This is the title of the web page
Left Banner (Left Skyscraper)
Right Banner (Right Skyscraper)

ಸಹಕಾರಿ ಕ್ಷೇತ್ರದಲ್ಲಿ ಲಾಭಕ್ಕಿಂತ ಸೇವೆ ಮುಖ್ಯ: ಹಿರೇಮಠ

0 8

ಧಾರವಾಡ: ಸಹಕಾರಿ ಕ್ಷೇತ್ರದಲ್ಲಿ ಲಾಭಕ್ಕಿಂತ ಸೇವೆ ಮುಖ್ಯ. ‘ವ್ಯಕ್ತಿಗಾಗಿ ಸಮಾಜ ಮತ್ತು ಸಮಾಜಕ್ಕಾಗಿ ವ್ಯಕ್ತಿ’ ಎಂಬುದು ಸಹಕಾರಿ ತತ್ವವಾಗಿದೆ ಎಂದು ಧಾರವಾಡದ ಪಿ.ಎಲ್.ಡಿ. ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಸಿ.ಜಿ. ಹಿರೇಮಠ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಎಸ್.ಎಂ. ಹೊಳೆಯಣ್ಣವರ ದತ್ತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಸಹಕಾರಿ ಚಳುವಳಿ ಪ್ರಗತಿ’ ವಿಷಯ ಕುರಿತು ನೀಡಿದ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಪ್ರಪ್ರಥಮ ಸಹಕಾರಿ ಸಂಘವು 1905 ರಲ್ಲಿ ಅವಿಭಜಿತ ಧಾರವಾಡ ಜಿಲ್ಲೆ ಗದಗ ತಾಲೂಕಿನ ಕಣಗಿನಹಾಳದಲ್ಲಿ ಪ್ರಾರಂಭವಾದದ್ದು, ಕನ್ನಡಿಗರಿಗೆಲ್ಲಾ ಹೆಮ್ಮೆಯ ವಿಚಾರ. ಹೀಗಾಗಿ ಧಾರವಾಡ ಜಿಲ್ಲೆಯನ್ನು ‘ಸಹಕಾರಿ ಚಳುವಳಿಯ ತೊಟ್ಟಿಲು’ ಎಂದು ಕರೆಯುತ್ತಾರೆ. ನಂತರದಲ್ಲಿ ರಾಜ್ಯದ ಬೇರೆ ಬೇರೆ ಕಡೆ ವಿವಿಧ ಸಹಕಾರಿ ಸಂಘಗಳು ಸ್ಥಾಪನೆಯಾದವು ಎಂದರು.

ಪ್ರೊ. ಎಸ್.ಎಸ್. ದೇಸಾಯಿ, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮಾರ್ಕಂಡೇಯ ದೊಡಮನಿ, ವೀರಣ್ಣ ಒಡ್ಡೀನ, ಶಂಕರ ಕುಂಬಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಜಗದೀಶ ಹೊಳೆಯಣ್ಣವರ, ಬಸವಪ್ರಭು ಹೊಸಕೇರಿ, ಎಸ್.ಜಿ. ಪಾಟೀಲ, ಡಾ. ಸಿ.ಡಿ. ಲಕ್ಕಣ್ಣವರ, ಮಾರ್ಕಂಡೇಯ ದೊಡಮನಿ, ಎಸ್.ಎಂ. ರಾಚಯ್ಯನವರ, ಅಭಿಷೇಕ ದೇಸಾಯಿ, ರಾಮಣ್ಣ ಪಾಟೀಲ, ಬಿ.ಎಚ್. ಚವಡಿ, ಶರಣಪ್ಪ ಬೂದಿಹಾಳ, ಎಂ.ಎಸ್. ನರೇಗಲ್, ಎನ್.ಬಿ. ಗೋಲಣ್ಣವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

You might also like
Leave a comment