ಬಳ್ಳಾರಿ,ಅ.೨೩: ನಗರದಲ್ಲಿರುವ ಅವ್ವಂಬಾವಿಯ ಕಾಲುವೆ ಹತ್ತಿರ ಇರುವ ಗುರುಶಾಂತಪ್ಪ ಲೇಔಟ್ನಲ್ಲಿಯ ಸೀತಾರಾಮ ಆಶ್ರಮದಲ್ಲಿ ಶರನ್ನವರಾತ್ರಿ ಉತ್ಸವಗಳಲ್ಲಿ ಏಳನೇ ದಿನದ ಪ್ರಯುಕ್ತ ಸೋಮವಾರÀದಂದು ಮಹಾಕಾಳಿದೇವಿಗೆ ಅಲಂಕಾರ ಮಾಡಲಾಗಿತ್ತು.ನವದುರ್ಗೆಯರಲ್ಲಿ ಕಾಳರಾತ್ರಿ, ದಶಮಹಾವಿದ್ಯೆಗಳಲ್ಲಿ ಧೂಮಾವತಿಮಹಾವಿದ್ಯೆ, ದೇವಿಗಳಿಗೆ ಪುಷ್ಪಾರ್ಚನೆ, ಶ್ರೀ ಮಹಾಲಕ್ಷ್ಮೀದೇವಿ ಗೆ ಸಹಸ್ರನಾಮ ಕುಂಕುಮಾರ್ಚನೆ, ವಿಶೇಷ ಪೂಜೆಗಳನ್ನು ನಡೆಸಲಾಗಿದೆ.
ರುದ್ರಾಭಿಷೇಕಗಳು, ಪೂಜಾಹೋಮಗಳು ಇತ್ಯಾದಿ ಪೂಜೆಗಳು ನಡೆದಿವೆ. ಹೀಗೆಯೇ ವಿಜಯದಶಮಿವರೆಗೆ ಬಿಲ್ವಾರ್ಚನೆ, ತುಳಸಿದಳ ಅರ್ಚನೆ ಹೀಗೆ ವಿಶೇಷ ಪೂಜೆಗಳು ನಡೆಯಲಿವೆ.೨೪-೧೦-೨೦೨೩ (ಮಂಗಳವಾರ) ರಂದು ವಿಜಯದಶಮಿಯ ಪ್ರಯುಕ್ತ ಶ್ರೀ ರಾಜರಾಜೇಶ್ವರೀದೇವಿ ಅಲಂಕಾರ.
ದಸರಾ, ಬನ್ನಿಪೂಜೆ ವಿಶೇಷ ಪೂಜೆಗಳನ್ನು ನಿರ್ವಹಿಸುತ್ತಾರೆ.
ಈ ಪೂಜೆಗಳೆಲ್ಲವೂ ಪ್ರಸಿದ್ಧ ವಾಸ್ತು,ಜ್ಯೋತಿಷ್ಯ ಪಂಡಿತರು, ಚತುರ್ವೇದ ಪಂಡಿತರು ಹಾಗೂ ಸೀತಾರಾಮ ಆಶ್ರಮಮ್ ಟ್ರಸ್ಟ್ ನ ಅಧ್ಯಕ್ಷರು ಆದ ಶ್ರೀ ನೇತಿ ಸೀತಾರಾಮಯ್ಯ ಶರ್ಮ ಸಿದ್ಧಾಂತಿಯವರ ನೇತೃತ್ವದಲ್ಲಿ ನಡೆಯುತ್ತಲಿವೆ.