ಮುಂಬೈ ದಾಳಿಕೋರರ ಸಿಂಹ ಸ್ವಪ್ನ ಸದಾನಂದ ವಸಂತ್ NIA ಡಿಜಿಯಾಗಿ ಅಧಿಕಾರ ಸ್ವೀಕಾರ

Ravi Talawar
WhatsApp Group Join Now
Telegram Group Join Now

ಬೆಂಗಳೂರು ಏ.01: ಎನ್​​ಐಎ ನೂತನ ಡಿಜಿಯಾಗಿ ಸದಾನಂದ್​ ವಸಂತ್ ಅವರಿಗೆ ಸೇವೆಯಿಂದ ನಿವೃತ್ತರಾದ ದಿನಕರ್ ಗುಪ್ತಾರಿಂದ ಅಧಿಕಾರ ಹಸ್ತಾಂತರ ಮಾಡಲಾಯಿತು. ಅವರು ಜೂನ್ 30, 2026 ರಂದು ತಮ್ಮ ನಿವೃತ್ತಿಯಾಗುವವರೆಗೆ ಅಧಿಕಾರಾವಧಿಯನ್ನು ಹೊಂದಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2008ರಲ್ಲಿ ಮುಂಬೈ ಹೋಟೆಲ್ ಮೇಲಿನ ಭಯೋತ್ಪಾದಕರ ದಾಳಿ ವೇಳೆ ಸದಾನಂದ ಅವರು ಮಹಾರಾಷ್ಟ್ರ ATS ಮುಖ್ಯಸ್ಥರಾಗಿದ್ದರು. ಉಗ್ರರನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2008ರಲ್ಲಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಭಾಜನರಾಗಿದ್ದರು.ಮಹಾರಾಷ್ಟ್ರ ಕೇಡರ್‍ನ 1990-ಬ್ಯಾಚ್ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿರುವ ಸದಾನಂದ ಅವರು ಡಿಸೆಂಬರ್ 31, 2026 ರಂದು ಅವರ ನಿವೃತ್ತಿಯ ಅವಧಿಯವರೆಗೆ ಎನ್‍ಐಎಯ ಡೈರೆಕ್ಟರ್ ಜನರಲ್ (ಡಿಜಿ) ಆಗಿ ಸೇವೆ ಸಲ್ಲಿಸಲಿದ್ದಾರೆ

ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಹಿಂಸಾಪೀಡಿತ ಪ.ಬಂಗಾಳದ ಡಿಜಿಪಿ ಹಾಗೂ 6 ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ಚುನಾವಣಾ ಆಯೋಗ ಎತ್ತಂಗಡಿ ಮಾಡಿದೆ. ಸಂದೇಶ್‌ಖಾಲಿ ಹಿಂಸೆಯಿಂದ ಸುದ್ದಿಯಲ್ಲಿರುವ ಪ.ಬಂಗಾಳದ ಡಿಜಿಪಿ ರಾಜೀವ್‌ ಕುಮಾರ್‌ ಅವರನ್ನು ವರ್ಗಾಯಿಸಿರುವ ಆಯೋಗ, ಅವರ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ವಿವೇಕ್‌ ಸಹಾಯ್‌ರನ್ನು ನೇಮಿಸಿದೆ. ಅಲ್ಲದೆ, ಗುಜರಾತ್‌, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಗೃಹ ಕಾರ್ಯದರ್ಶಿಗಳನ್ನೂ ಸಹ ವರ್ಗಾಯಿಸಿದೆ. ಇದಲ್ಲದೆ, ಬೃಹನ್ಮುಂಬಯಿ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು ಮತ್ತು ಉಪ ಆಯುಕ್ತರು ಸೋಮವಾರ ಸಂಜೆ 6 ಗಂಟೆ ಒಳಗೆ ಹುದ್ದೆ ಬಿಡಬೇಕು ಎಂದು ಸೂಚಿಸಿದೆ.

ನೀತಿ ಸಂಹಿತೆ ಜಾರಿಯಾದ ಬಳಿಕ ಚುನಾವಣಾ ಆಯೋಗಕ್ಕೆ ಅಧಿಕಾರಿಗಳನ್ನು ವರ್ಗಾಯಿಸುವ ಪರಮೋಚ್ಚ ಅಧಿಕಾರವಿರುತ್ತದೆ. ಈ ವೇಳೆ, ಆಯೋಗವು ಆಯಾ ರಾಜ್ಯ ಸರ್ಕಾರಗಳಿಗೆ ಹೆಚ್ಚು ನಿಷ್ಠೆ ಹೊಂದಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ನಿಷ್ಪಕ್ಷಪಾತ ಅಧಿಕಾರಿಗಳನ್ನು ನೇಮಿಸುವುದು ಮಾಮೂಲಿ ಕ್ರಮ.

WhatsApp Group Join Now
Telegram Group Join Now
Share This Article