ಭಾರತ-ಚೀನಾ ಗಡಿ ಪರಿಸ್ಥಿತಿಯತ್ತ ತುರ್ತಾಗಿ ಗಮನ: ಪ್ರಧಾನಿ ಮೋದಿ ಅಚ್ಚರಿಯ ಹೇಳಿಕೆ

Ravi Talawar
WhatsApp Group Join Now
Telegram Group Join Now

ನವದೆಹಲಿ,ಏಪ್ರಿಲ್ 11: ಭಾರತ-ಚೀನಾ ಗಡಿ ಪರಿಸ್ಥಿತಿಯತ್ತ ತುರ್ತಾಗಿ ಗಮನ ಹರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ದ್ವಿಪಕ್ಷೀಯ ಸಂವಹನಗಳಲ್ಲಿ ಅಸಹಜತೆಗಳನ್ನು ನಿವಾರಿಸುವುದಕ್ಕಾಗಿ ಗಡಿ ಪರಿಸ್ಥಿತಿಯತ್ತ ಗಮನಹರಿಸಬೇಕು ಎಂದು ಮೋದಿ ಹೇಳಿದ್ದಾರೆ.

ಉಭಯ ದೇಶಗಳು ಮುಖ್ಯವಾದ ಸಂಬಂಧಗಳನ್ನು ಹೊಂದಿವೆ ಎಂದಿರುವ ಪ್ರಧಾನಿ, ಇಡೀ ಜಗತ್ತಿಗೆ ಭಾರತ-ಚೀನಾದ ಸ್ಥಿರ ಸಂಬಂಧಗಳು ಮುಖ್ಯವಾಗಿರುತ್ತದೆ ಎಂದು ಅಮೇರಿಕಾದ ನ್ಯೂಸ್ ವೀಕ್ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಸಕಾರಾತ್ಮಕ ಮಾತುಕತೆ ಮೂಲಕ ಉಭಯ ದೇಶಗಳು ತನ್ನ ಗಡಿಯಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಮೋದಿ ಇದೇ ವೇಳೆ ಆಶಿಸಿದ್ದಾರೆ. 2020 ರಲ್ಲಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ತಮ್ಮ ಸೈನಿಕರ ನಡುವಿನ ಘರ್ಷಣೆಯ ನಂತರ ಭಾರತ-ಚೀನಾ ಸಂಬಂಧಗಳು ಹದಗೆಟ್ಟಿದೆ. ಘರ್ಷಣೆಯಲ್ಲಿ ಸುಮಾರು 20 ಭಾರತೀಯ ಸೈನಿಕರು ಕೊಲ್ಲಲ್ಪಟ್ಟರು, ಚೀನಾ ಅನಿರ್ದಿಷ್ಟ ಸಂಖ್ಯೆಯ ಸಾವುನೋವುಗಳನ್ನು ಎದುರಿಸಿತ್ತು ಈ ಬಳಿಕ ಉನ್ನತ ಮಟ್ಟದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ನಡೆದಿತ್ತು.
WhatsApp Group Join Now
Telegram Group Join Now
Share This Article