This is the title of the web page

ಭಾರತ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಕಾಂಗ್ರಸ್ ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಹೇರಿದ್ದು.ಸಂಜಯ ಪಾಟೀಲ

0 105

ಬೆಳಗಾವಿ:ನೈಸರ್ಗಿಕ ವಿಕೋಪ, ಯುದ್ಧಕಾಲ ಅಥವ ಪರದೇಶದ ಆಕ್ರಮಣದಿಂದ, ಅರ್ಥಿಕ ದಿವಾಳಿಯಿಂದ ಸಾರ್ವಜನಿಕ ಅಶಾಂತಿಯ ಪರಿಸ್ಥಿತಿಗಾಗಿ ತರಬೇಕಾಗುದ್ದ ತುರ್ತು ಪರಿಸ್ಥಿತಿಯನ್ನು ಕಾಂಗ್ರೆಸ್ ತನ್ನ ಅಧಿಕಾರ ಕಳೆದು ಕೊಳ್ಳವ ಭಯದಿಂದ ಭಾರತದಲ್ಲಿ ತುರ್ತು ಪರಿಸ್ಥಿತಿ ತಂದಿರುವದು ದೇಶದಲ್ಲಿ ಇದೊಂದು ಕರಾಳ ದಿನ ಎಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ನಗರದ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 47ನೇ ವರ್ಷದ ಕರಾಳ ದಿನಾಚರಣೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ,
ಭಾರತದಲ್ಲಿ ತುರ್ತು ಪರಿಸ್ಥಿತಿಯುನ್ನು 1975 ಜೂನ್ 25 ರಿಂದ 21ಮಾರ್ಚ್ 1977ರವರೆಗೆ ಆ ಕರಾಳ ಕಾನೂನು ಜಾರಿಯಲ್ಲಿತ್ತು ಎಂದರು.
ರಾಜ್ಯ ವಕ್ತಾರರಾದ ಎಮ್.ಬಿ.ಝೀರಲಿ ಮಾತನಾಡಿ, ಕಾನೂನು ಬಾಹಿರವಾಗಿ ಇಂದಿರಾಗಾಂಧಿಯವರ ಮಾತು ಕೇಳಿ ಆಗಿನ ರಾಷ್ಟ್ರಪತಿಗಳಾಗಿದ್ದ ಫಕ್ರುದೀನ್ ಅಲಿ ಅಹ್ಮದ್ ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದು 21 ತಿಂಗಳುಗಳ ಕಾಲ ಮುಂದುವರೆಸಿದರು. ಪ್ರಧಾನಮಂತ್ರಿ ಇಂದಿರಾಗಾಂಧಿಯವರಿಂದ ಜಾರಿಯಾದ ಈ ತುರ್ತುಪರಿಸ್ಥಿತಿಯು ಅವರ ಸರ್ವಾಧಿಕಾರಿ ಆಡಳಿತವನ್ನು ಸೂಚಿಸಿತ್ತು ಎಂದರು.
ಈ ಅಭಿಯಾನದ ರಾಜ್ಯ ಸಂಚಾಲಕರಾದ ಅರ್.ಎಸ್.ಮುತಾಲಿಕ ಮಾತನಾಡಿ, ರಾಯಭರೆಲಿಯಲ್ಲಿ ಗೆದ್ದು ಬಿಗಿದ್ದ ಇಂದಿರಾ ಗಾಂಧಿಯವರ ಗೆಲವನ್ನು ಅಲಹಾಬಾದ್ ಹೈಕೋರ್ಟ ಅಸಿಂಧುಗೊಳಿಸಿ ಆದೇಶ ಹೊರಡಿಸಿದ್ದನ್ನು ಸಹಿಸಿಕೊಳ್ಳದೆ ಸರ್ವೋಚ್ಚ ನ್ಯಾಯಲಯದಲ್ಲಿ ಮೇಲ್ಮನವಿ ಸಲ್ಲಿಸಿದಾಗ ಸರ್ವೋಚ್ಛ ನ್ಯಾಯಾಲಯ ಅಲಹಾಬಾದ್ ಹೈಕೋರ್ಟಿನ ತಿರ್ಪನ್ನು ಎತ್ತಿ ಹಿಡಿದು ಇಂದಿರಾಗಾಂಧಿಯವರಿಗೆ ಆರು ವರ್ಷ ಚುನಾವಣೆಯಲ್ಲಿ ಭಾಗವಹಿಸದಂತೆ ನಿಷೇಧ ಹೆರಿದ್ದರಿಂದ‌ ತಮ್ಮ ಸ್ವಾರ್ಥಸಾಧನೆಗಾಗಿ ದೇಶದಲ್ಲಿ
ತುರ್ತುಪರಿಸ್ಥಿತಿ ಜಾರಿತಂದ ಕುಖ್ಯಾತಿಗೆ ಹೆಸರಾದರು. ಈ ಸಮಯದಲ್ಲಿ ಚುನಾವಣೆಗಳಿಗೆ ಬಹಿಷ್ಕಾರ ಹಾಕಿ, ನಾಗರೀಕ ಹಕ್ಕುಗಳನ್ನು ನಿಷೇದಿಸಲಾಯಿತು. ಪತ್ರಿಕಾ ಸ್ವಾತಂತ್ರ್ಯ ಕಸಿದುಕೊಂಡು ದೇಶದ ಕಾನೂನುಗಳನ್ನು ಅಮಾನತ್ತಿನಲ್ಲಿಟ್ಟಿರುವದು ದೇಶದ ದುರ್ದೈವ ಹಾಗೂ ಇದಕ್ಕೆ ಪ್ರತಿರೋದ ಒಡ್ಡಿದ ಹೆಚ್ಚಿನ ರಾಷ್ಟ್ರಪ್ರೇಮಿಗಳು ಜೈಲು ಶಿಕ್ಷೆ ಅನುಭವಿಸಬೇಕಾಯಿತು ಮತ್ತು ಇದನ್ನು ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳನ್ನು ಬಂದಿಸಲಾಯಿತು ಈ ಮೂಲಕ ಸ್ವಾತಂತ್ರ್ಯಭಾರತದ ಇತಿಹಾಸದಲ್ಲಿ ತುರ್ತುಪರಿಸ್ಥಿತಿಯು ಅತ್ಯಂತ ಕಷ್ಟದ ಕಾಲವಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಷಾಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ, ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ವೀರಭದ್ರ ಪೂಜೆರ,ಸಂತೋಷ ದೇಶನೂರ ಯಲ್ಲೆಶ್ ಕೊಲಕಾರ, ಮಾರುತಿ ಕೊಪ್ಪದ, ಡಾ.ಸೋನಾಲಿ ಸೋನೊಭರ್ತ, ರಂಜನಾ ಕೊಲಕಾರ, ಆನಂದ ಮೂಡಲಗಿ, ಉಮೇಶ ಪೂರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಇದ್ದರು.

You might also like
Leave a comment