ಯಾವ ಸಂಸದರೂ ಮಾಡದ ಅಭಿವೃದ್ಧಿ 15 ವರ್ಷ ಸಂಸದನಾಗಿ ಮಾಡಿದ್ದೇನೆ:ರಮೇಶ ಜಿಗಜಿಣಗಿ

Ravi Talawar
WhatsApp Group Join Now
Telegram Group Join Now

ವಿಜಯಪುರ,ಏ.06:ಈ ಹಿಂದೆ ಯಾವ ಸಂಸದರೂ ಮಾಡದ ಅಭಿವೃದ್ಧಿ ಕಾರ್ಯವನ್ನು ಕಳೆದ ೧೫ ವರ್ಷ ಸಂಸದನಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆಂದು ವಿಜಯಪುರ ಲೋಕಸಭೆಯ ಎನ್‌ಡಿಎ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.

ಶನಿವಾರ ಬಸವನ ಬಾಗೇವಾಡಿ ಮತಕ್ಷೇತ್ರದ ಕೂಡಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಇಲ್ಲಿನ ಕೂಡಗಿ ಎನ್‌ಟಿಪಿಸಿ,ಮನಗೂಳಿ ಬ್ರಿಜ್ ಸೇರಿದಂತೆ ಅನೇಕ ಅಭವೃದ್ಧಿ ಕಾರ್ಯ ಮಾಡಿದ್ದೇನೆ. ೧೨ ಚುನಾವಣೆಗಳನ್ನು ಗೆದ್ದರೂ ನನಗೂ ಯಾವುದೇ ಹಮ್ಮು-ಬಿಮ್ಮು ಇಲ್ಲದೇ ಸಣ್ಣ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲರಗಿಂತ ಸಣ್ಣವನಾಗಿ ಎಲ್ಲರಿಗೂ ಕಾಕಾ, ಮಾಮಾ,ಬಾಬಾ ಅಂತ ಗೌರವ ಸಲ್ಲಿಸಿ ಇಷ್ಟು ವರ್ಷ ರಾಜಕಾರಣ ಮಾಡಿದ್ದೇನೆಂದು ತಿಳಿಸಿದರು.

ನರೇಂದ್ರ ಮೊದಿ ೩ನೇ ಬಾರಿ ಪ್ರಧಾನಿಯಾಗಲು ಎಲ್ಲೂರೂ ನನಗೆ ಆಶಿರ್ವಾದ ಮಾಡುವದರ ಜೊತೆಗೆ ಮೋದಿ ಅವರು ಕಳೆದ ೧೦ ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿ ಜೊತೆಗೆ ಉತ್ತರ ಭಾರತದ ಎಲ್ಲ ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಅವರು ಮತ್ತೆ ಪ್ರಧಾನಿಯಾಗಲು ನನಗೆ ಬೆಂಬಲಿಸುವAತೆ ಮನವಿ ಮಾಡಿದರು.

ಬಂಜಾರಾ ಸಮುದಾಯವನ್ನು ನನ್ನ ವಿರುದ್ಧ ಕಾಂಗ್ರೆಸ್‌ನವರು ಎತ್ತಿ ಕಟ್ಟಿದರು. ಈಗ ಅವರೇ ಸುಮ್ಮನಾಗಿದ್ದಾರೆ. ಪ್ರಧಾನಿ ಮೋದಿಯವರಿಗೆ ಹೇಗೆ ದೇವರ ಆಶೀರ್ವಾದ ಇದೆಯೋ ಹಾಗೆಯೇ ನನಗೂ ದೇವರ ಹಾಗೂ ಹಿರಿಯರ ಆಶಿರ್ವಾದಿಂದ ಇಷ್ಟು ವರ್ಷಗಳ ಕಾಲ ರಾಜಕಾರಣ ಮಾಡಲು ಆಗಿದೆ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು ಅತೀವ ಸಂತೋಷವಾಗಿದೆ. ೩೦ ವರ್ಷಗಳ ನಂತರ ಮತ್ತೆ ಮಾತೃ ಪಕ್ಷ ಜೆಡಿಎಸ್‌ಗೆ ಹೋಗಿದ್ದು ತುಂಬಾ ಖುಷಿಯಾಗಿದೆ. ಅಲ್ಲಿಯೇ ಹೆಗಡೆ-ಪಟೇಲ್‌ರ ಜತೆಗೂಡಿ ರಾಜಕಾರಣ ಮಾಡಿದ್ದನ್ನು ನೆನಪಿಸಿಕೊಂಡರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ಕಾಂಗ್ರೆಸ್‌ನವರಿಗೆ ಸೋಲಿನ ಭೀತಿ ಕಾಡಲಾರಂಭಿಸಿದೆ. ಸಂಸದ ಜಿಗಜಿಣಗಿ ಅವರಿಗೆ ಬಂಜಾರಾ ಸಮುದಾಯದ ಮತ ಬೇಕಿಲ್ಲ ಎಂದು ಅಪಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ಬಂಜಾರಾ ಸಮುದಾಯಕ್ಕೆ ಪಕ್ಷದ ಸಭೆಯಲ್ಲಿ ಮಾತನಾಡಿಸುವ ಅವಕಾಶವೇ ಕೊಡುತ್ತಿಲ್ಲ ಇಂಥಹುದರಲ್ಲಿ ಲೋಕಸಭೆಗೆ ಟಿಕೆಟ್ ಕೊಡುವದು ದೂರದ ಮಾತು ಎಂದು ತಿರುಗೇಟು ನೀಡಿದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ೩ನೇ ಬಾರಿ ಪ್ರಧಾನಿ ಮಾಡಲು ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ರಾಮ ಕಾಖಂಡಕಿ,ಈರಣ್ಣ ರಾವೂರ, ಗುರುಲಿಂಗಪ್ಪ ಅಂಗಡಿ, ಬಸವವರಾಜ ಬಿಜಾಪೂರ, ಸಾಬು ಮಾಶ್ಯಾಳ, ಚಂದ್ರಶೇಖರ ದೇಸಾಯಿ,ಬೀರಪ್ಪ ಸಾಸನೂರು, ಕಲ್ಲು ಸೊನ್ನದ,ಸಂತೋಷ ಮಮದಾರಪೂರ,ಎಂ.ಆರ್.ಹೆಬ್ಬಾಳ,ಕೇಶವ ಪವಾರ, ಗಂಗಾರಾಮ ಪವಾರ,ಸಂಗಪ್ಪ ಕೋಲಾರ,ಸಹದೇವ ಪವಾರ ಸೇರಿದಂತೆ ಹಲವರು ಇದ್ದರು.

WhatsApp Group Join Now
Telegram Group Join Now
Share This Article