ಈ ವಾರ ತೆರೆಗೆ ಹಾರರ್ ಥ್ರಿಲ್ಲರ್ ಚಿತ್ರ  ನಾಲ್ಕನೇ ಆಯಾಮ; ಗೌತಮ್ ಜೊತೆ ರಚನಾ ಯಾನ

Ravi Talawar
WhatsApp Group Join Now
Telegram Group Join Now
ಪ್ರೇಮಗೀಮ ಜಾನೆದೋ ಎನ್ನುತ್ತಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಯುವ ಪ್ರತಿಭೆ ಗೌತಮ್ ಆರ್ ಇದೀಗ ‘ನಾಲ್ಕನೇ ಆಯಾಮ’ದ ಕಥೆ ಒಪ್ಪಿಸುತ್ತಿದ್ದಾರೆ.  ಪ್ರೇಮಗೀಮ ಜಾನೆದೋ ಚಿತ್ರ ಮೂಲಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಗೌತಮ್ ಈಗ ನಾಯಕನಾಗುವ ಜೊತೆ ನಿರ್ದೇಶನ ಮಾಡಿರುವ ‘ನಾಲ್ಕನೇ ಆಯಾಮಾ’ ರಾಜ್ಯಾದ್ಯಂತ ತಿಳಿಕೊಂಡಿದೆ.
ನಾಯಕಿಯಾಗಿ ‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್ ಸಾಥ್ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಮಾಸ್ಟರ್ ಆನಂದ್ ಮಗಳು ಪಟಾಕಿ ಅಂಜನಿ ವಂಶಿಕಾ ಕಶ್ಯಪ್ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದು, ಅಮಿತ್ ಗೌಡ ಯಶಸ್ವಿನಿ ಎಂ , ಬಲ ರಾಜ್ ವಾಡಿ, ವಿನ್ಸೆಂಟ್, ಮಂಜು ಸ್ವಾಮಿ, ಚಂದ್ರಕಲಾ ಮೋಹನ್, ಬೇಬಿ ನಿಷಿತಾ ತಾರಾಬಳಗದಲ್ಲಿದ್ದಾರೆ.
ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ನಾಲ್ಕನೇ ಆಯಾಮ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ, ಅಭಿನಂದನ್ ಕಶಪ್ಯ ಬ್ಯಾಗ್ರೌಂಡ್ ಸ್ಕೋರ್ ಹಾಗೂ ಸೌಂಡ್ ಡಿಸೈನ್ ಮಾಡಿದ್ದು, ಕೆ ಭ್ರಮೇಂದ್ರ ಹಾಗೂ ಅರುಣ್ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನವಿದೆ. ಇಂಚರಾ ಕ್ರಿಯೇಷನ್ ಬ್ಯಾನರ್ ನಲ್ಲಿ ಅರುಣಾ ಮುತ್ತು ರಾಯಪ್ಪ ನಿರ್ಮಾಣ ಮಾಡಿದ್ದು, ಕಿರಣ್ ರಾಯಚೋಟಿ, ದಿವ್ಯಾ ಸಜೋಗ್ ನಿರ್ಮಾಣದಲ್ಲಿ ಜೊತೆಯಾಗಿ ನಿಂತಿದ್ದಾರೆ. ಟ್ರೇಲರ್ ಹಾಗೂ ಹಾಡುಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾವಾಗಿದೆ ‘ನಾಲ್ಕನೇ ಆಯಾಮಾ’.

WhatsApp Group Join Now
Telegram Group Join Now
Share This Article