ಬೈಲಹೊಂಗಲದ ಶ್ರೀ ಬಗಳಾಂಬಾದೇವಿ ಜಾತ್ರಾ ಮಹೋತ್ಸವ: ಏಪ್ರಿಲ್ 13 ಹಾಗೂ 14 ರಂದು ಆಯೋಜನೆ

Ravi Talawar
WhatsApp Group Join Now
Telegram Group Join Now

ಬೈಲಹೊಂಗಲ,ಏ.08: ನಗರದ ಹೊಸೂರು ರಸ್ತೆಯಲ್ಲಿರುವ ಶ್ರೀ ಬಗಳಾಂಬಾದೇವಿ ಜಾತ್ರಾ ಮಹೋತ್ಸವ ಏಪ್ರಿಲ್ ೧೩ ಮತ್ತು ೧೪ ರಂದು ಎರಡು ದಿನಗಳ ಕಾಲ ಅತ್ಯಂತ ಅದ್ಧೂರಿಯಾಗಿ ಜರುಗಲಿದೆ.

ಶನಿವಾರ ಏಪ್ರಿಲ್ 13 ರಂದು ದೇವಿಗೆ ಪೂಜೆ, ಅಭಿಷೇಕ ಮಧ್ಯಾಹ್ನ12ಗಂಟೆಗೆ ಧರ್ಮಸಭೆ ಮತ್ತು ಸಂಜೆ 6 ಗಂಟೆಗೆ ಮಹಾತ್ಮರಿಂದ ಧರ್ಮಸಭೆ ರಾತ್ರಿ ಭಕ್ತರಿಂದ ಭಜನಾ ಕಾರ್ಯಕ್ರಮ ಜರುಗಲಿದೆ.

ದಿವ್ಯ ಸಾನಿಧ್ಯವನ್ನು ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಮಹಾಸ್ವಾಮಿಗಳು, ಬೈಲಹೊಂಗಲ ಮೂರುಸಾವಿರ ಮಠದ ಪ್ರಭು ನೀಲಕಂಠ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಬೈಲಹೊಂಲದ ಶ್ರೀ ಬಗಳಾಂಬಾದೇವಿ ದೇವಸ್ಥಾನದ ಧರ್ಮಾಧಿಕಾರಿ ಡಾ.ವೀರಯ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಜೊತೆಗೆ ಚಿಪ್ಪಲಕಟ್ಟಿಯ ಡಾ. ಕಲ್ಮೇಶ್ವರ ಮಹಾಸ್ವಾಮಿಗಳು ಹಿರೇಮಠ, ಬೈಲಹೊಂಗಲ ರುದ್ರಾಕ್ಷಿಮಠದ ಬಸಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ರವಿವಾರ ಏಪ್ರಿಲ್ 14 ರಂದು ಹೂಲಿ ಸಾಂಬಯ್ಯನವರ ಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ, ನೇಸರಗಿ ಅಂಬಾದೇವಿಮಠದ ವೀರಪ್ರಭು ಪಂಡತಾರಾಧ್ಯ ಶಿವಾಚಾರ್ಯರ ಸ್ವಾಮೀಜಿ ಸಾನಿಧ್ಯ, ಬೈಲಹೊಂಗಲ ಬಗಳಾಂಬಾದೇವಿ ದೇವಸ್ಥಾನದ ಧಮಾಧಿಕಾರಿ ವೀರಯ್ಯ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಬೆಳಗ್ಗೆ ರುದ್ರಗಣಹೋಮ, ಮಧ್ಯಾಹ್ನ ಬಗಳಾಂಬಾದೇವಿ ಪ್ರಶಸ್ತಿ ವಿತರಣೆ, ಸಂಜೆ ಮಹಾತ್ಮರಿಂದ ಧರ್ಮಸಭೆ, ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ. ನಂತರ ರಾತ್ರಿ ದೀಪೋತ್ಸವ ಹಾಗೂ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಇರಲಿದೆ. ಇದರೊಂದಿಗೆ ಜಾತ್ರೆಯು ಸಂಪನ್ನಗೊಳ್ಳಲಿದೆ. ಜಾತ್ರಾ ಮಹೋತ್ಸವದಲ್ಲಿ ನಾಡಿನ ಗಣ್ಯ ಮಠಾಧೀಶರು, ಶರಣ ಬಳಗ ಭಾಗವಹಿಸಲಿದೆ.

ಜಾತ್ರೆಯಲ್ಲಿ ಸುತ್ತಲಿನ ಭಕ್ತಗಣ ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
Share This Article