ಮೂಡಲಗಿ : ಬರುವ ಅ.3 ರಂದು ಬೆಳಗಾವಿಯಲ್ಲಿ ಹಾಲುಮತ ಸಮಾಜದ ಶೇಪರ್ಡ್ ಇಂಡಿಯಾ 9ನೇ ರಾಷ್ಟ್ರೀಯ ಸಮಾವೇಶ ಜರುಗತಲಿದ್ದು, ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ ಎಂದು ಅರಭಾವಿಯ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.
ಶುಕ್ರವಾರದಂದು ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾವೇಶದಲ್ಲಿ ರಾಜ್ಯದ ಜನತೆಗೆ ಅನೇಕ ಜನಪರ ಯೋಜನೆಗಳನ್ನು ಕಲ್ಪಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಕಾಗಿನೆಲೆ ಪೀಠದ ನಿರಂಜನಂದಪುರಿ ಮಹಾಸ್ವಾಮೀಜಿ ಸೇರಿದಂತೆ ಅನೇಕ ಗಣ್ಯ ಮಾನ್ಯರು ಭಾಗವಹಿಸಿದ್ದು, ನಮ್ಮ ಅರಭಾವಿ ಕ್ಷೇತ್ರದಿಂದ ಬೆಳಗಾವಿಗೆ ಹೋಗಲು ವೈಯಕ್ತಿಕವಾಗಿ 50 ಕ್ರೂಸರ್ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಹಾಲುಮತ ಹಾಗೂ ಅನೇಕ ಹಿಂದುಳಿದ ಸಮಾಜ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ಸಮಾವೇಶ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾಲಪ್ಪ ಪೂಜೇರಿ, ಸುಭಾಸ ಲೋಕನ್ನವರ್, ಪಾರಿಸ್ ಉಪ್ಪಿನ, ಸದಾಶಿವ ಆಲೋಸಿ, ಸಿದ್ಧಪ್ಪ ಕುರುಬರ, ಸದಾಶಿವ ನಾವಿ, ಲಕ್ಷ್ಮಣ ಕುರುಬರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.