This is the title of the web page
Left Banner (Left Skyscraper)
Right Banner (Right Skyscraper)

ಮಕ್ಕಳಿಗೆ ಕೌಶಲ್ಯ ತರಬೇತಿಗಳು ಅವಶ್ಯಕ -ರಾಜೇಶ್ವರಿ ಸಾಲಗಟ್ಟಿ

೧೪-೧೮ ವಯಸ್ಸಿನ ಮಕ್ಕಳಿಗೆ ಜೀವನ ಕೌಶಲ್ಯ ಕಾರ್ಯಕ್ರಮ

0 4

ಹುಬ್ಬಳ್ಳಿ ಜೂ.೦೩: ಇಂದಿನ ಮಕ್ಕಳ ಜೀವನದಲ್ಲಿ ಕೌಶಲ್ಯ ತರಬೇತಿಗಳು ಅವಶ್ಯಕವಾಗಿವೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರಾಜೇಶ್ವರಿ ಸಾಲಗಟ್ಟಿ ಹೇಳಿದರು.

ಉಣಕಲ್‌ನ ಮನೋವಿಕಲ ಬಾಲಕಿಯರ ಸರಕಾರಿ ಬಾಲಮಂದಿರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನೆರವು ಕಾರ್ಯಕ್ರಮದಡಿ ಯುನಿಸೆಫ್, ಮಂಗಳೂರಿನ ಶಾಂತಿ ಸಂದೇಶ ಟ್ರಸ್ಟ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಬಾಲಮಂದಿರಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಬಾಲಕಿಯರ ಸರಕಾರಿ ಬಾಲಮಂದಿರ, ಬಾಲಕರ ಸರಕಾರಿ ಬಾಲಮಂದಿರ, ಸ್ನೇಹಾ ತೆರೆದ ತಂಗುದಾಣ, ದರ್ಶನ ತೆರೆದ ತಂಗುದಾಣಗಳ ೧೪-೧೮ ವಯಸ್ಸಿನ ಮಕ್ಕಳಿಗೆ ಜೀವನ ಕೌಶಲ್ಯ ಕುರಿತು ೦೨ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯಲ್ಲಿರುವ ಮಕ್ಕಳಿಗೆ ಮಾರ್ಗದರ್ಶಕರಾಗಿ ಪಾಲಕರು ಹೇಗೆ ಇರುತ್ತಾರೋ ಅದೇ ರೀತಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಹಿತ ಪಾಲನೆ, ಪೋಷಣೆ ಮತ್ತು ರಕ್ಷಣೆಗಾಗಿ ಪುನರ್ವಸತಿ ಹೊಂದುತ್ತಿರುವ ಮಕ್ಕಳಿಗೆ ಜೀವನ ಕೌಶಲ್ಯ ಕುರಿತು ತರಬೇತಿಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ. ಕಮಲಾ ಬೈಲೂರ ಮಾತನಾಡಿ, ಮಕ್ಕಳ ಜೀವನದಲ್ಲಿ ಅತೀ ಮುಖ್ಯವಾಗಿ ೧೦ ಕೌಶಲ್ಯಗಳು ತುಂಬಾ ಪ್ರಮುಖ ಸ್ಥಾನವನ್ನು ಒದಗಿಸುತ್ತವೆ. ಪ್ರತಿಯೊಂದು ಕೌಶಲ್ಯವು ತನ್ನದೆ ಆದ ವಿಶೇಷತೆ ಹೊಂದಿರುತ್ತದೆ. ಉದಾಹರಣೆಗೆ ಸ್ವಯಂ ಜ್ಞಾನ, ವಿಮರ್ಶಾತ್ಮಕವಾಗಿ ಮತ್ತು ರಚನಾತ್ಮಕವಾಗಿ ಯೋಚಿಸುವುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ಇತರ ವಿಷಯಗಳಿವೆ. ಮಕ್ಕಳ ಪಾಲನಾ ಸಂಸ್ಥೆಯಲ್ಲಿರುವ ಎಲ್ಲ ಮಕ್ಕಳು ನಮ್ಮ ಮಕ್ಕಳೇ, ಮಕ್ಕಳನ್ನು ನಾವು ಚೆನ್ನಾಗಿ ನೋಡಿಕೊಂಡು ಉತ್ತಮ ಭವಿಷ್ಯ ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಬಾಲಮಂದಿರದ ಯಾವುದೇ ಮಗು ಅವಕಾಶಗಳಿಂದ ವಂಚಿತರಾಗದೆ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ತರಬೇತಿಗಳನ್ನು ಆಯೋಜಿಸಲಾಗಿರುತ್ತದೆ. ತರಬೇತಿ ಉಪಯೋಗವನ್ನು ಬಾಲಮಂದಿರದ ಮಕ್ಕಳು ಪಡೆದುಕೊಳ್ಳಬೇಕೆಂದು ಎಂದರು.

ಶಾಂತಿ ಸಂದೇಶ ಟ್ರಸ್ಟ್‌ನ ಸಿಸ್ಟರ್ ಸಿಲಿನ್ ಅವರು ಜೀವನ ಕೌಶಲ್ಯ, ಮಕ್ಕಳ ಹಕ್ಕುಗಳು, ಸ್ವಯಂ ಜ್ಞಾನ, ಅನುಭೂತಿ, ಗುರಿ, ನಿರ್ಧಾರ ತೆಗೆದುಕೊಳ್ಳುವುದು, ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದರ ಕುರಿತು ಗುಂಪು ಚಟುವಟಿಕೆಗಳ ಮೂಲಕ ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜುಳಾ ಪಾಟೀಲ್ ಅವರು ಭಾವನಾತ್ಮಕವಾಗಿ ನಿರ್ವಹಣೆ, ವೃತ್ತಿ ಮಾರ್ಗದರ್ಶನ, ವಿಮರ್ಶಾತ್ಮಕ ಚಿಂತನೆ, ಸಂಘರ್ಷ ಪರಿಹಾರಗಳ ಕುರಿತು ತರಬೇತಿ ನೀಡುವರು.
ಕಾರ್ಯಕ್ರಮದಲ್ಲಿ ಎಲ್ಲ ಬಾಲಮಂದಿರದ ಹಾಗೂ ತೆರೆದ ತಂಗುದಾಣದ ಅಧೀಕ್ಷಕರು, ಪರಿವೀಕ್ಷಣಾಧಿಕಾರಿಗಳು, ಸಂಯೋಜಕರು, ಸಿಬ್ಬಂದಿಗಳು ಹಾಗೂ ಬಾಲಮಂದಿರದ ಮಕ್ಕಳು ಭಾಗವಹಿಸಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿ ಅಶ್ವಿನಿ ಉಳ್ಳಿಗೇರಿ ಸ್ವಾಗತಿಸಿದರು. ಶಾಂತಿ ಸಂದೇಶ ಟ್ರಸ್ಟ್‌ನ ರಮೇಶ ವಂದಿಸಿದರು.

You might also like
Leave a comment