This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ತಹಶೀಲ್ದಾರ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ


ಚನ್ನಮ್ಮನ ಕಿತ್ತೂರು ನ., ೦೪- ತಾಲೂಕಿನ ತಹಸೀಲ್ದಾರ ಸೋಮಲಿಂಗಪ್ಪ ಹಾಲಗಿ ಅವರು ಭೂಮಿಯನ್ನು ಹಂಚುವಲ್ಲಿ ಮಲತಾಯಿ ಧೋರಣೆ ಅನುಸರಿಸಿದ್ದಾರೆ ಎಂದು ಖೋದಾನಪೂರ ಗ್ರಾಮದ ರಾಜ್ಯ ಭೀಮಸೇನಾ ಸಮೀತಿಯ ಕೃಷಿ ಕಾರ್ಮಿಕರು ಕಂದಾಯ ಇಲಾಖೆ ಸಚಿವ ಆರ್. ಅಶೋಕ ಅವರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
ಸಚಿವರು ಶುಕ್ರವಾರ ಕಿತ್ತೂರು ಕೋಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯ ಭೀಮ ಸೇನಾ ಸಮೀತಿ ರಾಜ್ಯಾದ್ಯಕ್ಷರಾದ ಬಿ ಡಿ ಮಾದಾರ ಅವರು ಸಚಿವರಲ್ಲಿ ವಿನಂತಿಸುತ್ತ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಮಾತನಾಡುತ್ತ, ಖೋದಾನಪೂರ ಗ್ರಾಮದಲ್ಲಿನ ರಿ ಸ ನಂಬರ್ ೭೧, ೫೭,೫೯,೭೮,೭೯,೭೭,೮೧,೬೧,೭೩ ರ ಜಮಿನುಗಳಲ್ಲಿ ದಲಿತ ಸಮಾಜದ ಸುಮಾರು ೧೦೦ ಕ್ಕಿಂತ ಹೆಚ್ಚು ಭೂರಹಿತ ಕೃಷಿ ಕಾರ್ಮಿಕರು ಸಾಗುವಳಿ ಮಾಡುತ್ತಿದ್ದಾರೆ. ಈ ಭೂಮಿಯನ್ನು ಬಗರಹುಕುಂ ಸಾಗುವಳಿ ಜಮೀನು ಅಂತಾ ಮಂಜೂರು ಮಾಡುವಂತೆ ಕೋರಿ ನಮೂನೆ ನಂ ೫೭ ರಲ್ಲಿ ಅರ್ಜಿಗಳನ್ನು ಅನೇಕ ವರ್ಷಗಳ ಹಿಂದೆಯೇ ಸಲ್ಲಿಸಿದ್ದರೂ ಇನ್ನೂವರೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ನಮ್ಮಂತೆಯೇ ಕುಲವಳ್ಳಿ ಗ್ರಾಮದ ಜನರು ಅರ್ಜಿಗಳನ್ನು ತುಂಬಿ ಕೊಟ್ಟಿದ್ದು ಅವರಿಗೆ ಮಾತ್ರ ತಹಸೀಲ್ದಾರ ಕಚೇರಿಯಿಂದ ಪಿ ಟಿ ಶೀಟನ್ನು ತಯಾರಿಸಿ ಕೊಡಲಾಗಿದೆ. ಈ ಪೀಟಿ ಶೀಟ್ ಆಧಾರದ ಮೇಲೆ ಕುಲವಳ್ಳಿ ಗ್ರಾಮದ ರೈತರು ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ಡಬ್ಲ್ಯೂಪಿ ನಂ ೧೦೦೪೭೫\೨೦೨೨ ರ ಅಡಿಯಲ್ಲಿ ದಾವೆಯನ್ನು ಹೂಡಿದ್ದು ಸದರಿ ದಾವೆಯಲ್ಲಿ ನ್ಯಾಯಾಲಯವು ರೈತರು ಸಾಗುವಳಿ ಮಾಡಿದ ಜಮೀನನ್ನು ಪಿಟ ಶೀಟ್ ಆಧಾರದ ಮೇಲೆ ಮಂಜೂರು