ಸ್ಯಾಮ್ ಪಿತ್ರೋಡಾ ಒಬ್ಬ 420 ಎಂದ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

Ravi Talawar
WhatsApp Group Join Now
Telegram Group Join Now

ಬೆಂಗಳೂರು,09: ದೇಶದ ಜನ ಅದರಲ್ಲೂ ಭಾರತೀಯರು ಅವಮಾನಪಡುವಂತಹ ಘಟನೆ ಕಾಂಗ್ರೆಸ್‌ನಿಂದ ಆಗಿದೆ. ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಈ ಸ್ಥಿತಿಗೆ ತಂದಿದ್ದಾರೆ. ಅವರೊಬ್ಬ 420 ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದರು.

ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಭಾರತ ಕಾಂಗ್ರೆಸ್‌ಗೆ ಅಧ್ಯಕ್ಷರು, ಪಿತ್ರೋಡಾ ಇಡೀ ಜಗತ್ತಿನ ಕಾಂಗ್ರೆಸ್​ಗೆ ಅಧ್ಯಕ್ಷ, ಇವರು ಪಿತ್ರೋಡಾ ಅಲ್ಲ, ಕಾಂಗ್ರೆಸ್ ಪಾಲಿಗೆ ತಿಥಿ ಎಂದರು.

ದೇಶವನ್ನು ಛಿದ್ರಗೊಳಿಸವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಈ ಹಿಂದೆ ಡಿ.ಕೆ.ಸುರೇಶ್ ದೇಶ ವಿಭಜನೆ ಹೇಳಿಕೆ ನೀಡಿದ್ದರು. ಈಗ ಇವರ ಜನಾಂಗೀಯ ದ್ವೇಶದಿಂದ ಸಾಕಷ್ಟು ಜನರ ಪ್ರಾಣಹಾನಿಯಾಗಿದೆ. ಗಾಂಧಿ, ನೆಲ್ಸನ್ ಮಂಡೇಲಾ ಬಂದ ನಂತರ ಇದು ಕಡಿಮೆಯಾಯಿತು. ಆದರೆ, ಕಾಂಗ್ರೆಸ್ ಡಿಎನ್ಎ ಅಲ್ಲೇ ಒಡೆದಾಳುವ ನೀತಿ ಎಂದು ಹೇಳಿದರು.

ಪಿತ್ರೋಡಾ ರಾಜೀನಾಮೆ ಕೊಟ್ಟ ತಕ್ಷಣ ಸಮಸ್ಯೆ ಬಗೆಹರಿಯಲ್ಲ. ಅವರು ಹುಟ್ಟುಹಾಕಿರುವ ಈ ಮನಸ್ಥಿತಿ ದೇಶದಲ್ಲಿ ಚರ್ಚೆಯಾಗುತ್ತಿದೆ. ದೇಶದಲ್ಲಿ ಬಣ್ಣ ಕಟ್ಟಲು ಹೋದರೆ ದಕ್ಷಿಣ ಭಾರತದವರು ಆಫ್ರಿಕಾದವರು ಎಂದಿದ್ದಾರೆ. ನಮಗೆ 5 ಸಾವಿರ ವರ್ಷದ ಇತಿಹಾಸ ಇದೆ. ರಾಮಾಯಣ, ಮಹಾಭಾರತ ಹಿನ್ನೆಲೆ ಇದೆ. ಆದರೆ, ಪಿತ್ರೋಡಾ ಏಕಾಏಕಿ ನಮ್ಮನ್ನು ಆಫ್ರಿಕಾದ ಕಾಡಿಗೆ ಬಿಟ್ಟಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ವಾಸ ಮಾಡುವ ಒಕ್ಕಲಿಗ, ಲಿಂಗಾಯಿತ, ಒಬಿಸಿ, ದಲಿತರಿಗೆ ಯಾವ ಬಣ್ಣ ಹಚ್ಚುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ನುಡಿದಂತೆ ನಡೆಯುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿ ಕೊಟ್ಟಿದ್ದಾರೆ. ಅದು ಯಾವುದೆಂದರೆ ಬಿಳಿ, ಕಪ್ಪು, ಚೈನೀಸ್, ಆಫ್ರಿಕನ್, ಅರಬ್ಭಿ ಗ್ಯಾರಂಟಿ ಕೊಟ್ಟಿದ್ದಾರೆ. ಇನ್ನು ಮುಂದೆ ಈ ಗ್ಯಾರಂಟಿಗಳನ್ನೇ ಅವರು ಹೇಳಬೇಕೆಂದು ವಾಗ್ದಾಳಿ ನಡೆಸಿದರು.

ಸೋನಿಯಾ ಗಾಂಧಿ ಇಟಲಿಯಿಂದ ಬಂದರೂ ಅವರನ್ನು ಬಣ್ಣದಿಂದ ನೋಡಲಿಲ್ಲ. ಈ ದೇಶದ ಸೊಸೆ ಎಂದು ಒಪ್ಪಿಕೊಂಡಿದ್ದೇವೆ, ರಾಹುಲ್ ಸೋತ ನಂತರ ಇಟಲಿಗೆ ಹೋಗುತ್ತಾರೆ ಎಂದು ಗೊತ್ತಿದ್ದರೂ ಅವರನ್ನು ನಾವು ಭಾರತೀಯರೆಂದು ಒಪ್ಪಿಕೊಂಡಿದ್ದೇವೆ, ಪಶ್ಚಿಮಕ್ಕೆ ಬಂದವರು ಅರಬ್ಬರು ಎನ್ನುವುದಾದರೆ ಮಹಾರಾಷ್ಟ್ರದಲ್ಲಿ ಹುಟ್ಟಿದ ಅಂಬೇಡ್ಕರ್, ಗುಜರಾತಿ​ನಲ್ಲಿ ಜನಿಸಿದ ಮಹಾತ್ಮ ಗಾಂಧಿ ಯಾರು? ಎಲ್ಲಿಯವರು? ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದವರು, ಅವರು ಆಫ್ರಿಕಾದವರಾ?, ಬಾಲಗಂಗಾಧರ ಶ್ರೀ, ಸಿದ್ದಗಂಗಾ ಶ್ರೀ ಇವರೆಲ್ಲ ಆಫ್ರಿಕಾದವರಾ? ಎಂದು ಗುಡುಗಿದ ಆಕ್ರೋಶ, ಪ್ರಧಾನಿ ಮೋದಿ ಹೆಸರು ಹೇಳಿದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿದ್ದ ಸಚಿವ ಶಿವರಾಜ್ ತಂಗಡಗಿ ಅವರೇ ಈಗ ಪಿತ್ರೊಡಾ ಅವರನ್ನು ಯಾವುದರಲ್ಲಿ ಹೊಡೆಯುತ್ತೀರಿ ಹೇಳಿ ಎಂದು ತಿರುಗೇಟು ನೀಡಿದರು.

WhatsApp Group Join Now
Telegram Group Join Now
Share This Article