ಮೂಡಲಗಿ: ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ ನಗರದ ಕಲ್ಮೇಶ್ವರ ಸರ್ಕಲ್ನಲ್ಲಿ ಜಮಾಯಿಸಿದ ರೈತ ಮುಖಂಡರು, ಕಾರ್ಯಕರ್ತರು ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಂಗ್, ರೈತರ ಯೋಜನೆಗಳನ್ನು ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಜನವಿರೋಧಿ ನಡೆ ಖಂಡಿಸಿ ಸೆ.8ರಂದು ರಾಜ್ಯಾದ್ಯಂತ ತಾಲೂಕಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೂಡಲಗಿ ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಕಾಶ ಮಾದರ, ಬಸವರಾಜ ಹಿಡಕಲ್, ಶ್ರೀಶೈಲ ಪೂಜೇರಿ, ಡಾ. ಬಿ.ಎಂ ಪಾಲಭಾಂವಿ, ಮಹಾಲಿಂಗ ವಂಟಗೂಡೆ, ಈಶ್ವರ ಮುರಗೋಡ, ಮಲ್ಲಪ್ಪ ನೇಮಗೌಡರ, ಸುರೇಶ ಸಣ್ಣಕ್ಕಿ, ಬಸನಗೌಡ ಪಾಟೀಲ, ಸಿದ್ದಪ್ಪ ಬಿಸಗುಪ್ಪಿ, ಗೌಡಪ್ಪ ಕೊಟಗಿ, ಸುರೇಶ ಈರೇಶನವರ, ಬಸವರಾಜ ನಿಡಗುಂದಿ, ಮಂಡಲ ಪದಾಧಿಕಾರಿಗಳಾದ ಶ್ರೀಕಾಂತ ಕೌಜಲಗಿ, ಬಸವರಾಜ ಗಾಡವಿ, ಸುರೇಶ ಮಠಪತಿ, ಮಹಾದೇವ ಮಸರಗುಪ್ಪಿ, ಪ್ರಭು ಹಿರೇಮಠ, ಅಡಿವೆಪ್ಪ ಕುರಬೇಟ ಸೇರಿದಂತೆ ರೈತರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.