This is the title of the web page
Left Banner (Left Skyscraper)
Right Banner (Right Skyscraper)

ಹಣಮಂತ ನಿರಾಣಿ ಗೆಲುವು ಖಚಿತ : ರಮೇಶ ಜಿಗಜಣಗಿ

0 12

ಚಿಕ್ಕೋಡಿ 03- ಸಂಘ ಪರಿವಾರದಿಂದ ರಾಜಕೀಯಕ್ಕೆ ಬಂದವರು ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳದೇ ಇರುವುದು ಕಡಿಮೆನೆ, ನಾನೇನೂ ಸಂಘ ಪರಿವಾರದಿಂದ ಬಂದಿಲ್ಲ, ನಾವು ಜನತಾದಳ ಪರಿವಾರದಿಂದ ಬಂದವನು. ಕಾಂಗ್ರೆಸ್ ಪಕ್ಷಕ್ಕೂ ಆಹ್ವಾನ ಇತ್ತು. ಆದರೆ, ಡಾ, ಅಂಬೇಡ್ಕರ ತೀರಿಕೊಂಡಾಗ ಆರು ಅಡಿ ಜಾಗವನ್ನು ಕಾಂಗ್ರೆಸ್ ನೀಡಲಿಲ್ಲ ಮತ್ತು ಅವರು ಚುನಾವಣೆಯಲ್ಲಿ ಸೋಲುವಾಗಿ ಮಾಡಿದ್ದು ಕಾಂಗ್ರೆಸ್ ಹೀಗಾಗಿ ಆ ಪಕ್ಷಕ್ಕೆ ಸೇರಲಿಲ್ಲ ಎಂದು ಸಂಸದ ರಮೇಶ ಜಿಗಜಣಗಿ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ನನ್ನ ಕಿರಿಯ ಸಹೋಧನಂತೆ ಇರುವ ಹಣಮಂತ ನಿರಾಣಿ ಗೆಲುವು ಖಚಿತವಾಗಿದೆ. ಅವರ ಮಾಡಿರುವ ಕಾರ್ಯ ಮೂರು ಜಿಲ್ಲೆಯ ಜನರಿಗೆ ಗೊತ್ತಿರುವ ವಿಷಯ, ಹೀಗಾಗಿ ಪದವೀಧರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಿರುವ ನಿರಾಣಿ ಗೆಲುವು ಖಚಿತವಾಗಿದೆ. ಶಿಕ್ಷಕರ ಮತಕ್ಷೇತ್ರದಿಂದ ವಿರೋಧ ಪಕ್ಷದ ನಾಯಕರು ಟಿವಿ, ಪ್ರೀಜ್ ಹೀಗೆ ಏನೆ ಆಸೆ ಆಮೀಸಿ ಒಡಿದ್ದರೂ ಶಿಕ್ಷಕರು ಮಾತ್ರ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು
ಬೆಳಗಾವಿ, ವಿಜಯಪೂರ ಮತ್ತು ಬಾಗಲಕೋಟ ಜಿಲ್ಲೆಯನ್ನೊಳ್ಳಗೊಂಡ ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಎರಡು ಬಾರಿ ಆಯ್ಕೆಯಾದ ಹಾಲಿ ಅಭ್ಯರ್ಥಿ ಅರುಣ ಶಹಾಪೂರ ಕೆಲವು ಚುನಾವಣೆಯಲ್ಲಿ ಸಕ್ರೀಯವಾಗಿ ಕೆಲಸ ಮಾಡದೇ ಇರುವುದನ್ನು ಬಿಟ್ಟರೇ ಶಹಾಪೂರ ಮೇಲೆ ದೊಡ್ಡ ಗುರುತರವಾದ ಆರೋಪವಿಲ್ಲ, ಹೀಗಾಗಿ ಮೂರನೆ ಬಾರಿಗೆ ಆಯ್ಕೆಯಾಗುತ್ತಾರೆ ಲೋಕಸಭೆ, ವಿಧಾನಸಭೆ ಮತ್ತು ವಿವಿಧ ಉಪಚುನಾವಣೆಯಲ್ಲಿ ಅರುಣ ಶಹಾಪೂರ ಸ್ವಲ್ಪ ಅಂತರ ಕಾಯ್ದುಕೊಂಡಿದ್ದನ್ನು ಬಿಟ್ಟರೇ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ ಎನ್ನುವ ಮನೋಭಾವ ಇಟ್ಟುಕೊಂಡಿದ್ದೇನೆ. ಸರಳಸ್ವಭಾವ ಮತ್ತು ಆರ್‌ಎಸ್‌ಎಸ್ ಹಿನ್ನಲ್ಲೆಯಿಂದ ಬಂದವರಾದ ಅರುಣ ಶಿಕ್ಷಕರ ಸಮಸ್ಯೆ ಕುರಿತು ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿದ್ದಾರೆ ಎಂದರು.

