ಸವದತ್ತಿ : ಸವದತ್ತಿ ತಾಲೂಕನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಪಡೆಸಲಾಗುವುದು ಹಾಗೂ ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಕಲ ಸೌಕರ್ಯ ಒದಗಿಸಿ, ರಿಂಗ್ ರೋಡ್, ಅನ್ನಪ್ರಸಾದ ನಿಲಯ, ಪಾರ್ಕಿಂಗ್ ಸೇರಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದೆಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ಇಲ್ಲಿನ ಗಂಗಾ ಕಲ್ಯಾಣ ಮಂಟಪದಲ್ಲಿ ಹನಮಗೇರಿ ಓಣಿ ಹಾಗೂ ಜನತಾ ಕಾಲನಿ ಕಾಂಗ್ರೇಸ್ ಕಾರ್ಯಕರ್ತರಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ಈ ಕುರಿತು ಪ್ರವಾಸೋಧ್ಯಮ ಸಚಿವ ಎಚ್.ಕೆ. ಪಾಟೀಲ ಅವರಿಂದ ಸಕಾರಾತ್ಮಕ ಸ್ಪಂಧನೆಯೂ ದೊರೆತಿದೆ. ಕುಕ್ಕೆ, ಫಂಡರಪೂರ ಕಾರಿಡಾರ್ ಮಾದರಿಯಲ್ಲಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪಡಿಸಲಾಗುವದು ಹಾಗೂ ಸವದತ್ತಿ ನಗರವನ್ನು ಸುಂದರಿಕರಣ ಮಾಡಲಾಗುವುದು ಎಂದರು.
ಇದೆ ವೇದಿಕೆಯಲ್ಲಿ ರಾಜಶೇಖರ ಕಾರದಗಿ, ದೀಪಕ ಜಾನ್ವೇಕರ, ಸುಭಾಸ ರಜಪೂತ, ಚಂದ್ರಣ್ಣ ಶಾಮರಾಯನವರ, ಪ್ರಭು ಪ್ರಭುನವರ, ಅಶ್ವತ ವೈದ್ಯ, ಅಡಿವೆಪ್ಪ ಸಿಂಗಾಡಿ, ಬಸವರಾಜ ಆಯಟ್ಟಿ, ಮಲ್ಲು ಜಕಾತಿ, ಶಿವು ಶಿಂತ್ರಿ ಅವರನ್ನು ಸನ್ಮಾನಿಸಲಾಯಿತು.
ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ, ಬೆಡಸೂರ ಮಠದ ಅಜ್ಜಯ್ಯ ಸ್ವಾಮಿಜಿ, ರಾಜಾರಾಮ ಮಠದ ಗಂಗಾಧರ ದಿಕ್ಷಿತರು ಸಾನಿಧ್ಯವಹಿಸಿದ್ದರು.
ಈ ವೆಳೆ ಕಲ್ಲಪ್ಪ ಪೂಜೇರ ಯಲ್ಲಪ್ಪ ಬಜೇರಿ, ಹುಸೇನಸಾಬ ನಧಾಪ, ಉಮೇಶ ಬ್ಯಾಹಟ್ಟಿ,ಮಲ್ಲಿಕಾರ್ಜುನ ಕತ್ತಿ, ನಾಗಪ್ಪ ಬಜೇರಿ, ಬಸವರಾಜ ಬ್ಯಾಹಟ್ಟಿ, ಕಲ್ಲಪ್ಪ ಬ್ಯಾಹಟ್ಟಿ, ಅಡಿವೆಪ್ಪ ಬಜೇರಿ, ಬಸು ವರವಣ್ಣವರ ಇದ್ದರು.
ಸವದತ್ತಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡೆಸುವೆ : ವಿಶ್ವಾಸ ವೈದ್ಯ

Leave a comment
Leave a comment