ಮೃಣಾಲ್ ಪರ ಸಚಿವೆ ಹೆಬ್ಬಾಳ್ಕರ್ ಭಾರೀ ಪ್ರಚಾರ: ಮಗನ ಗೆಲುವಿಗೆ ಟೆಂಪಲ್ ರನ್ 

Ravi Talawar
WhatsApp Group Join Now
Telegram Group Join Now

ಬೆಳಗಾವಿ,ಮಾ28: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಗೋಕಾಕ ತಾಲೂಕಿನ ಅಂಕಲಗಿಯ ಶ್ರೀ ಅಡವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ದರ್ಶನ ಪಡೆದು ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಗರದಲ್ಲಿ ಪ್ರಚಾರಕ್ಕೆ ಇಳಿದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಪರ ಪ್ರಚಾರ ಕೈಗೊಂಡ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳಿದರು.

ಸಿದ್ದರಾಮಯ್ಯ ಸರ್ಕಾರ ಬಡವರ ಪರವಾಗಿ ಕಾರ್ಯಕ್ರಮಗಳನ್ನು ತಂದಿದೆ. ಇವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ನಂತರದಲ್ಲಿ ಶ್ರೀಕ್ಷೇತ್ರ ತವಗಮಠಕ್ಕೆ ತೆರಳಿ ಶ್ರೀ ಸದ್ಗುರು ಬಾಳಯ್ಯ ಮಹಾಸ್ವಾಮಿಗಳ ಕರ್ತೃ ಸ್ಥಾಪಿತ ನುಡಿ ಗದ್ದುಗೆಗೆ ಗೌರವ ನಮನ ಸಲ್ಲಿಸಿ,‌ ಶ್ರೀ ನಿರುಪಾದೀಶ್ವರ ಅಜ್ಜನವರ ಆಶೀರ್ವಾದ ಪಡೆದರು. ಬಳಿಕ ನಗರದ ಶ್ರೀ ಲಕ್ಷ್ಮೀ ದೇವಿ ಮಂದಿರಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಆಶೀರ್ವಾದ ಪಡೆದು, ನಾಡಿನ ಸುಭೀಕ್ಷೆಗಾಗಿ ಪ್ರಾರ್ಥಿಸಿದರು.

ಈ ಸಮಯದಲ್ಲಿ ಮೃಣಾಲ್ ಹೆಬ್ಬಾಳ್ಕರ್, ಸ್ಥಳೀಯ ಕಾಂಗ್ರೆಸ್ ಮುಖಂಡರು, ಪಕ್ಷದ ಕಾರ್ಯಕರ್ತರು, ಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article