ಬೆಳಗಾವಿ ಡಿ., 12- ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಕರ್ನಾಟಕ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾಗಿ ಗೋಕಾಕ ತಾಲೂಕಿನ ಕಲ್ಲೊಳಿ ಪಟ್ಟಣದ ಯುವ ಮುಖಂಡರಾದ ರಾವಸಾಹೇಬ ನಿಂಗಪ್ಪ ಬೆಳಕೂಡ ಇವರನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಆಯ್ಕೆ ಮಾಡಿ ಸತ್ಕರಿಸಿದ್ದಾರೆ.
ಸೋಮವಾರದಂದು ಬೆಳಗಾವಿಯ ಮಹಾತ್ಮ ಗಾಂಧಿ ಭವನದಲ್ಲಿ ನಡೆದ ಅಖಿಲ ಭಾರತ ಪಂಚಮಸಾಲಿ ಜನಪ್ರತಿನಿಧಿಗಳ ಮತ್ತು ಪದಾಧಿಕಾರಿಗಳ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಂಚಮಸಾಲಿ ಸಮಾಜದ ಬೆಳವಣಿಗೆಗೆ ಶ್ರಮಿಸುತ್ತಿರುವ ರಾವಸಾಹೇಬ ನಿಂಗಪ್ಪ ಬೆಳಕೂಡ ಇವರನ್ನು ಆಯ್ಕೆ ಮಾಡಿ ಸತ್ಕರಿಸಲಾಯಿತು.ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ,ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಮಹಾಂತೇಶ ದೊಡಗೌಡರ,ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ನಿಂಗಪ್ಪ ಪಿರೋಜ್,ರಾಜ್ಯದ ಜನಪ್ರತಿನಿಧಿಗಳು ಪದಾಧಿಕಾರಿಗಳು, ಜಿಲ್ಲೆಯ ಪದಾಧಿಕಾರಿಗಳು, ಪಂಚಮಸಾಲಿ ಸಮಾಜದ ಜನತೆ ಪಾಲ್ಗೊಂಡಿದ್ದರು.