ಶ್ರೀ ರಾಮ ನವಮಿ ಉತ್ಸವ ಸಮಿತಿಯಿಂದ ರಾಮ ನವಮಿ ಆಚರಣೆ

Ravi Talawar
WhatsApp Group Join Now
Telegram Group Join Now

ವಿಜಯಪುರ,ಏಪ್ರಿಲ್ 17: ರಾಮ ನವಮಿಯನ್ನು ನಗರದ ಶ್ರೀರಾಮ ನವಮಿ ಉತ್ಸವ ಸಮಿತಿ ವತಿಯಿಂದ ಬೆಳಿಗ್ಗೆ ೬ ಗಂಟೆಯಿಂದ ಹೋಮ ಹವನ ಪೂಜಾ ಕಾರ್ಯಕ್ರಮಗಳೊಂದಿಗೆ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಮಾತಾನಾಡಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಈ ವರ್ಷ ಕೇವಲ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ಕೋಲಾಟ ಆರತಿ, ಮಾಹಾಪುಜೆ, ರಾಮಜಪ ದೊಂದಿಗೆ ರಾಮ ನವಮಿ ಆಚರಿಸಲಾಯಿತು.

ರಾಮ ನವಮಿ ಉತ್ಸವದ ಮಹತ್ವವು ದುಷ್ಟರ ಮೇಲೆ ಒಳ್ಳೆಯತನದ ವಿಜಯ, ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ. ಶ್ರಿರಾಮನನ್ನು ಸೂರ್ಯದೇವನ ಪೂರ್ವಜನೆಂದೂ ಜನ ನಂಬುತ್ತಾರೆ. ರಾಮ ನವಮಿಯು ಸದಾಚಾರದ ಶಾಶ್ವತ ತತ್ವಗಳ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಭಗವಾನ್ ರಾಮನ ಜೀವನವು ಕರ್ತವ್ಯ, ಗೌರವ ಮತ್ತು ತ್ಯಾಗದ ಆದರ್ಶಗಳನ್ನು ನಮಗೆ ಕಲಿಸುತ್ತದೆ. ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಸದಾಚಾರದ ಜೀವನವನ್ನು ನಡೆಸಲು ಭಕ್ತರನ್ನು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಮ ನವಮಿ ಉತ್ಸವ ಸಮಿತಿಯ ಅಧ್ಯಕ್ಷರಾದ ಉಮೇಶ ವಂದಾಲ, ಶಿವಾನಂದ ಭುಯ್ಯಾರ, ಶರಣು ಸಬರದ, ಮಹೇಶ ಜಾಧವ, ಶ್ರೀಶೈಲ ಹಿರೇಮಠ, ಸಚಿನ ಸವನಳ್ಳಿ, ಸಂತೋಷ ವೆಂಕಪ್ಪಗೋಳ, ಅಪ್ಪು ಪೆಡ್ಡಿ, ಸತೀಶ ಗಾಯಕವಾಡ, ನಾರಾಯಣಸಿಂಗ ಹಜೇರಿ, ಅಮಿತ ಅವಜಿ, ಆನಂದ ಬಂಡಿ, ಗಿರಿಜಾ ಬರಡೋಲಮಠ, ಜೋತಿ ಹಿರೇಮಠ, ಜಯಶ್ರೀ ಕನ್ನೂರ, ಭಾರತಿ ಭುಯ್ಯಾರ, ದೀಪಾ ಭಿಸೆ, ಆನಂದ ರೂಗಿ ಮತ್ತು ಸಮತಿ ಸದಸ್ಯರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article