಭೂಮಿಯಿಂದ ತಿಳಿಸಲಾಗಿದೆ. ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರವನ್ನು ಜನವರಿ 22ರಂದು ಉದ್ಘಾಟಿಸಲಾಯಿತು.

WhatsApp Group Join Now
Telegram Group Join Now
Share This Article