ಮೂಡಲಗಿ: ಸೆ.25 ರಂದು ಮಧ್ಯಾಹ್ನ 3 ಗಂಟೆಗೆ, ಮೂಡಲಗಿಯ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾದ ಶ್ರೀ ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಬೆಳ್ಳಿ ಹಬ್ಬ ಸಮಾರಂಭ ಪಟ್ಟಣದ ಬಸವರಂಗ ಮಂಟಪದಲ್ಲಿ, ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಸವರಾಜ ತೇಲಿ ಹೇಳಿದರು.
ಸೊಸೈಟಿಯ ಸಭಾಂಗಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 10 ಗಂಟೆಗೆ ಸೊಸೈಟಿಯ ಸಭಾಭವನದಲ್ಲಿ ವಾರ್ಷಿಕ ಸರ್ವ ಸಾಧಾರಣ ಸಭೆ ಜರುಗಿ, 11 ರಿಂದ 3ಗಂಟೆಯ ವರೆಗೆ, ಬಸವರಂಗ ಮಂಟಪದಲ್ಲಿ ಜಾನಪದ ಕಲಾ ತಂಡದಿಂದ ಕಾರ್ಯಕ್ರಮ ಮುಂದುವರೆಯುವುದು ಎಂದರು.
ಸಂಸ್ಥೆಯ ಉಪಾಧ್ಯಕ್ಷ ಗಿರೀಶ ಢವಳೇಶ್ವರ ಮಾತನಾಡಿ, ಕಾರ್ಯಕ್ರಮದಲ್ಲಿ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ, ಅಂಕಲಗಿ – ಕುಂದರಗಿಯ ಶ್ರೀ ಅಮರಸಿದ್ಧೇಶ್ವರ ಸ್ವಾಮೀಜಿ, ಅರಬಾವಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಜಿ, ಮೂಡಲಗಿಯ ಶ್ರೀ ದತ್ತಾತ್ರೇಯ ಬೋಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬಡಿಗೇರ ಮಾತನಾಡಿ, ಸಂಸ್ಥೆಯ ಅಧ್ಯಕ್ಷ ಬಸವರಾಜ ತೇಲಿ ಯವರ ಅಧ್ಯಕ್ಷತೆಯಲ್ಲಿ, ಶಾಸಕ ಹಾಗೂ ಸಚಿವರಾದ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ವರ್, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಆಗಮಿಸುವರು. ಬೆಳಗಾವಿ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಸುರೇಶಗೌಡ, ಉಪನಿಬಂಧಕ ಎಂ.ಎಸ್.ಮನಿ, ಬೈಲಹೊಂಗಲದ ಸಹಾಯಕ ನಿಬಂಧಕ ಶ್ಯಾಯಿನ್ ಅಕ್ತರ ಭಾಗವಹಿಸುವರು ಎಂದು ಮಾಹಿತಿ ನೀಡುತ್ತಾ, ಸಾಯಂಕಾಲ 6 ಗಂಟೆಗೆ ಶಮಿತಾ ಮಲ್ನಾಡ್ ಹಾಗೂ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಸ್.ಎಸ್. ಹಿರೇಮಠ, ಆರ್.ಐ. ಬಗೋಜಿ, ಸಿ.ಬಿ. ಬಡ್ಡಿ, ಎಸ್.ವಾಯ್. ಮದಗನ್ನವರ, ಡಿ.ಎಫ್. ಕೌಜಲಗಿ, ಎಲ್.ಬಿ. ಕೆಳಗಡೆ, ಎಂ.ಬಿ. ಢವಳೇಶ್ವರ,ಉಪಸ್ಥಿತರಿದ್ದರು.