This is the title of the web page

ಮತಾಂಧ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಎಬಿವಿಪಿಯಿಂದ ಪ್ರತಿಭಟನೆ

ಕೊಲೆಯಂತಹ ಹೇಯ ಕೃತ್ಯ ತಡೆಗಟ್ಟಲು ಕಠಿಣ ಕಾನೂನು ರೂಪಿಸಲು ಆಗ್ರಹ...

0 27

ಮೂಡಲಗಿ ಜು.30: ಸಾಮಾಜಿಕ ಕಾರ್ಯಕರ್ತ ಪ್ರವೀಣ ನೆಟ್ಟಾರು ಕೊಲೆಯಾಗಿರುವುದನ್ನು ಗಮನಿಸಿದರೆ ಕರ್ನಾಟಕದ ಜನತೆ ಎಷ್ಟು ಅಭದ್ರತೆಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ನಿದರ್ಶನವಾಗಿರುವುದಲ್ಲದೆ, ರಾಜ್ಯದಲ್ಲಿ ಪದೇ ಪದೇ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಕೊಲೆ ಮಾಡುತ್ತಿರುವುದು ಖಂಡನೀಯ ಸಂಗತಿಯಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಎಸ್.ಎಫ್.ಡಿ  ಪ್ರಮುಖರಾದ ಮಹಾದೇವ ನವನಿ ಹೇಳಿದರು.

ಶನಿವಾರದಂದು ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಎಬಿವಿಪಿಯಿಂದ ಪ್ರತಿಭಟನೆ ಮಾಡಿ ಸರಕಾರಕ್ಕೆ ತಹಶೀಲ್ದಾರ ಮುಖಾಂತರ ಮನವಿ ಸಲ್ಲಿಸಿ ಮಾತನಾಡಿದ ಅವರು, ಸಾಮಾಜಿಕ ಕಾರ್ಯಕರ್ತನ ಕೊಲೆ ನಡೆದಿರುವುದು ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯತೆಯನ್ನು ತೋರಿಸುವಂತಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೇ ನೀಡುವುದರ ಜೊತೆಗೆ ಈ ರೀತಿಯ ಪ್ರಕರಣಗಳಿಗೆ ತಡೆಗಟ್ಟುವ ನಿಟ್ಟಿನಲ್ಲಿ ಕಾನೂನನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಪದೇ ಪದೇ ಒಂದು ಸಿದ್ಧಾಂತದ ಪರವಾಗಿ ರಾಷ್ಟ್ರೀಯತೆಯ ವಿಚಾರಧಾರೆಯನ್ನು ಇಟ್ಟುಕೊಂಡು ಕೆಲಸ ಮಾಡುವ ಕಾರ್ಯಕರ್ತರ ಹತ್ಯೆ ಮಾಡುತ್ತಿರುವುದರ ಹಿಂದೆ ಪಿ.ಎಫ್.ಐ, ಸಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಸಂಘಟನೆಗಳ ಬೆಂಬಲ ಇರುವುದು ಎಲ್ಲ ಪ್ರಕರಣಗಳಲ್ಲಿ ಕಂಡು ಬರುತ್ತಿದ್ದು, ಸರ್ಕಾರವು ಕೂಡಲೇ ಈ ಸಂಘಟನೆಗಳನ್ನ ನಿಷೇಧಿಸಬೇಕೆಂದು ಎಬಿವಿಪಿ ವತಿಯಿಂದ ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಎಬಿವಿಪಿ ಪ್ರಮುಖರಾದ ಬಸವರಾಜ ಕೋಣಿ, ಶಿವಾನಂದ ಸರಪನಿ, ಸಿದ್ದು ಬೆಳಕೂಡ, ಶಶಿಕುಮಾರ ಮುಗಳಖೋಡ, ಈರಣ್ಣ ಪಾರ್ಶಿ, ಹೊಳೆಪ್ಪ ಲೋಕನ್ನವರ, ಸುಭಾಸ ಗುರ್ಲಾಪೂರ, ಶಿವಾನಂದ ಮೆನಸಿ, ರೇವಣಸಿದ್ದ ನಿಂಗನೂರ, ವಂಟಗೊಡಿ, ಬಸವರಾಜ ಕಾಂಬಳೆ ಸೇರಿದಂತೆ ಅನೇಕ ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

You might also like
Leave a comment