This is the title of the web page

ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕ ಹೆಚ್ಚಳ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ

ಉಪಕುಲಪತಿಗಳಿಗೆ ತಹಶೀಲ್ದಾರ ಮುಖಾಂತರ ಮನವಿ...

0 87

ಮೂಡಲಗಿ ಜೂ.30: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡಲು ನೆರವಾಗಿದೆ. ಆದರೆ ಇಂದು ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕಾದ ವಿಶ್ವ ವಿದ್ಯಾಲಯ ಪ್ರವೇಶ ಶುಲ್ಕ ಹೆಚ್ಚಳ ಮಾಡುವುದರ ಮೂಲಕ ವಿದ್ಯಾರ್ಥಿಗಳ ವಿರೋಧಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಖಂಡನೀಯ ಎಂದು ಎಬಿವಿಪಿ ತಾಲೂಕಾ ನಗರ ಕಾರ್ಯದರ್ಶಿ ಗಿರೀಶ್ ಬಳಿಗಾರ ಹೇಳಿದರು.

ಗುರುವಾರದಂದು ಪಟ್ಟಣದ ನೂರಾರು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡುತ್ತ, ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ, ಮಾನ್ಯ ತಹಶೀಲ್ದಾರ ಮುಖಾಂತರ ಮನವಿ ಪತ್ರ ಸಲ್ಲಿಸುವ ಸಂಧರ್ಭದಲ್ಲಿ ಮಾತನಾಡಿದ ಅವರು, ಯುಜಿಸಿ ನಿಯಮದ ಪ್ರಕಾರ ಒಂದು ವರ್ಷಕ್ಕೆ ಅವಶ್ಯ ಇದ್ದಲ್ಲಿ ಕೇವಲ ಶೇ.10 ರಷ್ಟು ಮಾತ್ರ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹೆಚ್ಚಳ ಮಾಡಲು ಸೂಚನೆ ಇದೆ, ಆದರೆ ಯುಜಿಸಿ ನಿಯಮ ಗಾಳಿಗೆ ತೂರಿ ಶೇ.100 ಕ್ಕಿಂತಲೂ ಹೆಚ್ಚಿಗೆ ಮಾಡಿರುವುದು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದೆ ಎಂದರು.

ನಂತರ ಮಾತನಾಡಿದ ಎಸ್.ಎಫ್.ಡಿ ಪ್ರಮುಖರಾದ ಮಹಾದೇವ ನವಣಿ, ಕರೋನ ಹಾಗೂ ನೆರೆ ಹಾವಳಿಯಂತಹ ಸಂದಿಗ್ಧ ಸ್ಥಿತಿಯಲ್ಲಿ ಇಲ್ಲಿಯ ಜನತೆ, ಜೀವನ ಸಾಗಿಸುವುದು ಕಷ್ಟಕರವಾಗಿರುವ ಸಂದರ್ಭದಲ್ಲಿ ಏಕಾ ಏಕಿ ಈ ರೀತಿಯ ಶುಲ್ಕವನ್ನು ಹೆಚ್ಚಳ ಮಾಡಿರುವುದು ಖಂಡನೀಯ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಈ ಪ್ರವೇಶಾತಿ ಶುಲ್ಕ ಹೆಚ್ಚಳ ಕ್ರಮವನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ಎಬಿವಿಪಿ ಕರೆ ನೀಡಲಾಗುವುದು, ಮುಂದಿನ ಎಲ್ಲದಕ್ಕು ವಿಶ್ವ ವಿದ್ಯಾನಿಲಯವೇ ನೇರ ಕಾರಣವಾಗುತ್ತದೆ ಎಂದು ಎಬಿವಿಪಿ ಎಚ್ಚರಿಸುತ್ತದೆ ಎಂದರು.

ಈ ಸಂಧರ್ಭದಲ್ಲಿ ಎಬಿವಿಪಿ ಪ್ರಮುಖರಾದ ಮಲ್ಲಿಕಾರ್ಜುನ ಮುಕುಂದ, ಬಸು ಜೋಡಟ್ಟಿ, ಶಿವು ಸರಪನಿ, ಬಸವರಾಜ ಕೋಣಿ, ನಿಂಗಪ್ಪ ಲಿಂಗನೂರು,ಗುರು ಹಿರೇಮಠ, ಸಿದ್ದು ಬೆಳಕೂಡ,ಅರ್ಪಿತಾ ಮಳವಾಡ ಸೇರಿದಂತೆ ಅನೇಕ ವಿದ್ಯಾಥಿಗಳು ಉಪಸ್ಥಿತರಿದ್ದರು.

You might also like
Leave a comment