This is the title of the web page
Left Banner (Left Skyscraper)
Right Banner (Right Skyscraper)

ಕೇಸರಿಯಮಯವಾದ ಮುದ್ದೇಬಿಹಾಳ

ಗ್ರಾಮದೇವತೆ ದ್ಯಾಮವ್ವ,ಶಾರದಾ ದೇವಿ ಮೂರ್ತಿಗಳ ಭವ್ಯ ಮೆರವಣಿಗೆ

0 406

ಮುದ್ದೇಬಿಹಾಳ : ಪಟ್ಟಣದ ಗ್ರಾಮದೇವತೆ ಜಾತ್ರೋತ್ಸವದಂಗವಾಗಿ ಶುಕ್ರವಾರ ದ್ಯಾಮವ್ವ ದೇವಿ ಹಾಗೂ ಶಾರದಾ ದೇವಿ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಿತು.

ಪಟ್ಟಣದ ಕಿಲ್ಲಾದ ಹೊಸಮಠದ ಬಳಿಯ ಗಂಗಸ್ಥಳದಿಂದ ಇಬ್ಬರು ದೇವಿಯರ ಣಿಗೆ ನಡೆಯಿತು.

ಪಟ್ಟಣದ ಕಿಲ್ಲಾದ ಹೊಸಮಠದ ಬಳಿಯ ಗಂಗಸ್ಥಳದಿಂದ ಇಬ್ಬರು ದೇವಿಯರ ಮೂರ್ತಿಗಳನ್ನು ಸಕಲ ವಾದ್ಯವೈಭವಗಳೊಂದಿಗೆ ಮೆರವಣಿಗೆಯನ್ನು ಆರಂಭಿಸಲಾಯಿತು.ಸರಾಫ ಬಜಾರ್ ಮಾರ್ಗವಾಗಿ ಬಸವೇಶ್ವರ ಸರ್ಕಲ್,ಸಂಗೊಳ್ಳಿ ರಾಯಣ್ಣ ಸರ್ಕಲ್ ,ಶ್ರೀ ಗಣಪತಿ,ಶ್ರೀ ರಾಘವೇಂದ್ರ,ಶ್ರೀ ಶಾರದಾ ದೇವಿ,ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಮಾರ್ಗವಾಗಿ ದ್ಯಾಮವ್ವನ ಕಟ್ಟೆಗೆ ಆಗಮಿಸಲಾಯಿತು.

ಮೆರವಣಿಗೆಯಲ್ಲಿ ಚಿಕ್ಕಮಗಳೂರಿನ ಮಹಿಳಾ ವೀರಗಾಸೆ,ತುಮಕೂರಿನ ಗಾರುಡಿಗ ಗೊಂಬೆ ಬಳಗ,ಉಡುಪಿಯ ಚಂಡಿ ವಾದ್ಯ,ವಿಶೇಷ ಹಣಮಂತ ಮೂರ್ತಿ,ತೆಲಗಿಯ ಕರಡಿ ಮಜಲು,ಸ್ಥಳೀಯ ಸನಾದಿ,ಬ್ಯಾಂಡ್‌ಸೆಟ್,ಕುದುರೆ ಕುಣಿತ,ಹಲಗಿ ಮೇಳ,ಜೋಗತಿ ನೃತ್ಯ ಗಮನ ಸೆಳೆದವು.

ಮೆರವಣಿಗೆಯುದ್ದಕ್ಕೂ ಯುವಕರು ವಿವಿಧ ವಾದ್ಯಗಳಿಗೆ ಭರ್ಜರಿ ಸ್ಟೆಪ್ ಹಾಕಿದರು.ಅಲ್ಲದೇ ಮುದ್ದೇಬಿಹಾಳದ ತುಂಬೆಲ್ಲ ಕೇಸರಿ ಬಣ್ಣವೇ ತುಂಬಿತ್ತು.ಹಿಂದೂ ಮುಸ್ಲಿಂರೆನ್ನದೇ ಭಾವೈಕ್ಯತೆಯನ್ನು ಪಟ್ಟಣದ ಜನರು ತೋರಿದರು.ಮೆರವಣಿಗೆಯಲ್ಲಿ ಪುರಸಭೆ ಆಡಳಿತ ಮಂಡಳಿ,ಊರಿನ ಗಣ್ಯರು,ಜಾತ್ರಾ ಸಮಿತಿಯ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಇದ್ದರು.

ಮಜ್ಜಿಗೆ ಸೇವೆ: ಪಟ್ಟಣದ ಗಣ್ಯ ವರ್ತಕ ಪವನ್ ಸುಕಾಲಿ ಅವರು ತಮ್ಮ ತಂದೆ ದಿ.ಬಸವರಾಜ ಸುಕಾಲಿ ಸ್ಮರಣಾರ್ಥವಾಗಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಸಾವಿರಾರು ಜನರಿಗೆ ಮಜ್ಜಿಗೆ ಸೇವೆಗೈಯ್ದರು.ವಿಶೇಷವಾಗಿ ಪ್ಲಾಸ್ಟಿಕ್ ಗ್ಲಾಸ್ ಬಳಸದೇ ಪರಿಸರ ಉಪಯೋಗಿ ಕಪ್ ಬಳಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.

 

ಪಟಾಕಿ ಸದ್ದು ಜೋರು : ಮೆರವಣಿಗೆಯ ಕಳೆ ಹೆಚ್ಚಿಸಲು ಪಟಾಕಿ ಸಿಡಿಸಲಾಯಿತು.ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿ ಆಕಾಶದಲ್ಲಿ ಸ್ಫೋಟಿಸುವ ಪಟಾಕಿಗಳನ್ನು ಹಚ್ಚಲಾಯಿತು.ಜಾತ್ರೆಯಲ್ಲಿ ಪಟಾಕಿ ಬೇಡ ಎಂದು ಆರಂಭಿಕ ಸಭೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಳೇಶ ಗಡೇದ ಅವರ ಮಾತಿಗೆ ಜಾತ್ರಾ ಸಮೀತಿ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ.

 

You might also like
Leave a comment