ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಯುವ ಜನಾಂಗ ಒಗ್ಗಟ್ಟಾಗುತ್ತಿದೆ : ರಕ್ಷಾ ರಾಮಯ್ಯ

Hasiru Kranti
WhatsApp Group Join Now
Telegram Group Join Now

ಯುವ ಸಮೂಹವನ್ನು ಸೆಳೆಯುತ್ತಿರುವ ರಕ್ಷಾ ರಾಮಯ್ಯ
ನೆಲಮಂಗಲ,ಏ,5; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಂದು ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಮಠ ಮಂದಿಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ನೆಲಮಂಗಲ ಶಾಸಕರಾದ ಎನ್. ಶ್ರೀನಿವಾಸ್ ಅವರೊಂದಿಗೆ ಇಡೀ ದಿನ ರಕ್ಷಾ ರಾಮಯ್ಯ ಮಿಂಚಿನ ಸಂಚಾರ ನಡೆಸಿ ಮತಯಾಚಿಸಿದರು. ಭೇಟಿ ನೀಡಿದ ಕಡೆಗಳಲ್ಲಿ ಯುವ ಸಮೂಹವನ್ನು ರಕ್ಷಾ ರಾಮಯ್ಯ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾರೆ.
ಮಧ್ಯಾಹ್ನ ನೆಲಮಂಗಲದ ರೈಲ್ವೆ ಗೊಲ್ಲಹಳ್ಳಿ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆ ಚರ್ಚಿಸಿದರು.


ಸೋಂಪುರ ಹೋಬಳಿಯ ಕಂಬಾಳು ಮಠ ಹಾಗೂ ಶಿವಗಂಗೆ ಹೊನ್ನಮ್ಮಗವಿ ಮಠಕ್ಕೆ ಭೇಟಿ ನೀಡಿ ಶ್ರೀ ಗಳ ಆಶೀರ್ವಾದ ಪಡೆದರು.
ಕಂಬಾಳುವಿನ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮತ್ತು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಂಡೇ ಮಠದ ಮಹಾಲಿಂಗ ಸ್ವಾಮೀಜಿ ಅವರು ರಕ್ಷಾ ರಾಮಯ್ಯ ಅವರಿಗೆ ಆಶೀರ್ವದಿಸಿರು. ನಂತರ ನೆಲಮಂಗಲದ ಲಕ್ಷ್ಮೀನಾರಾಯಣ ಪಾಟೀದಾರ್ ಮಂಟಪದಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಚುನಾವಣಾ ಕಾರ್ಯತಂತ್ರಗಳ ಕುರಿತು ಮಾಹಿತಿ ನೀಡಿದರು. ತಮ್ಮ ಪರವಾಗಿ ಪ್ರಚಾರ ಮಾಡುವಂತೆ ಕೋರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಕ್ಷಾ ರಾಮಯ್ಯ, ದಕ್ಷಿಣಕಾಶಿ ಶಿವಗಂಗೆ ಹಲವಾರು ಮಠಾಧೀಶರು ತಪಸ್ಸು ಮಾಡಿದ ತಪೋಭೂಮಿ. ಈ ಪುಣ್ಯ ಭೂಮಿಯ ದರ್ಶನದಿಂದ ತಮಗೆ ಇನ್ನಷ್ಟು ಶಕ್ತಿ ಬಂದಿದೆ. ಇಲ್ಲಿನ ಭೇಟಿ ತಮ್ಮ ಉತ್ಸಾಹ ಮತ್ತು ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ ಎಂದರು.


ಯುವ ಸಮೂಹ ರಾಜಕೀಯ ಕ್ಷೇತ್ರ ಬಂದರೆ ರಾಜಕೀಯಕ್ಕೆ ಮಹತ್ವ ಬರುತ್ತದೆ. ವಿಶೇಷವಾಗಿ ತಮಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಾದ್ಯಂತ ಉತ್ತಮ ಸ್ಪಂದನೆ ದೊರೆಯುತ್ತಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಯುವ ಜನಾಂಗ ಒಗ್ಗಟ್ಟಾಗುತ್ತಿದೆ. ಧರ್ಮ-ಅಧರ್ಮ, ಸತ್ಯ-ಮಿಥ್ಯಗಳ ನಡುವಿನ ಚುನಾವಣೆ ಇದಾಗಲಿದೆ ಎಂದರು.
ನೆಲಮಂಗಲ ಶಾಸಕರಾದ ಎನ್. ಶ್ರೀನಿವಾಸ್ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಅವರು ನಮಗೆ ಮಾದರಿಯಾಗಿದ್ದು, ಅವರ ಅಚಲವಾದ ಬೆಂಬಲ ನಮ್ಮ ಹೋರಾಟಕ್ಕೆ ಅತಿ ಹೆಚ್ಚಿನ ಶಕ್ತಿ ನೀಡಿದಂತಾಗಿದೆ ಎಂದು ಹೇಳಿದರು.
ಶಾಸಕರಾದ ಎನ್.ಶ್ರೀನಿವಾಸ್ ಮಾತನಾಡಿ, ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯುವಕ ನಾಯಕರಾದ ರಕ್ಷಾ ರಾಮಯ್ಯ ಗೆಲುವು ಸಾಧಿಸಲಿದ್ದಾರೆ, ಕಾರ್ಯಕರ್ತರ ಒಗ್ಗಟ್ಟು ಇಡೀ ಕ್ಷೇತ್ರದಲ್ಲಿ ಎದ್ದು ಕಾಣುತ್ತಿದೆ, ವಿಧಾನಸಭೆ ಚುನಾವಣೆಯಂತೇ ಎಲ್ಲಾ ಕಾರ್ಯಕರ್ತರು ಸಂಘಟಿತರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್. ಗೌಡ, ಬ್ಲಾಕ್ ಅಧ್ಯಕ್ಷ ವಜ್ರಗಟ್ಟೆಪಾಳ್ಯ ನಾಗರಾಜು, ಅಗಳಕುಪ್ಪೆ ಗೋವಿಂದರಾಜು, ನೆಲಮಂಗಲ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾರಾಯಣ ಗೌಡ, ಮಿಲ್ಟ್ರೀ ಮೂರ್ತಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಶಿವಕುಮಾರ್, ಅಂಚೆಮನೆ ಪ್ರಕಾಶ್, ತಟ್ಟೆಕೆರೆ ಬಾಬು, ಲಕ್ಕೇನಹಳ್ಳಿ ಹನುಮಂತರಾಜು, ಚಂದ್ರಕುಮಾರ್, ವಿಕೆಎಸ್ ಕೆಂಪರಾಜು, ಅರ್ಜುನ್, ಸಿದ್ದರಾಜು, ಯೋಗನಂದೀಶ್, ಗ್ರಾ.ಪಂ.ಸದಸ್ಯ ಮನು ಪ್ರಸಾದ್, ಯುವ ಕಾಂಗ್ರೆಸ್ ಮುಖಂಡರಾದ ಕಿರಣ್ ಕುಮಾರ್, ಲೋಕೇಶ್, ಇನ್ನೀತರ ಹಲವಾರು ಕಾರ್ಯಕರ್ತರು, ಸೋಂಪುರ-ತ್ಯಾಮಗೊಂಡ್ಲು ಭಾಗದ ಮುಖಂಡರಿದ್ದರು.

WhatsApp Group Join Now
Telegram Group Join Now
Share This Article