ಲೋಕ ಸಮರದ ಹೊತ್ತಲ್ಲೇ ಕೆಪಿಸಿಸಿ ಪುನರ್ರಚನೆ: ಯಾರ‍್ಯಾರಿಗೆ ಯಾವ್ಯಾವ ಸ್ಥಾನ?

Ravi Talawar
WhatsApp Group Join Now
Telegram Group Join Now

ಬೆಂಗಳೂರು,ಏ.02: ಲೋಕಸಭಾ ಚುನಾವಣೆ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ  ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. 43 ರಾಜ್ಯ ಉಪಾಧ್ಯಕ್ಷರು ಮತ್ತು 138 ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಜೊತೆಗೆ ಏಳು ಜಿಲ್ಲೆಗಳ ಜಿಲ್ಲಾಧ್ಯಕ್ಷರ ನೇಮಕವನ್ನೂ ಮಾಡಲಾಗಿದೆ.

ಮಾಧ್ಯಮ ಮತ್ತು ಸಂವಹನ ಮುಖ್ಯಸ್ಥರಾಗಿ ರಮೇಶ ಬಾಬು ಅವರನ್ನು ನೇಮಕ ಮಾಡಲಾಗಿದ್ದು, ವಿನಯ ಮತ್ತಿಕಟ್ಟಿ ಅವರನ್ನು ಸಾಮಾಜಿಕ‌ ಜಾಲತಾಣ ಸಹ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಹಾಗೂ ವಿನಯ ಕಾರ್ತಿಕ ಅವರನ್ನು ಕೆಪಿಸಿಸಿ ಖಜಾಂಚಿಯಾಗಿ ಮುಂದುವರೆಸಲಾಗಿದೆ. ಕೆಪಿಸಿಸಿ ಪ್ರಚಾರ ಸಮಿತಿ ಸಹ ಮುಖ್ಯಸ್ಥರಾಗಿ ಪಿ.ಟಿ ಪರಮೇಶ್ವರ್ ನಾಯ್ಕ ಅವರನ್ನು ನೇಮಕ ಮಾಡಲಾಗಿದೆ.

ಏಳು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ: ಬಳ್ಳಾರಿ ನಗರ- ಪ್ರಶಾಂತ ಅಲ್ಲಂ ವೀರಭದ್ರಪ್ಪ, ಬೆಂಗಳೂರು ಪೂರ್ವ – ಕೆ. ನಂದಕುಮಾರ, ಹಾವೇರಿ – ಸಂಜೀವಕುಮಾರ ನೀರಲಂಗಿ, ಕೊಪ್ಪಳ – ಅಮರೇಗೌಡ ಬಯ್ಯಾಪುರ, ಉಡುಪಿ – ಕಿಶನ್ ಹೆಗ್ಡೆ, ರಾಯಚೂರು – ಬಸವರಾಜ ಇಟಗಿ, ಶಿವಮೊಗ್ಗ – ಪ್ರಸನ್ನಕುಮಾರ

WhatsApp Group Join Now
Telegram Group Join Now
Share This Article