ಕಾಂಗ್ರೆಸ್ ಪ್ರೇರಿತ ಪಠ್ಯಪುಸ್ತಕಕ್ಕೆ ಕತ್ತರಿ:
ಇಲ್ಲಿಯವರಿಗೆ ಕಾಂಗ್ರೆಸ್ ಪ್ರೇರಿತ ಪಠ್ಯಪುಸ್ತಕ ರಚನೆ ಇತ್ತು. ಹೀಗಾಗಿ ಸ್ವಲ್ಪ ಬದಲಾವಣೆ ಮಾಡಿ ರಾಷ್ಟ್ರೀಯ ಪುರುಷರನ್ನು ಪಠ್ಯಪುಸ್ತಕದಲ್ಲಿ ಸೇರಿಸಿ ಮಕ್ಕಳಿಗೆ ತಿಳಿಸುವ ಕೆಲಸ ಮಾಡಲಾಗುತ್ತದೆ. ಶಿಕ್ಷಣ ಸಚಿವರ ವಿರುದ್ಧ ಪ್ರತಿಭಟನೆ ನಡೆಸುವ ಕಾಂಗ್ರೆಸ್ ನಡೆ ಖಂಡನೀಯ.
– ಮಹಾಂತೇಶ ಕವಟಗಿಮಠ ಮಾಜಿ ಪರಿಷತ್ ಸದಸ್ಯರು

ಚಿಕ್ಕೋಡಿ-ಅಥಣಿಗೆ ಬೈಪಾಸ್ ರಸ್ತೆ: ಕೇಂದ್ರ ಸರ್ಕಾರ ಅಭಿವೃದ್ಧಿಯನ್ನು ಮುಂದುವರೆಸುತ್ತಿದೆ. ವಿಜಯಪೂರ ಜಿಲ್ಲೆಯಲ್ಲಿ ನಾಲ್ಕು ರಸ್ತೆಗಳ ಕಾಮಗಾರಿ ಭರದಿಂದ ನಡೆದಿವೆ. ಈ ರಸ್ತೆ ಕಾಮಗಾರಿಗಳಲ್ಲಿ ಚಿಕ್ಕೋಡಿ ಮತ್ತು ಅಥಣಿ ಬೈಪಾಸ್ ರಸ್ತೆಗಳು ಆಗಲಿವೆ. ೭೦ ವರ್ಷದಲ್ಲಿ ಆಗದ ಅಭಿವೃದ್ಧಿ ಕಾಮಗಾರಿಗಳು ಕೇವಲ ಎಂಟು ವರ್ಷದಲ್ಲಿ ಆಗಿದ್ದು ಬಿಜೆಪಿ ಸರ್ಕಾರದ ಸಾಧನೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ, ರಾಜೇಶ ನೇರ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಸಂಜು ಪಾಟೀಲ, ರಾವಸಾಹೇಬ ಕಮತೆ, ಎಂ.ಎ.ಪಾಟೀಲ, ಅಪ್ಪಾಸಾಹೇಬ ಚೌಗಲೆ, ಪ್ರಕಾಶ ಪಾಟೀಲ ಮುಂತಾದವರು ಇದ್ದರು.

You might also like
Leave a comment