ಮಾಡುವಂತೆ ಆದೇಶ ಮಾಡಿರುತ್ತಾರೆ. ಈ ಪ್ರಕರಣದಲ್ಲಿ ಸ್ವತಃ ತಹಸೀಲ್ದಾರ ಅವರೇ ಪಕ್ಷಗಾರರಾಗಿದ್ದಾರೆ. ಕುಲವಳ್ಳಿ ರೈತರಿಗೆ ಮಾತ್ರ ಪಿಟಿ ಶೀಟ್ ನೀಡಿದ ತಹಸೀಲ್ದಾರ ಸೋಮಲಿಂಗಪ್ಪ ಹಾಲಗಿ ಅವರು ಖೋದಾನಪೂರ ಗ್ರಾಮದ ಬಡ ದಲಿತ ಕೃಷಿಕರಿಗೆ ಪಿಟಿ ಶೀಟ್ ನೀಡುತ್ತಿಲ್ಲ. ಕುಲವಳ್ಳಿ ಗ್ರಾಮ ಹಾಗೂ ಖೊದಾನಪೂರ ಗ್ರಾಮ ಎರಡೂ ಕಿತ್ತೂರು ತಾಲೂಕಿನಲ್ಲಿಯೇ ಬರುತ್ತಿದ್ದು ತಹಸೀಲ್ದಾರರು ಒಂದು ಕಣ್ಣಿಗೆ ಬಣ್ಣ ಇನ್ನೊಂದು ಕಣ್ಣಿಗೆ ಸುಣ್ಣ ಬಳಿಯುತ್ತಿರುವ ಹಿಂದಿನ ರಹಸ್ಯ ಏನು ಎಂಬುದು ಹೊರಬೀಳಬೇಕು. ಅಧಿಕಾರಿಗಳು ಕೂಡಲೆ ನಮಗೆ ಭೂಮಿ ಒದಗಿಸುವ ವ್ಯವಸ್ಥೆ ಮಾಡದಿದ್ದರೆ ತಹಸೀಲ್ದಾರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಪ್ರತಿಭಟನೆ ಆರಂಭಿಸಲಾವುದು. ಕಾರಣ ಕೂಡಲೇ ಮಾನ್ಯ ಸಚಿವರು ತಹಸೀಲ್ದಾರ ಅವರಿಗೆ ವಾಸ್ತವತೆಯ ಅರಿವನ್ನು ಮಾಡಿಕೊಟ್ಟು ನಮಗೆ ನ್ಯಾಯ ಒದಗಿಸಬೇಕು ಎಂದು ವಿನಂತಿಸಿದರು.

ಇದಕ್ಕೂ ಮುನ್ನ ಸಚಿವರು ಭೀಮ ಸೇನಾ ಸಮೀತಿಯ ಸದಸ್ಯರ ಮನವಿ ಸ್ವೀಕರಿಸಲು ವೇಳೆ ಅಭಾವದಿಂದ ನಿರಾಕರಿಸಿ ಹೊರಟಾಗ ಸಿಟ್ಟಿಗೆದ್ದ ಮಹಿಳೆಯರು ರಸ್ತೆಯಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸಿ ಸಚಿವರ ವಾಹನ ಚಲಿಸಲು ಅಡ್ಡಿಪಡಿಸಿದರು. ಅನಿವಾರ್ಯವಾಗಿ ವಾಹನದಿಂದ ಕೆಳಗಿಳಿದ ಸಚಿವರು ರೈತರ ಅಹವಾಲನ್ನು ಸ್ವೀಕರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಂತರ ಜನರು ಸಚಿವರ ವಾಹನಕ್ಕೆ ದಾರಿ ಮಾಡಿಕೊಟ್ಟರು.
ಇದಕ್ಕೂ ಮುನ್ನ ಚನ್ನಮ್ಮಾಜಿ ಕೋಟೆಯಿಂದ ತಹಸೀಲ್ದಾರ ಕಚೇರಿಯವರೆಗೆ ತಮಟೆಯನ್ನು ಬಾರಿಸುತ್ತ ಮೆರವಣಿಗೆ ಮುಖಾಂತರ ತೆರಳಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಎಚ್ ಎನ್ ಪೂಜಾರ, ಕರೆಪ್ಪ ಉಡಿಕೇರಿ, ವಿಠ್ಠಲ ಹರಿಜನ, ದುರ್ಗಪ್ಪ ಉಡಿಕೇರಿ, ವಾಯ್ ಎಮ್ ತಳವಾರ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Leave a Reply