ಇಂಡಿ.ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ತೊಂದರೆ ಆಗುತ್ತಿದ್ದು,ಒಂದು ತಿಂಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಯಿಂದ ರೈತರಿಗೆ,ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದ್ದು,ಮೂದಲು ಇದ್ದ ಸಂಜೆ 6ಗಂಟೆ ಯಿಂದ ಮುಂಜಾನೆ 6ಗಂಟೆಯವರೆ ಸಿಂಗಲ್ ಫೇಸ್.ಹಗಲು 7 ಗಂಟೆಗಳಕಾಲ 3ಪೇಸ್ ವಿದ್ಯುತ್ ಪೂರೈಕೆ ಮಾಡುವ ಸಲುವಾಗಿ ನೂರಾರು ರೈತರು ಇಂಡಿ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಮನವಿ ಸಲ್ಲಿಸಿದರು.ಸುಮಾರು ಎರಡು ಗಂಟೆಗಳಕಾಲ ಹೆಸ್ಕಾಂ ಕಚೇರಿಯ ಗೇಟ್ ಬಂದ್ ನೂರಾರು ರೈತರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಂತರ ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಅಭಿಯಂತರಾದ ಬಿರಾದಾರ ಹಾಗೂ ಮೇಂಡೆದಾರ ರವರು ಮನವಿ ಸ್ವೀಕರಿಸಿ ಹಗಲು 4ಗಂಟೆ ರಾತ್ರಿ 3ಗಂಟೆ ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡಿದರು.ಆದರೆ ರೈತರು ರಾತ್ರಿ 6ಗಂಟೆ ಯಿಂದ ಮುಂಜಾನೆ 6ಗಂಟೆಯವರಗೆ ಸಿಂಗಲ್ ಫೇಸ್ ನೀಡಬೇಕು ಎಂದು ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ನೂರಾರು ರೈತರು ಉಪಸ್ಥಿತರಿದ್ದರು. ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ರೈತರ ನ್ಯಾಯುತ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರ, ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ,ಸಿದ್ದಲಿಂಗ ಹಂಜಗಿ, ಶ್ರೀಶೈಲಗೌಡ ಪಾಟೀಲ,ಅಯೋಬ ನಾಟೀಕರ ,ಬುದ್ದುಗೌಡ ಪಾಟೀಲ, ದೇವೇಂದ್ರ ಕುಂಬಾರ, ಯಲ್ಲಪ್ಪ ಹದರಿ,ಅನೀಲಗೌಡ ಬಿರಾದಾರ, ಸಿದ್ದು ಡಂಗಾ ಮಹಿಬೂಬ ಬೇವನೂರ, ಸೋಮು ನಿಂಬರಗಿ ಮಠ,ವೈ.ಎ.ಪಾಟೀಲ, ಹಣಮಂತ ಗುಡ್ಲ,ಸತ್ಯಪ್ಪ ಗುಡ್ಲ,ಶಂಕರ್ ಸದರಗೋಂಡ,ಶರತ ಪಾಟೀಲ,ರವಿಗೌಡ ಪಾಟೀಲ,ನಿಯಾಝ್ ಅಗರಖೇಡ,ಮಲ್ಲು ವಾಲಿಕರ,ಅಪ್ಪು ಪವಾರ,ಜಯರಾಮ ಚೌವ್ಹಾಣ್,ರಾಜು ಮುಲ್ಲಾ, ಇರ್ಫಾನ್ ಅಗರಖೇಡ,ರವಿ ಶಿಂದೆ,ಕಿರಣ ಕ್ಷತ್ರಿ, ಫಜಲು ಮುಲ್ಲಾ ಅಕಲಾದಿ,ಮಲ್ಲು ಬೀರನಹಳ್ಳಿ ಮುಂತಾದವರು ಉಪಸ್ಥಿತರಿದ್ದರು