ಧಾರವಾಡ: ನವವೃಂದಾವನದಲ್ಲಿರುವ ಉತ್ತರಾಧಿಮಠದ ರಘುವರ್ಯತೀರ್ಥ ಮೂಲ ವೃಂದಾವನವನ್ನೇ ಜಯತೀರ್ಥರ ವೃಂದಾವನ ಎಂದು ಅಪಪ್ರಚಾರ ಮಾಡಲಗುತ್ತಿರುವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಜಯತೀರ್ಥ ಭಕ್ತವೃಂದ, ಕೂಡಲೇ ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಜಯತೀರ್ಥ ಭಕ್ತವೃಂದ, ಅಲ್ಲಿನ ಆರಾಧನೆ ಹಾಗೂ ಪೂಜೆಗಳನ್ನು ತಡೆಯಬೇಕು. ಅಲ್ಲಿ ಇತಿಹಾಸ ತಿರುಚುವ ಕಾರ್ಯವಾಗುತ್ತಿದೆ. ಇದು ಜಯತೀರ್ಥ ಭಕ್ತರ ಭಾವನೆಗಳನ್ನು ಘಾಸಿಗೊಳಿಸುತ್ತಿದೆ. ಈ ವಿಷಯದಲ್ಲಿ ಗೊಂದಲ ಗೊಂದಲಸೃಷ್ಠಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಯಾವುದೇ ಗೊಂದಲ ಸೃಷ್ಠಿಗೆ ಅನುವು ಮಾಡಿಕೊಡದಂತೆ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.